ಸರ್ವ ಜನಾಂಗದ ಶಾಂತಿಯ ತೋಟ ಸಾಲಿಗೆ ಕತ್ತರಿ, ಎಸ್.ಎಫ್.ಐ ಖಂಡನೆ

ಈ ನೆಲದ ವೈಚಾರಿಕ ಚಿಂತಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುವೆಂಪು ರವರಿಂದ ರಚಿತವಾದ, ಕನಾಟಕದ ಶಾಂತಿ ಸೌಹಾರ್ದತೆಯ ಪ್ರತೀಕವಾದ ನಾಡಗೀತೆಯಲ್ಲಿನ ಪ್ರಮುಖ ಸಾಲು, ಸರ್ವ ಜನಾಂಗದ ಶಾಂತಿಯ ತೋಟ ಎಂಬುವ ಈ ನೆಲದ ಸಂಸ್ಕೃತಿಯನ್ನು ಬಿಂಬಿಸುವ   ಸಾಲನ್ನು ಕಡಿತಗೊಳಿಸಿ ಕೆ.ವೈ ಮುದ್ದುಕೃಷ್ಣ ಸಮಿತಿಯು ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಿರುವುದನ್ನು  ಭಾರತ ವಿದ್ಯಾರ್ಥಿ ಫೆಡರೆಷನ್ (ಎಸ್.ಎಫ್.ಐ) ಕನಾಟಕ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.

ಕುವೆಂಪು ಅವರ ಮೂಲ ಆಶಯವೂ ಕೂಡ ಈ ಸಾಲಿನಲ್ಲಿದೆ ಎಂಬುವುದನ್ನು ಮುದ್ದುಕೃಷ್ಣ ಸಮಿತಿಯು ಮರೆತಿರುವುದು ಖೇದಕರವಾದುದು.  ನಾಡಗೀತೆಯು ವಿದ್ಯಾರ್ಥಿಗಳಲ್ಲಿ ಈ ನೆಲದ ಸಾಂಸ್ಕೃತಿಕ ಹಿರಿಮೆಯನ್ನು ಹಾಗೂ ಸಾಂವಿಧಾನಿಕ ಆಶಯವಾದ ಪ್ರಜೆಗಳಲ್ಲೆರೂ ಸಮಾನರೆನ್ನುವ ತಿಳುವಳಿಕೆಯನ್ನು ಮೂಡಿಸುವಂತಿದೆ. ಈ ಸಾಲುಗಳನ್ನು ತೆಗೆದು ಹಾಕುವಂತೆ ಮಾಡಿರುವ ಶಿಫಾರಸ್ಸನ್ನು ರಾಜ್ಯ ಸರಕಾರ ಮಾನ್ಯತೆ ನೀಡದೆ ತಿರಸ್ಕರಿಸಬೇಕು. ಯಾವುದೇ ಕಾರಣಕ್ಕೂ ಈ ಶಿಫಾರಸ್ಸನ್ನು ಅಂಗೀಕಾರಕ್ಕೆ ಮುಂದಾಗಬಾರದು. ಈ ವಿಷಯಕ್ಕೆ ರಾಜ್ಯದ ಪ್ರಗತಿಪರ ಬುದ್ದೀಜೀವಿಗಳು ಧ್ವನಿ ಎತ್ತಿ ಒಕ್ಕೊರಲಿನಿಂದ ವಿರೋದಿಬೇಕಿದೆ. ಒಂದು ವೇಳೆ ಈ ಸಾಲುಗಳನ್ನು ಕಡಿತಗೊಳಿಸಲು ಮುಂದಾದರೆ ವಿದ್ಯಾರ್ಥಿಗಳು ಸಾಹಿತಿಗಳು, ಶಿಕ್ಷಕ-ಉಪನ್ಯಾಸಕರು ರಾಜ್ಯ ಸರಕಾರದ ವಿರುದ್ಧ ತೀವ್ರತೆರನಾದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆಂದು ಭಾರತ ವಿದ್ಯಾರ್ಥಿ ಫೆಡರೆಷನ್ (ಎಸ್.ಎಫ್.ಐ) ಕನಾಟಕ ಜಿಲ್ಲಾ ಸಮಿತಿಯು ಒತ್ತಾಯಿಸಿದೆ

Related posts

Leave a Comment