ಹಂಪಿಯಲ್ಲಿ ಸಾಂಸ್ಕೃತಿಕೋತ್ಸವ

ಹೊಸಪೇಟೆ: ಹಂಪಿಯಲ್ಲಿ ಜಾತ್ರೆ ಪ್ರಯುಕ್ತ ಇದೇ ದಿ.೪ ಹಾಗೂ ೫ರಂದು ವಿರೂಪಾಕ್ಷ ದೇವಾಲಯದ ಆವರಣದಲ್ಲಿ ಕಡ್ಡಿರಾಂಪುರದ ಮರಿದೇವರ ಸಂಗೀತ ಸಾಂಸ್ಕೃತಿಕ ಕಲಾವೃಂದ ಸಾಂಸ್ಕೃತಿಕೋತ್ಸವ ನಡೆಸಿತು.
ಕನ್ನಡ ಸಂಸ್ಕೃತಿ ಇಲಾಖೆಯ ನೆರವಿನೊಂದಿಗೆ ನಡೆದ ಈ ಸಾಂಸ್ಕೃತಿಕೋತ್ಸವದ ಅಧ್ಯಕ್ಷತೆಯನ್ನು ಹಿಂದೂಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಸ್.ಪಿ.ಬಿ. ಮಹೇಶ್ ವಹಿಸಿದ್ದರು. ಸಮಾರಂಭದ ಸಾನಿಧ್ಯವನ್ನು ವಿರೂಪಾಕ್ಷ ಸ್ವಾಮಿ ದೇವಸ್ಥಾನದ ವಿದ್ಯಾರಣ್ಯ ಪೀಠದ ವಿದ್ಯಾರಣ್ಯ ಸ್ವಾಮೀಜಿ ವಹಿಸಿದ್ದರು. ಕರ್ನಾಟಕ ಸಂಗೀತ ನೃತ್ಯ ಆಕಾಡೆಮಿ ಸದಸ್ಯ ಬಸವರಾಜ ಜೆ. ಬಂಟನೂರು ಹಿಂದೂಸ್ತಾನಿ ಗಾಯನ ನಡೆಸಿಕೊಟ್ಟರು. ಆಕಾಶವಾಣಿ ಕಲಾವಿದೆ ನೀಲಾಲೋಚನ ಶೀಲವಂತರ್ ಇವರಿಂದ ಗಾಯನ ಕೇಶವರಾಜ್ ಇವರಿಂದ ಕೊಳಲು ವಾದನ, ಹಗರಿಬೊಮ್ಮನಹಳ್ಳಿಯ ಎಸ್.ಎಸ್.ಎಂ. ಹಿರೇಮಠ ಶಿಷ್ಯವೃಂದವರಿಂದ ದಾಸರ ಪದಗಳು, ಮಲಪನಗುಡಿ ದಾಸರ ಎಲ್ಲಪ್ಪ ತಂಡದವರಿಂದ ತತ್ವ ಪದಗಳು, ಸ್ವರ್ಣಮುಖಿ ಭರತನಾಟ್ಯ ಕಾಲಸಂಸ್ಥೆಯಿಂದ ಭರತನಾಟ್ಯ, ಅಲ್ಲಾಭಕ್ಷಿ ತಂಡದಿಂದ ಜಾನಪದ ನೃತ್ಯ, ಕುಮಾರಿ ಶಾಂಭವಿ ಇವರಿಂದ ಸುಗಮ ಸಂಗೀತ, ಉತ್ತರಕನ್ನಡ ಜಿಲ್ಲೆಯ ಕುಮಟಾದ ಭಾರ್ಗವರಾವ್ ಇವರಿಂದ ಕೊಳಲು ವಾದನ ಪ್ರಸ್ತುತ ಪಡೆಸಿದರು. ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯ್ತಿ ಸದಸ್ಯ ಎಲ್. ಭೀಮಾನಾಯ್ಕ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಉದ್ದಾನಪ್ಪ, ವಿರೂಪಾಕ್ಷೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಹೆಚ್. ಪ್ರಕಾಶ ರಾವ್, ಮೋಹನ ಚಿಕ್ಕಭಟ್ ಜೋಷಿ, ಮಾರುತಿ ಕಣವಿ, ವಿ.ಎಲ್ಲಪ್ಪ, ಪಿ.ರಾಘವೇಂದ್ರಶೆಟ್ಟಿ, ಹಾಜರಿದ್ದರು. ಪ್ರಾಸ್ತಾವಿಕವಾಗಿ ಕಲಾವೃಂದದ ಅಂಗಡಿ ವಾಮದೇವ ಮಾತನಾಡಿದರು. ಕೆ.ಪಂಪನಗೌಡ ಸ್ವಾಗತಿಸಿದರು. ರಶ್ಮಿ ಪ್ರಕಾಶ ನಿರೂಪಿಸಿದರು. 

Leave a Reply