ಗ್ರಾ.ಪಂ. ಚುನಾವಣೆ : ೩೪೮೬ ನಾಮಪತ್ರ ಸಲ್ಲಿಕೆ

  ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮೇ. ೨೦ ಬುಧವಾರದಂದು ಜಿಲ್ಲೆಯಲ್ಲಿ  ಒಟ್ಟು ೩೪೮೬ ನಾಮಪತ್ರಗಳು ಸಲ್ಲಿಕೆಯಾಗಿವೆ.  
  ಕೊಪ್ಪಳ ತಾಲೂಕಿನಲ್ಲಿ ೯೪೫ ನಾಮಪತ್ರಗಳು ಸಲ್ಲಿಕೆಯಾಗಿದ್ದು, ಗಂಗಾವತಿ ತಾಲೂಕಿನಲ್ಲಿ  ೧೦೩೭ ನಾಮಪತ್ರಗಳು.  ಕುಷ್ಟಗಿ ತಾಲೂಕಿನಲ್ಲಿ ೭೮೪ ಹಾಗೂ ಯಲಬುರ್ಗಾ ತಾಲೂಕಿನಲ್ಲಿ ೭೨೦ ಜನ ನಾಮಪತ್ರ ಸಲ್ಲಿಸಿದ್ದಾರೆ.  ಜಿಲ್ಲೆಯಲ್ಲಿ ಸಲ್ಲಿಸಲಾಗಿರುವ ನಾಮಪತ್ರಗಳ ಪೈಕಿ ಪ.ಜಾತಿ-೬೭೯, ಪ.ಪಂಗಡ-೫೩೫, ಹಿಂದುಳಿದ ಅ ವರ್ಗ-೪೦೬, ಹಿಂದುಳಿದ ಬ ವರ್ಗ-೯೦ ಹಾಗೂ ಸಾಮಾನ್ಯ ವರ್ಗದ-೧೭೭೬ ನಾಮಪತ್ರಗಳು ಸಲ್ಲಿಕೆಯಾಗಿವೆ.  ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ, ಈವರೆಗೆ ಒಟ್ಟು ೫೪೮೭ ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ.  ನಾಮಪತ್ರ ಸಲ್ಲಿಕೆಗೆ ಮೇ. ೨೨ ಕೊನೆಯ ದಿನಾಂಕವಾಗಿದೆ .
Please follow and like us:
error