ನಟ ಶ್ರೀಕಾಂತ ಹುಟ್ಟುಹಬ್ಬ ನಿಮಿತ್ಯ ಆರೋಗ್ಯ ಶಿಬಿರ

ದೂರವಾಣಿ ಮೂಲಕ ಸಭಿಕರಿಗೆ ಶುಭಕೋರಿ ಸಂತಸ
ಕೊಪ್ಪಳ, ಮಾ. ೨೩. ಕೊಪ್ಪಳದ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ, ಯುವಚೇತನ ಶ್ರೀ ಶಿವರಾಜ ತಂಗಡಗಿ ಅಭಿಮಾನಿಗಳ ವೇದಿಕೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಳ್ಳಿ ಮಂಡಲ ಹಾಗೂ ಬ್ಲ್ಯೂಸ್ಟಾರ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಗಳ ಆಶ್ರಯದಲ್ಲಿ ತೆಲುಗು ಚಿತ್ರರಂಗದ ಸೂಪರಸ್ಟಾರ್ ಮೆಕಾ ಶ್ರೀಕಾಂತರವರ ೪೭ ನೇ ಹುಟ್ಟುಹಬ್ಬ ನಿಮಿತ್ಯ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಮತ್ತು ದಂತ ಚಿಕಿತ್ಸೆ ಶಿಬಿರ ಯಶಸ್ವಿಯಾಯಿತು.
ನಗರದ ಭಾಗ್ಯನಗರ ರಸ್ತೆಯ ಶ್ರೀ ತಾಯಮ್ಮದೇವಿ ದೇವಸ್ಥಾನದ ಎದುರುಗಡೆ ಇರುವ ಬಾಲಕರ ಬಾಲಮಂದಿರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಮೆಕಾ ಶ್ರೀಕಾಂತರ ಚಿಕ್ಕಮ್ಮ ಶಾಂತಕುಮಾರಿ ಉದ್ಘಾಟಿಸಿ ಅತೀವ ಸಂತೋಷ ವ್ಯಕ್ತಪಡಿಸಿದರು. ದೂರದ ಊರಿನಲ್ಲಿರುವ ನಮ್ಮ ಮಗನ ಹುಟ್ಟುಹಬ್ಬವನ್ನು ಅನಾಥ ನಿರ್ಗತಿಕ ಮಕ್ಕಳ ಜೊತೆ ಆಚರಿಸುತ್ತಿರುವದು ಸಂತೋಷ ತಂದಿದೆ ಎಂದರು. ಈ ಸಂದರ್ಭದಲ್ಲಿ ದೂರವಾಣಿ ಮೂಲಕ ಮಾತನಾಡಿದ ನಟ ಶ್ರೀಕಾಂತ ಕಾರ್ಯಕ್ರಮ ಸಂಘಟನೆ ಮಾಡಿ ಮಕ್ಕಳಿಗೆ ಸಹಾಯ ಮಾಡುತ್ತಿರುವದು ಸಂತೋಷವಾಗಿದೆ, ಕೊಪ್ಪಳಕ್ಕೆ ಬಂದು ಎಲ್ಲರನ್ನು ಭೇಟಿಮಾಡುವದಾಗಿ ತಿಳಿಸಿದ ಅವರು ದೂರವಾಣೀಯಲ್ಲಿ ಮೈಕ್ ಮೂಲಕ ಸಭಿಕರಿಗೆ ಶುಭಕೋರಿ ಸಂತಸ ಹಂಚಿಕೊಂಡರು.
ವಿನೂತನ ಶಿಕ್ಷಣ ಸೇವಾ ಸಂಸ್ಥೆ ಅಧ್ಯಕ್ಷ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ, ಗೊಂಡಬಾಳ ಹಮ್ಮಿಕೊಂಡಿರುವ ಕಾರ್ಯಕ್ರಮ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ, ಚಲನಚಿತ್ರ ಕಲಾವಿದರೂ ಸಹ ಸಾರ್ವಜನಿಕ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಹೊಮದಲು ಈ ತರಹದ ಕೆಲಸ ಸ್ಪೂರ್ತಿದಾಯಕ ಎಂದ ಅವರು ಕೊಪ್ಪಳ ಕಲೆಗಳ ಹಾಗು ಕಲಾವಿದರ ತವರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 
ಬಾಲಕಿಯರ ಹಾಗೂ ಬಾಲಕರ ಬಾಲ ಮಂದಿರದ ನೂರಾರು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ನಗರದ ಶಿಫಾ  ಹೋಮಿಯೋಪಥಿ ಹಾಗೂ ದಂತ ಚಿಕಿತ್ಸಾಲಯ ಹಾಗೂ ಶ್ರೀ ಅನ್ನದಾನೇಶ್ವರ ಕ್ಲಿನಿಕ್ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ದಂತ ಚಿಕಿತ್ಸೆ ಹಮ್ಮಿಕೊಳ್ಳಲಾಗಿತ್ತು. ಮಹಿಳಾ ಮತ್ತು ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.   
ಕಾರ್ಯಕ್ರಮ ಆಯೋಜಿಸಿದ್ದ ಬೆಳ್ಳಿಮಂಡಲ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಮನೆಯ ಹುಡುಗು ನೆರೆಯ ರಾಜ್ಯದಲ್ಲಿ ಬೆಳೆದಿರುವದು ನಮಗೆ ಹೆಮ್ಮೆಯ ಸಂಗತಿ ಬರುವ ದಿನಗಳಲ್ಲಿ ಶ್ರೀಕಾಂತರು ಕೊಪ್ಪಳ ಜಿಲ್ಲೆಯ ಜನರೊಂದಿಗೆ ಬೆರೆಯುವ ವಿನೂತನ ಕಾರ್ಯಮಾಡಲಾಗುವದು ಎಂದರು. ವೈದ್ಯರಾದ ಡಾ|| ಜಾಸ್ಮಿನ್ ರಾಜೂರ, ಡಾ|| ಎಸ್. ಕೆ. ರಾಜೂರ ಹಾಗೂ ಡಾ|| ಶ್ರೀನಿವಾಸ ಹ್ಯಾಟಿಯವರು ಹಾಗೂ ಡಾ|| ತಬಸ್ಸುಮ್ ಚಿಕಿತ್ಸೆ ನೀಡಿದರು. ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮಹಾಲಿಂಗಪ್ಪ ದೋಟಿಹಾಳ, ನಟರಾದ ಬಸವರಾಜ ಮಾಲಗಿತ್ತಿ, ಬಸವರಾಜ ಕೊಪ್ಪಳ ಡಾ|| ಸಿದ್ದಲಿಂಗಪ್ಪ ಕೊಟ್ನೆಕಲ್, ಶ್ರೀಕಾಂತ ರಾಜನಾಳ, ಮಕ್ಕಳ ರಕ್ಷಣಾಧಿಕಾರಿ ಮುನಿರಾಜು, ಅಧೀಕ್ಷಕ ವಿಮಲಪ್ಪ, ಶಿವಾನಂದ ಹೊದ್ಲೂರ ಇತರರು ಭಾಗವಹಿಸಿದ್ದರು.

Leave a Reply