ಕರ್ನಾಟಕ ರಾಜ್ಯ ನಿವೇಶನ ರಹಿತರ ಹೋರಾಟ ಸಮಿತಿಯ ಬೃಹತ್ ಪ್ರತಿಭಟನಾ ಮೆರವಣಿಗೆ

ಕರ್ನಾಟಕ ರಾಜ್ಯ ನಿವೇಶನ ರಹಿತರ ಹೋರಾಟ ಸಮಿತಿಯು ಕೊಪ್ಪಳ ನಗರದಲ್ಲಿ ಇಂದು ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಅಮ್ಮಿಕೊಳ್ಳಲಾಗಿತ್ತು. ನಗರದ ಈಶ್ವರ ಉಧ್ಯಾನವನದಿಂದ ನೂರಾರು ಸಂಖ್ಯೆಯಲ್ಲಿ ವಿವಿಧ ಬಢಾವಣೆಗಳಿಂದ ಬಂದ ಮಹಿಳೆಯರು, ಸಾರ್ವಜನಿಕರು ಮತ್ತು ನಿವೇಶನ ರಹಿತರು  ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿದರು.
         ನಂತರ ಇದೆ ಪ್ರತಿಭಟನಾ ಮೆರವಣಿಗೆಯೂ ಪ್ರತಿಭಟನಾ ಸಭೆಯಾಗಿ ರೂಪಗೋಂಡಿತು. ಈ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ನಿವೇಶನ ರಹಿತರ ಹೋರಾಟ ಸಮಿತಿಯ ರಾಜ್ಯ ಸಂಚಾಲಕರಾದ ನಾಗರಾಜ ಗುರಿಕಾರರವರು ಮಾತನಾಡಿ,  ಹಲವು ದಶಕಗಳಿಂದ ಹುಬ್ಬಳ್ಳಿ-ಧಾರವಾಡ ನಿವೇಶನ ರಹಿತ ಬಡವರಿಗೆ ನಿವೇಶನವನ್ನು ಯಾವುದೇ ಜಾತಿ ಮತ ಬೇದವಿಲ್ಲದೆ, ಒಗ್ಗಟ್ಟಿನಿಂದ ಮತ್ತು ಪ್ರಜ್ಞಾಪೂರ್ವಕ  ಹೊರಾಟದಿಂದ ಸರಕಾರದ ಜಮೀನಿನಲ್ಲಿ ನಿವೇಶನಗಳನ್ನು ಹಂಚಲಾಗಿದೆ ಇದೇ ಮಾದರಿಯಲ್ಲಿ ನಮ್ಮ ಕರ್ನಾಟಕ ರಾಜ್ಯ ನಿವೇಶನರಹಿತ ಹೋರಾಟ ಸಮಿತಿಯ ಮೂಲಕ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇಂದು ಬಡವರು, ಆರ್ಥಿಕವಾಗಿ ಹಿಂದುಳಿದವರು ನಿವೇಶನಕ್ಕಾಗಿ ಒಗ್ಗಟ್ಟಾಗಿ ಹೋರಾಟವನ್ನು ಕಟ್ಟುತ್ತಿದೆ. ಕೊಪ್ಪಳದ ಎಲ್ಲಾ ನಿವೇಶನ ಇಲ್ಲದ ಬಡವರು ಇಂದು ಹೋರಾಟದ ಮೂಲಕ ತಮ್ಮ ಸೂರನ್ನು ಪಡೆದುಕೊಳ್ಳಲು ಮುಂದಾಗ ಬೇಕೆಂದು’ ಕರೆ ನೀಡಿದರು.
ಮುಂದುವರೆದು ಮಾತನಾಡಿದ ಅವರು, ಸರಕಾರದ ಎ, ಟಿ, ರಾಮಸ್ವಾಮಿ ವರದಿ ಮತ್ತು ಬಾಲ ಸುಬ್ರಮಣ್ಯಂ ವರದಿಗಳು ಕರ್ನಾಟಕದಲ್ಲಿ ಸರಕಾರಿ ಜಮೀನು ೨೨ ಲಕ್ಷ ಎಕ್ಕರೆಕ್ಕೂ ಹೆಚ್ಚು ಇದೆ ಎಂದು ಹೇಳಿವೆ. ಈ ಭೂಮಿಯಲ್ಲಿ ಬಡವರಿಗೆ ನಿವೇಶ ಹಂಚಿಕೆ ಮಾಡಬೇಕು ಎಂದು ಹೇಳಿತ್ತಾ ಅವಶ್ಯಬಿದ್ದರೆ ಸರಕಾರ ಭೂಮಿಯನ್ನು  ಖರಿಧಿಸಿ ವಾಸಿಸಲು ಯೂಗ್ಯವಾದ ರೀತಿಯಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಎಲ್ಲಾ ಕಡುಬಡವರಿಗೆ ಹಂಚ ಬೇಕು ಎಂದರು.
 ನಂತರ ಮಾತನಾಡಿz ಕರ್ನಾಟಕ ರಾಜ್ಯ ನಿವೇಶನ ರಹಿತರ ಹೋರಾಟ ಸಮಿತಿ ರಾಜ್ಯ ಸಲಹೇಗಾರರಾದ ರಾಮಾಂಜನಪ್ಪ ಆಲ್ದಳ್ಳಿಯವರು ಮಾತನಾಡುತ್ತಾ ಇಂದು ಕರ್ನಾಟಕದಲ್ಲಿ ಇತ್ತೀ ಚಿನ ಅಂಕಿ ಅಶಗಳ ಪ್ರಕಾರ ಸುಮಾರು ೧೪.೩೫ ಲಕ್ಷ ವಸತಿ ಹೀನ ಕುಟುಂಬಗಳು ಮತ್ತು ೧೪.೩೪ ಲಕ್ಷ ನಿವೇಶನರಹಿತ ಕುಟುಂಬಗಳು ಇವೇ ಎಂದು ಅಂಧಾಜಿಸಲಾಗಿದೆ. ನಮ್ಮನ್ನಾಳುವ ಸರಕಾರಗಳು ಕನಿಷ್ಟ ಬೇಡಿಕೆಯಾದ ವಾಸಿಸಲೂ ಸೂರನ್ನು ಕೊಡಲು ವಿಫಲಬಾಗಿವೆ. ಇಂತ ಕುಟುಂಬಗಳು ಸೂರಿಲ್ಲದೆ ಗಾಳಿ, ಮಳೆ, ಚಳಿಗಾಲದಲಿ, ನೈಸರ್ಗಿಕ ವಿಕೋಪಗಳಿಗೆ ಸಾಯಿತ್ತಿರುವದು ಕೂಡಾ ಸಾಮಾನ್ಯವಾಗಿದೆ. ನಮ್ಮ ಬೇಡಿಕೆಗಳನ್ನು ಸರಕಾರಕ್ಕೆ ಮುಟ್ಟಿಸುವದರ ಜೊತೆಗೆ ಇದಕ್ಕೆ ಉತ್ತರವನ್ನು ಪಡೆದು ಕೊಳ್ಳದೆ ಹೋರಾಟವನ್ನು ಹಿಂದತೆಗೆದುಕೊಳ್ಳುವುದಿಲ್ಲ  ಎಂದರು
ಸಹ ಸಂಚಾಲಕರಾದ ರಾಜು ಒಡೆಯರ್ ಮತ್ತು ಉಮೇಶ ಬಿ ಆರ್, ಅಧ್ಯಕ್ಷತೆಯನ್ನು ಶರಣು ಗಡ್ಡಿ ವಹಿಸಿದ್ದರು, ಕಾರ್ಯಕರ್ತರಾದ ರಮೇಶ, ಮಾರುತಿ, ಸಿದ್ದಲಿಂಗರೆಡ್ಡಿ. ಬಡಾವಣೆಗಳಿಂದ ಬಂದ ಮೌಲಾ ಹುಸೇನ, ಅಕ್ಬರ, ಹುಲಿಗೆಮ್ಮ, ಮಮ್ತಾಜ, ಆಫ್ರೀನ್, ಮಂಜುಳಾ, ಶರೀಫ್  ರಹಿಮತ್ ಬೇಗಂ, ರೇಣುಕಾ, ಯಲ್ಲಮ್ಮ, ಶಭಾನ ಬೇಗಂ, ಇದ್ದರು,  
ಹಕ್ಕೊತ್ತಾಯಗಳು :- 
೧. ರಾಜ್ಯದ ಕಡುಬಡವರು ಮತ್ತು ಆರ್ಥಿಕವಾಗಿ ಹಿಂದುಳಿದ ನಿವೇಶನ ರಹಿತರನ್ನು ಪ್ರಾಮಾಣಿಕವಾಗಿ ಗುರುತಿಸಿ ಅಂತಹವರಿಗೆ ಸರ್ಕಾರಿ ಜಮೀನಿನಲ್ಲಿ ನಿವೇಶನಗಳನ್ನು ಹಂಚಲು ತುರ್ತು ಕ್ರಮ ಕೈಗೊಳ್ಳಿ. 
೨. ಕರ್ನಾಟಕ ಗೃಹ ನಿರ್ಮಾಣ ಮಂಡಳಿಗಳು ಮತ್ತು ನಗರಾಭಿವೃದ್ಧಿ ಪ್ರಾಧಿಕಾರಿಗಳ ಮೂಲಕ ನಿವೇಶನ ರಹಿತರ ಅವಶ್ಯಕತೆಯನ್ನು ಆಧರಿಸಿ ಅನಿವಾರ್ಯವಾದರೆ ಸರ್ಕಾರವೇ ಹೆಚ್ಚುವರಿ ಜಮೀನನ್ನು ಖರೀದಿಸಿ ವಿತರಿಸುವ ಸೂಕ್ತವಾದ ವೈಜ್ಞಾನಿಕ ನೀತಿಯನ್ನು ರೂಪಿಸಿ. ಅಭಾವ ಸೃಷ್ಟಿಸಿ ಹಣ ಮಾಡುವ ಖಾಸಗೀ ಬಿಲ್ಡರ್‌ಗಳು ಮತ್ತು ಭೂ ಮಾಫಿಯಾಗಳನ್ನು ದೂರವಿಡಲು ಕ್ರಮಕೈಗೊಳ್ಳಿ. 
೩. ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗೆ ಭೂಮಿ ಹಕ್ಕು ಒದಗಿಸುವುದರ ಮೂಲಕ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಿ.
Please follow and like us:
error