ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೆ ನನ್ನ ಗುರಿ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ

  ಕ್ಷೇತ್ರದ ಬಂಡಿಹರ್ಲಾಪೂರ ಹಾಗೂ ಹಿಟ್ನಾಳ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಾದ ಹುಲಗಿ, ಮುನಿರಾಬಾದ್ ಡ್ಯಾಂ, ಹೊಸನಿಂಗಾಪೂರು, ಹೊಸಳ್ಳಿ, ಹಿರೇಕಾಸನಕಂಡಿ, ಗ್ರಾಮಗಳಲ್ಲಿ ಅಂದಾಜು ರೂ ಮೊತ್ತ-೩ ಕೋಟಿ ೧೫ ಲಕ್ಷದ ಸಿಸಿ ರಸ್ತೆ, ಚರಂಡಿ, ಶಾಲಾ ಕಟ್ಟಡ, ಶುದ್ಧ ಕುಡಿಯುವ ನೀರಿನ ಘಟಕಗಳ ಕಾಮಗಾರಿಯ ಬೂಮಿ ಪೂಜೆ ನೇರವೇರಿಸಿ ಮಾತನಾಡಿದ ಕೊಪ್ಪಳ ಜನಪ್ರೀಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ಕೊಪ್ಪಳ ಕ್ಷೇತ್ರದ ಎಲ್ಲಾ ಗ್ರಾಮಗಳ ವಿಕಸನದ ಅಡಿಯಲ್ಲಿ ರಾಜ್ಯದ ಜನಪ್ರೀಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದರಾಮಯ್ಯನವರು ಹೆಚ್ಚಿನ ಅನುದಾನ ನೀಡುತ್ತಿದ್ದು, ಗ್ರಾಮಗಳ ಅಭಿವೃದ್ಧಿಗೆ ಇದು ಹೆಚ್ಚಿನ ಸಹಕಾರಿಯಾಗುತ್ತಿದೆ. ಬರುವ ದಿನಗಳಲ್ಲಿ ಕೊಪ್ಪಳ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ಉತ್ತಮ ಗುಣಮಟ್ಟದ ಸಿ.ಸಿ.ರಸ್ತೆ, ಚರಂಡಿ, ಶಾಲಾಕೊಠಡಿಗಳು, ಸಮುದಾಯ ಭವನ, ಹಾಗೂ ಶುದ್ಧ ಕುಡಿಯುವ ನೀರಿನ ಘಟಗಳನ್ನು ಪ್ರಾರಂಬಿಸಿವೆ. ಗ್ರಾಮದ ಜನತೆ ಈ ಕಾಮಗಾರಿಗಳನ್ನು ಗುಣಮಟ್ಟ ಹೊಂದಿರುವಂತೆ ತಮ್ಮ ನೈತಿಕ ಜವಾಬ್ದಾರಿಹೊಣೆ ಹೊರಬೇಕು.ಅಭಿವೃದ್ಧಿ ಕಾಮಗಾರಿಗಳಿಗೆ ಸರ್ವರೂ ಕೈಜೋಡಿಸಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮೀಸಬೇಕೆಂದು ಕರೆನೀಡಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಟಿ.ಜನಾರ್ಧನ ಹುಲಗಿ, ಕೆ.ರಮೇಶ ಹಿಟ್ನಾಳ, ತಾಲೂಕು ಪಂಚಾಯತ ಸದಸ್ಯರಾದ ದೇವಣ್ಣ ಮೇಕಾಳಿ, ಬಾನು ಬೇಗಂ, ಹುಲಗಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಪಾಲಕ್ಷಯ್ಯ, ಮುನಿರಾಬಾದ ಗ್ರಾಮ ಪಂಚಾಯತಿಯ ಅಧ್ಯಕ್ಷಣೀಯಾದ ರಾಧಾ ರವಿ, ಪಕ್ಷದ ಮುಖಂಡರಾದ ಕೆ.ಎಮ್.ಸಯ್ಯದ್, ಭರಮಪ್ಪ ಬೆಲ್ಲದ್, ರಾಮಚಂದ್ರ, ಎಮ್.ಡಿ.ಗೌಸ್, ರಾಮಮೂರ್ತಿ, ಅಶೋಕ ಇಳಿಗೆರ, ಬಾಬುಗೌಡ ಪಾಟೀಲ, ವೀರಣ್ಣ ಹುಲಗಿ, ಪ್ರಭುರಾಜ ಪಾಟೀಲ, ಮರ್ದಾನಪ್ಪ ಬಿಸರಳ್ಳಿ, ಯಂಕಪ್ಪ ಹೊಸಳ್ಳಿ, ಧರ್ಮರಾಜ ಕಲಾಲ್, ಚಂದು ಸಾಬ ಮುನಿರಾಬಾದ, ವಾಸಬಾಬು, ವಿವಿಧ ಗ್ರಾಮಪಂಚಾಯತಿಯ ಅಧ್ಯಕ್ಷರು, ಸದಸ್ಯರು, ಹಾಗೂ ಕಾಂಗ್ರೇಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು. 

Leave a Reply