You are here
Home > Koppal News > ನ. ೦೯ ರಂದು ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮ

ನ. ೦೯ ರಂದು ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮ

ಕೊಪ್ಪಳ ನ.: ಕೊಪ್ಪಳದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ  ಸಂಪರ್ಕ ಕೇಂದ್ರ ಹಾಗೂ ವಿವಿಧ ಸಂಘ ಸಂಸ್ಥೆಗಳು ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ವಿಶೇಷ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮವ ನ. ೯ ರಂದು ಬೆಳಿಗ್ಗೆ ೯ ಗಂಟೆಗೆ ಕೊಪ್ಪಳದ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಟ್ಟಡ ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ. ಎಸ್. ಮಾಳಗಿ ಅವರು ನೆರವೇರಿಸುವರು.  ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪ್ರಭುರಾಜ ಎಲ್. ಇನಾಮತಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ೨ನೇ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಎಲ್. ಬಿ. ಜಂಬಗಿ, ಸೀನಿಯರ್ ಸಿವಿಲ್ ನ್ಯಾಯಾಧೀಶ ಶಿವರಾಮ ಕೆ., ಸಿವಿಲ್ ನ್ಯಾಯಾಧೀಶ ಲಕ್ಷ್ಮಿನಾರಾಯಣ ಭಟ್, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎ. ವಿ. ಕಣವಿ ಅವರು ಭಾಗವಹಿಸುವರು. ಇದೇ ಸಂದರ್ಭದಲ್ಲಿ ಉಚಿತ ಕಾನೂನು ನೆರವು ಹಾಗೂ ಜನತಾ ನ್ಯಾಯಾಲಯ ಕುರಿತು  ಜಿಲ್ಲಾ ಸರಕಾರಿ ವಕೀಲ ವಿ.ಎಂ. ಭೂಸನೂರಮಠ, ಮಧ್ಯಸ್ಥಿಕೆ ಕೇಂದ್ರದ ಸ್ವರೂಪ ಕುರಿತು ವಕೀಲ ಯು.ಎಸ್. ಸೊಪ್ಪಿಮಠ, ಜನತಾ ನ್ಯಾಯಾಲಯದ ಮಹತ್ವ ಹಾಗೂ ರಾಜೀಸಂಧಾನ ಬಗ್ಗೆ ಎಸ್. ರುದ್ರಂii ಅವರು ವಿಶೇಷ ಉಪನ್ಯಾಸ ನೀಡುವರು. 

Leave a Reply

Top