You are here
Home > Koppal News > ಜ.೮ರಂದು ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಮಹಿಳಾ ಮೋರ್ಚಾ ಘಟಕದಿಂದ ಪ್ರತಿಭಟನೆ

ಜ.೮ರಂದು ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಮಹಿಳಾ ಮೋರ್ಚಾ ಘಟಕದಿಂದ ಪ್ರತಿಭಟನೆ

 : ದಿನನಿತ್ಯ ಬಳಕೆಯಾಗುವ ಅಡುಗೆ ಅನಿಲ ಹಾಗೂ ಆಟೋ ಗ್ಯಾಸ್ ಅನಿಲ ದರವು ಕೇಂದ್ರ ಸರ್ಕಾರವು ಪದೇ ಪದೇ ಏರಿಕೆ ಮಾಡುತ್ತಿದ್ದು ಇದನ್ನು ವಿರೋಧಿಸಿ ಜನೇವರಿ ೮ ರಂದು ಬೆಳಿಗ್ಗೆ ೧೧-೦೦ಘಂಟೆಗೆ ಕೊಪ್ಪಳ ಜಿಲ್ಲಾ ಮಹಿಳಾ ಮೋರ್ಚಾದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೊಪ್ಪಳ ಜಿಲ್ಲಾ ಮಹಿಳಾ ಮೋರ್ಚಾ ಘಟಕ ಪ್ರಕಟನೆಯಲ್ಲಿ ತಿಳಿಸಿದೆ.
  ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ  ಹೇಮಲತಾ ನಾಯಕ್ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆ ಅಂದು ಜಿಲ್ಲಾ ಬಿಜೆಪಿ ಕಾರ್ಯಾಲಯದಿಂದ ಮೇರವಣಿಗೆ ಹೊರಟು ಅಶೋಕ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
   ಅಡುಗೆ ಅನಿಲ ದರದಲ್ಲಿ ೨೨೦ ರೂ ಏರಿಕೆಯಾಗಿದ್ದು ಹಾಗೂ ಆಟೋ ಗ್ಯಾಸ್‌ದರದಲ್ಲಿ ೧೩-೫೦ ಪೈಸೆ ಹೆಚ್ಚಿಸಲಾಗಿದ್ದು ಬಡ ಹಾಗೂ ಮಧ್ಯಮ ವರ್ಗದವರ ಹೊಟ್ಟೆಯ ಮೇಲೆ ಬರೆ ಎಳೆದಿದ್ದಾರೆ.  ತೈಲ ಕಂಪನಿಗಳ ಮಾಫಿಯಾದಿಂದ ಭಯಗೊಂಡು ಹೇಡಿತನದಿಂದ ಅವರ ಆಮೀಷಕ್ಕೆ ಒಳಗಾಗಿ ಕೇಂದ್ರ ಇಂಧನ ಸಚಿವರು ಹಾಗೂ ಪ್ರಧಾನ ಮಂತ್ರಿಯವರು ಬಡ ಹಾಗೂ ಮಧ್ಯಮ ವರ್ಗದವರ ಜೀವನದ ಜೊತೆ ಚಲಾಟವಾಡುತ್ತಿದ್ದಾರೆ.
  ಸಬ್ಸ್ಸಿಡಿ ಹಣವನ್ನು ನೇರವಾಗಿ ಗ್ರಾಹಕನ ಖಾತೆಗೆ ಸಂದಾಯ ಮಾಡುವ ಕೇಂದ್ರದ ಈ ಉದ್ದೇಶದ ಹಿಂದೆ ಸಾಮಾನ್ಯಜನರಿಗೆ ಅರ್ಥವಾಗದಂತೆ ೨೨೦ ರೂಗಳನ್ನು ಹೆಚ್ಚಿಸಿ ಏನೂ ಗೊತ್ತಿಲ್ಲದಂತೆ ಕೇಂದ್ರ ಸರಕಾರ ಸುಮ್ಮನೆ ಕುಳಿತಿರುವುದು ಹೇಡಿತನದ ಬೇಜವಾಬ್ದಾರಿತನದಿಂದ ವರ್ತಿಸುತ್ತಿದೆ ಇದನ್ನು ವಿರೋಧಿಸಿ ಜಿಲ್ಲಾ ಮಹಿಳಾ ಮೋರ್ಚಾ ಘಟಕದಿಂದ ಅಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಮಹಿಳಾ  ಮೋರ್ಚಾ ಘಟಕದ ಪ್ರದಾನಕಾರ್ಯದರ್ಶಿ ಶ್ರೀಮತಿ ಮಧುರಾ ಕರುಣಂ ರವರು ತಿಳಿಸಿದ್ದಾರೆ.
   ಅಂದು ನಡೆಯುವ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆಯಲ್ಲಿ   ಜಿಲ್ಲೆಯ ನಾಲ್ಕೂ ತಾಲೂಕಿನ ಮಹಿಳಾ ಮೋರ್ಚಾದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಜಿ.ಪಂ.ತಾ.ಪಂ. ನಗರಸಭಾ ಸದಸ್ಯರು, ಪ.ಪಂ.ಸದಸ್ಯರು, ಬೆಂಬಲಿತ ಗ್ರಾ.ಪಂ.ಸದಸ್ಯರು, ಸಹಕಾರ ಸಂಘಗಳ ಬೆಂಬಲಿತ ಸದಸ್ಯರು, ಪಕ್ಷದ ವಿವಿಧ ಮೋರ್ಚಾದ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಹಾಗೂ ಕೊಪ್ಪಳ ಜಿಲ್ಲಾ ಬಾಜಪ ಘಟಕದ ಪ್ರಮುಖ ಮುಖಂಡರುಗಳು ಸಹ ಬೆಂಬಲ ವ್ಯಕ್ತಪಡಿಸಿ ಭಾಗವಹಿಸಬೇಕೆಂದು ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಧುರಾ ಕರುಣಂ  ಸಹ ಮಾಧ್ಯಮ ಪ್ರತಿನಿಧಿ ಪರಮಾನಂದ ಯಾಳಗಿ ತಿಳಿಸಿದ್ದಾರೆ.  

Leave a Reply

Top