ಗಣರಾಜ್ಯೋತ್ಸವ ಪ್ರಯುಕ್ತ ವಿವಿಧ ಸ್ಪರ್ಧೆಗಳು

ಯಲಬುರ್ಗಾ :

ತಾಲೂಕಿನ ಬಿನ್ನಾಳಗ್ರಾಮದ ಶ್ರೀ ಜಯದೇವ ಮುರಘರಾಜೇಂದ್ರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವ ಪ್ರಯುಕ್ತ ಶ್ರೀ ಸಾಯಿಕಲ್ಪತರು ಪೌಢಶನ್ ವತಿಯಿಂದ ಚರ್ಚೆ, ಪ್ರಬಂಧ, ರಸ ಪ್ರಶ್ನೆ, ಸೈಕ್ಲಿಂಗ್ ಸ್ಪರ್ದೆಗಳ್ನು ಆಯೋಜಿಸಲಾಗಿತ್ತು. ಈ ಸ್ಪರ್ದೆಗಳಲ್ಲಿ ವಿಜೇತರಾದವರಗೆ ಸಂಸ್ಥೆಯವತಿಯಿಂದ ಗಣಾರಾಜ್ಯೋಸವ ದಿನದಂದು ಪ್ರಶಸ್ತಿ ವಿತರಿಸಲಾಗುವುದು.

ಈ ಕಾರ್ಯಮದಲ್ಲಿ ಶಿಕ್ಷಕಿ ಶ್ರೀಮತಿ ಗಂಗಮ್ಮ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಗೀಣ ಅಭಿವೃದ್ಧಿಗೆ ಪಠ್ಯೇತರ ಚಟುವಟಿಕೆಗಳು ಅತ್ಯಂತ ಮಹತ್ವವಾಗಿದ್ದು, ಈ ನಿಟ್ಟಿನಲ್ಲಿ ಶಾಲೆಯ ಶಿಕ್ಷಕವೃಂದದ ಜೊತೆಗೆ ಪಾಲಕರು ಮತ್ತು ಸಮಾಜದ ಪ್ರತಿಯೊಬ್ಬರ ಜಾವಾಬ್ದಾರಿ ಹೊತ್ತು ನಡೆದಾಗ ಮಾತ್ರ ಒಬ್ಬ ಆದರ್ಶ ವಿದ್ಯಾರ್ಥೀಯನ್ನು ನಮ್ಮ ಶಾಲೆಯಿಂದ ಸಮಾಜಕ್ಕೆ ನೀಡಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು. 
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ಕಲಾಲಬಂಡಿ, ಶಿಕ್ಷಕರಾದ ರಮೇಶ ಎತ್ತೀನಮನಿ, ಶ್ರೀಮತಿ ಸರಸ್ವತಿ ಸುಲ್ತಾನಪುರ, ಜಗದೀಶ, ವಿ.ಎ ಮದರಿ, ಮತ್ತು ಸಂಸ್ಥೆಯ ಸಂಸ್ಥಾಪಕ ಜಗದೀಶ ಚಟ್ಟಿ, ಶಿವಕುಮಾರ ಮುತ್ತಾಳ, ಬಸವರಜ ಚಟ್ಟಿ, ದೇವರಾಜ, ಮುಂತಾದವರು ಉಪಸ್ಥಿತರಿದ್ದರು. 

Leave a Reply