You are here
Home > Koppal News > ಪ್ರಧಾನಿ ಮೊದಿಯ ದ್ವೆಷ ರಾಜಕಾರಣ ಮಾಡುತ್ತಿದ್ದಾರೆ – ಕೆ.ಬಸವರಾಜ ಹಿಟ್ನಾಳ.

ಪ್ರಧಾನಿ ಮೊದಿಯ ದ್ವೆಷ ರಾಜಕಾರಣ ಮಾಡುತ್ತಿದ್ದಾರೆ – ಕೆ.ಬಸವರಾಜ ಹಿಟ್ನಾಳ.

ಕೊಪ್ಪಳ-19 – ಪ್ರಧಾನಿ ನರೆಂದ್ರ ಮೊದಿಯವರು ವಿರೋಧ ಪಕ್ಷಗಳನ್ನು ದಮನ ಮಾಡುವ ರೀತಿಯಲ್ಲಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳ ಆರೋಪಿಸಿದರು.  ನಗರದ ಅಶೋಕ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು  ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದ ಸೋನಿಯಾಗಾಂಧಿಯವರನ್ನು ಹಾಗೂ ಉಪಾಧ್ಯಕ್ಷರಾದ ರಾಹುಲ್‌ಗಾಂಧಿಯವರನ್ನು ನ್ಯಾಷನಲ್ ಹೆರಾಲ್ಡ ಪತ್ರೀಕೆಯ ವ್ಯವಹಾರದಲ್ಲಿ ಆಕ್ರಮ ಆಸ್ತಿ ಗಳಿಕೆ ಮಾಡಿರುತ್ತಾರೆಂದು ಆರೋಪಿಸಿ ಸುಭ್ರಮಣ್ಯಂ ಸ್ವಾಮಿ ಎಂಬುವರು ವ್ಯರ್ತ ಆರೋಪ ಮಾಡಿ ನ್ಯಾಯಾಲಯದಲ್ಲಿ ಕೆಸನ್ನು ದಾಖಲಿಸಿ ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಕಾಯ್ದುಕೊಂಡು ಬಂದಿರುವ ಶ್ರೀಮತಿ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನು ಆರೋಪಿಗಳನ್ನಾಗಿ ಮಾಡಿದ್ದು ಸದರಿ ಪ್ರಕರಣವು ನ್ಯಾಯಾಲಯದಲ್ಲಿ ದಿನಾಂಕ. ೧೯-೧೨-೨೦೧೫ ರಂದು ವಿಚಾರಣೆಗೆ ಕೆಸನ್ನು ಕಾಯ್ದಿರಿಸಿದ್ದು ಕಾರಣ ಕೇಂದ್ರದ ಮೊದಿ ಸರ್ಕಾರವು ಈ ಮೂಲಕ ರಾಜಕೀಯ
ದುರುದ್ವೇಷದಿಂದ ಸೇಡಿನ ರಾಜಕಾರಣ ಮಾಡುತ್ತಿದ್ದು ಕಾರಣ ಇದನ್ನು ವಿರೋಧಿಸಿ ಕೊಪ್ಪಳ
ಲೋಕಸಭಾ ಹಾಗೂ ವಿಧಾನಸಭಾ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆಯನ್ನು
ಹಮ್ಮಿಕೊಳ್ಳಲಾಗಿತ್ತು.
    ಈ ಸಂದರ್ಭದಲ್ಲಿ ಕಾಟನ್ ಪಾಷಾ ತಾಲೂಕ ಯುವ ಕಾಂಗ್ರಸ್ ಅಧ್ಯಕ್ಷರು, ಜುಲ್ಲು ಖಾದ್ರಿ ಪ್ರಾಧಿಕಾರ ಅಧ್ಯಕ್ಷರು, ಎಸ್.ಬಿ.ನಾಗರಳ್ಳಿ ಬ್ಲಾಕ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ  ಇಂಧಿರಾ ಬಾವಿಕಟ್ಟಿ, ಯುವ ಕಾಂಗ್ರಸ್ ಪ್ರಧಾನ ಕಾರ್ಯದರ್ಶಿಯಾದ ಸುರೇಶ ದಾಸರೆಡ್ಡಿ, ಕೆ.ಎಂ ಸೈಯದ್, ಈಶಪ್ಪ ಮಾದಿನೂರ, ದ್ಯಾಮಣ್ಣ ಚಿಲವಾಡಗಿ, ಶಿವಾನಂದ ಹೂದ್ಲೂರ, ನಗರಸಭೆಯ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ, ಉಪಾಧ್ಯಕ್ಷರಾದ ಬಾಳಪ್ಪ ಬಾರಕೇರ, ಮುತ್ತುರಾಜ ಕುಷ್ಟಗಿ, ರಾಮಣ್ಣ ಹದ್ದಿನ್, ಯಮನೂರಪ್ಪ ನಾಯಕ, ಮಾನ್ವಿ ಪಾಷಾ, ಅಪ್ಸರ್ ಸಾಬ್, ಖತೀಬ್ ಬಾಶುಸಾಬ್, ಚಿಕ್ಕನಪೀರಾ, ಎ.ಸಿ.ಘಟಕದ ಅಧ್ಯಕ್ಷರಾದ ಗಾಳೇಪ್ಪ ಪೂಜಾರ, ಅನುಸುಯೆಮ್ಮ ವಾಲ್ಮೀಕಿ, ಅರುಣ ಶೆಟಿ, ಆರ್.ಎಂ ರಫೀ, ಅಕ್ತರಫಾರುಖಿ, ಹಿಭ್ರಾಹಿಂ ಅಡ್ಡವಾಲಿ ಇನ್ನು ಮುಂತಾದವರು ಉಪಸ್ಥಿತರಿದ್ದರು.

Leave a Reply

Top