ಕಾಂಗ್ರೇಸ್ ಮಡಿಲಿಗೆ ಕೊಪ್ಪಳ ನಗರಸಭೆ

 ಕೊಪ್ಪಳ:ಫೆ-೨೫

ಕೊಪ್ಪಳ ನಗರಸಭೆಯ ಅಧ್ಯಕ್ಷ-ಉಪಾದ್ಯಾಕ್ಷರ ಮುಂದಿನ ೧೫ ತಿಂಗಳ ಅವದಿಗೆ ಕಾಂಗ್ರೇಸ್ ಪಕ್ಷದ ಶ್ರೀಮತಿ ಬಸಮ್ಮ ರಾಮಣ್ಣ ಹಳ್ಳಿಗುಡಿ, ಹಾಗೂ ಉಪಾದ್ಯಕ್ಷಸ್ಥಾನಕ್ಕೆ ಬಾಳಪ್ಪ ಬಾರಕೇರ  ಆಯ್ಕೆಯಾದರು. 

               ಕಾಂಗ್ರೇಸ್ ಅಧ್ಯಕ್ಷ ಅಭ್ಯರ್ಥಿಪರ ೨೦ ಜನ ಸದಸ್ಯರು ಕೈಯತ್ತುವ ಮೂಲಕ ಆಯ್ಕೆಮಾಡಿದರು. ಬಿಜೆಪಿ ಯ ಅಧ್ಯಕ್ಷ ಆಕಾಂಕ್ಷೆಯಾದ ಅಭ್ಯರ್ಥಿಯಾದ ಶ್ರೀಮತಿ ವಿಜಯಾ ಹಿರೇಮಠ ಇವರಿಗೆ ೧೨ ಜನ ಸದಸ್ಯರು ಬೆಂಬಲ ಪಡೆದು ತಿರ್ವ ಮುಖಬಂಗ ಅನುಭವಿಸಿದರು. ಇದರಿಂದ ೧೩ಜನ ಸದಸ್ಯರುಳ್ಳ ಕಾಂಗ್ರೇಸ್ ಪಕ್ಷವು ಕೊಪ್ಪಳ ನಗರಸಭೆಯ ಅಧಿಕಾರಚುಕ್ಕಾಣಿ ಹಿಡಿಯಿತು.
ಈ ಸಂದರ್ಭದಲ್ಲಿ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳ, ಪಕ್ಷದ ಮುಖಂಡರಾದ ಎಸ್.ಬಿ.ನಾಗರಳ್ಳಿ, ಹೆಚ್.ಎಲ್.ಹಿರೇಗೌಡ್ರು, ಜುಲ್ಲು ಖಾದರಿ, ಈಶಪ್ಪ ಮಾದಿನೂರು, ಕೆ.ಎಮ್.ಸಯ್ಯದ್, ಸುರೇಶ ಭುಮರೆಡ್ಡಿ, ಹನುಮರೆಡ್ಡಿ ಹಂಗನಕಟ್ಟಿ, ಗವಿಸಿದ್ದಪ್ಪ ಮುದುಗಲ್, ಶಕುಂತಲಾ ಹುಡೇಜಾಲಿ, ಬಸವರೆಡ್ಡಿ ಹಳ್ಳಿಕೇರಿ, ಯಂಕನಗೌಡ್ರು ಹಿರೇಗೌಡ್ರು, ಜಡಿಯಪ್ಪ ಬಂಗಾಳಿ, ಹಟ್ಟಿ ಭರಮಪ್ಪ, ಸೂಮಣ್ಣ ಬಾರಕೇರ, ಸುರೇಶ ದಾಸರೆಡ್ಡಿ, ಅಕ್ತರ ಫಾರುಕಿ, ನಾಗರಾಜ ಬಳ್ಳಾರಿ, ಇಬ್ರಾಹಿಂ ಅಡ್ಡೆವಾಲಿ, ನವಾಜ್ ಹುಸ್ಸೇನಿ, ಹಾಜಿ ಹುಸ್ಸೇನಿ, ವಕ್ತಾರ ಅಕ್ಬರಪಾಷಾ ಪಲ್ಟನು ಪಸ್ಥಿತರಿದ್ದರು.
Please follow and like us:
error