fbpx

ಡಿ.ಕೆ.ರವಿಯವರ ಅನುಮಾನಸ್ಪದ ಸಾವು : ಸೂಕ್ತ ತನಿಖೆ ನಡೆಸಲು ಆಗ್ರಹ

ಹೊಸಪೇಟೆ: ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿಯವರ ಅನುಮಾನಸ್ಪದ ಸಾವಿನ ಘಟನೆಯನ್ನು ಸೂಕ್ತ ತನಿಖೆ ನಡೆಸಬೇಕೆಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಆಗ್ರಹಿಸಿ ಬುಧವಾರ ಪ್ರತಿಭಟನೆ ಪ್ರದರ್ಶನ ನಡೆಸಿತು. 
ರಾಜ್ಯ ಉಪಾಧ್ಯಕ್ಷ ಎಂ.ಜಂಬಯ್ಯ ನಾಯಕ ಮಾತನಾಡಿ, ಡಿ.ಕೆ.ರವಿಯವರ ಅನುಮಾನಸ್ಪದ ಸಾವಿ ಹಲುವಾರು ಪ್ರಶ್ನೆಗಳನ್ನು ಸಾರ್ವಜನಿಕರಲ್ಲಿ ಹುಟ್ಟು ಹಾಕಿದೆ. ಭ್ರಷ್ಠರಿಗೆ, ಭೂಗಳ್ಳರಿಗೆ, ತೆರಿಗೆ ಕಳ್ಳರಿಗೆ, ರಿಯಲ್ ಎಸ್ಟೇಟ್ ಮಾಫಿಯಾದವರಿಗೆ ಸಿಂಹ ಸ್ವಪ್ನವಾಗಿದ್ದ ಪ್ರಾಮಾಣಿಕ ಅಧಿಕಾರಿ ಡಿ.ಕೆ.ರವಿಗೆ ಸಂಘಟನೆ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸುತ್ತದೆ. ರಾಜ್ಯದಲ್ಲಿ ಅಧಿಕಾರಿಗಳು, ಸರ್ಕಾರಿ ನೌಕರರು ನಿರ್ಭಿತಿಯಿಂದ ಕಾರ್ಯನಿರ್ವಹಿಸುವಂತಹ ವಾತಾವರಣ ಸೃಷ್ಠಿಸಲು ಸರ್ಕಾರ ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು. ತಾಲೂಕು ಅಧ್ಯಕ್ಷ ನಾಗರಾಜ ಪತ್ತಾರ್, ಗೌರವಾಧ್ಯಕ್ಷ ಕೆ.ಚಂದ್ರಪ್ಪ, ಜಿಲ್ಲಾ ಗೌರವಾಧ್ಯಕ್ಷ ಬಿ.ತಾಯಪ್ಪ ನಾಯಕ ಮತ್ತಿತರರು ಮಾತನಾಡಿದರು. ನಂತರ ಡಿ.ಕೆ.ರವಿಗೆ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಲಾಯಿತು. ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಉಮೇಶ್ ಜಾಗೀರ್‌ದಾರ್, ಧರ್ಮನ ಗೌಡ, ಮಲ್ಲಿಕಾರ್ಜುನ, ರೇಣುಕಮ್ಮ, ನರಸಿಂಹಪ್ಪ, ಕಲ್ಮಾನಿ ಕೆ.ಚೆನ್ನಪ್ಪ ಮತ್ತಿತತರು ಹೋರಾಟದ ನೇತೃತ್ವವಹಿಸಿದ್ದರು.
Please follow and like us:
error

Leave a Reply

error: Content is protected !!