೨೦೧೩-೧೪ನೇ ಸಾಲಿನ ಶಿಕ್ಷಕರ ದಿನಾಚಾರಣೆ & ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ

 : ಕೊಪ್ಪಳ ಜಿಲ್ಲಾ/ತಾಲ್ಲೂಕಾ ಮಟ್ಟದ ಶಿಕ್ಷಕರ ದಿನಾಚಾರಣೆಯನ್ನು ಹಮ್ಮಿಕೊಳ್ಳಲಾಗಿದೆ. ದಿ:೦೫  ರಂದು ಬೆಳಿಗ್ಗೆ ೮.೦೦ ರಿಂದ ಶ್ರೀ ಗವಿಸಿದ್ಧೇಶ್ವರ ಮಠ ಕೊಪ್ಪಳದಿಂದ ಜವಾಹರ ರಸ್ತೆಯ ಮೂಲಕ ಕನ್ನಡ ಸಾಹಿತ್ಯ  ಭವನದವರೆಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಭಾವಚಿತ್ರದ ಮೆರವಣಿಗೆ ನಂತರ ಕನ್ನಡ ಸಾಹಿತ್ಯ ಭವನದಲ್ಲಿ ಕಾರ್ಯಕ್ರಮಗಳು ಇರುವುದು. ೨೦೧೩-೧೪ನೇ ಸಾಲಿಗಾಗಿ ಉಲ್ಲೇಖ ಸುತ್ತೋಲೆಯ ಪ್ರಕಾರ ಜಿಲ್ಲಾ ಮಟ್ಟದ ಪ್ರಶಸ್ತಿಗಾಗಿ ಈ ಕೆಳಕಾಣಿಸಿದ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಪ್ರಯುಕ್ತ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶಿಕ್ಷಕರು ನಿಗಧಿತ ಸಮಯ ಬೆಳಿಗ್ಗೆ ೧೦.೩೦ಕ್ಕೆ ಹಾಜರಿರಲು ತಿಳಿಸಿದೆ.
ಶಿಕ್ಷಕರ ಹೆಸರು ಹಾಗೂ ಶಾಲೆಯ ಹೆಸರು ಪ್ರೌಢಶಾಲಾ ವಿಭಾಗ:  ಎಂ.ಬಿ. ಕೊಪ್ಪಳ, ಸಹಶಿಕ್ಷಕ, ಸರ್ಕಾರಿ ಪ್ರೌಢಶಾಲೆ ವೆಂಕಟಗಿರಿ ತಾ: ಗಂಗಾವತಿ   ತಮ್ಮನಗೌಡ ಪಾಟೀಲ, ಸಹಶಿಕ್ಷಕ, ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌ ವಿ) ಯಲಬುರ್ಗಾ  ಬಾಬು ಸುಂಕದ, ಚಿತ್ರಕಲಾ ಶಿಕ್ಷಕ, ಸರ್ಕಾರಿ ಉರ್ದು ಪ್ರೌಢಶಾಲೆ ಕುಷ್ಟಗಿ ತಾ: ಕುಷ್ಟಗಿ ಶ್ರೀಮತಿ. ಕಸ್ತೂರಿ ಕಡೆಮನಿ, ಸಹಶಿಕ್ಷಕಿ, ಸ. ಪದವಿಪೂರ್ವ ಕಾಲೇಜು(ಪ್ರೌ.ವಿ) ಕಾತರಕಿಗುಡ್ಲಾನೂರು ತಾ: ಕೊಪ್ಪಳ 
ಪ್ರಾಥಮಿಕ ಶಾಲಾ ವಿಭಾಗ : ಶ್ರೀಮತಿ. ವೇದಾಬಾಯಿ ಗಂಡ ಬಾಲಕೃಷ್ಣ ದೇಸಾಯಿ, ಸಹಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಲಮಾಣಿ ತಾಂಡಾ, ಬಸಾಪಟ್ಟಣ ತಾ: ಗಂಗಾವತಿ  ಶೇಖರಗೌಡ ಪೋಲಿಸಪಾಟೀಲ, ಸಹಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ ನಗರ, ಬೇವೂರು ತಾ: ಯಲಬುರ್ಗಾ   ಮಲ್ಲಪ್ಪ ಕುದರಿ, ಸಹಶಿಕ್ಷಕ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಚಳಗೇರಾ ತಾ: ಕುಷ್ಟಗಿ  ಬೇನಾಳಪ್ಪ ಭ ದೊಡ್ಡಮನಿ, ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಕ್ಕಬಗನಾಳ ತಾ: ಕೊಪ್ಪಳ ಮಾನ್ಯ ಶ್ರೀಮತಿ. ಸಾಲುಮರದ ತಿಮ್ಮಕ್ಕ, ಅಂತರಾಷ್ಟ್ರೀಯ ಪರಿಸರವಾದಿ, ಹುಲಿಕಲ್ಲ ರಾಮನಗರ ಜಿಲ್ಲೆ ಇವರಿಗೆ ವಿಶೇಷ ಸನ್ಮಾನ ಇರುವದು. ಮಧ್ಯಾಹ್ನ ೨.೩೦ ಕ್ಕೆ ಸದ್ರಿಯವರ ಸಹಾಯಾರ್ಥವಾಗಿ ಶಿಕ್ಷಕರ ಕಲಾವೃಂದದವರಿಂದ ಮೈಸೂರ ಹುಲಿ ಟಿಪ್ಪು ಸುಲ್ತಾನ ನಾಟಕ ಇರುವದು ಎಂದು ಉಪನಿರ್ದೇಶಕರು (ಆಡಳಿತ) ಸಾರ್ವಜನಿಕ ಶಿಕ್ಷಣ ಇಲಾಖೆ  ತಿಳಿಸಿರುತ್ತಾರೆ 
Please follow and like us:
error