ಶಿವನಾಮದಿಂದ ಸಂತೃಪ್ತ ಬದುಕು ಕಂಡುಕೊಳ್ಳಿ: ಕೆ.ಎಂ.ಸಯ್ಯದ್

ಕೊಪ್ಪಳ,ಮಾ.೧೨: ಶಿವನಾಮದಿಂದ ಮಾತ್ರ ಸಂತೃಪ್ತ ಬದುಕು ಕಂಡುಕೊಳ್ಳಬೇಕು. ಭಾವೈಕ್ಯತೆಯೇ ನಿಜವಾದ ಸಾರ್ಥಕ ಜೀವನದ ಸಕಾರವೆಂದು ಸಯ್ಯದ್ ಫೌಂಡೇಶನ್ ಚಾರಿಟೇಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್‌ನ ನಿಯೋಜಿತ ಅಭ್ಯರ್ಥಿ ಕೆ.ಎಂ. ಸಯ್ಯದ್ ಹೇಳಿದರು. 
ಅವರು ಸೋಮವಾರ ತಾಲೂಕಿನ ಹಳೆಬಂಡಿ ಹರ್ಲಾಪುರ ಗ್ರಾಮದಲ್ಲಿ ೨ ನೇ ವರ್ಷದ ಮಹಾಶಿವರಾತ್ರಿ ಜಾಗರಣೆ ಅಂಗವಾಗಿ ಸ್ಥಳೀಯ ವಿವಿಧ ಸಂಘಟನೆಗಳು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸಿ ಮಾತನಾಡಿ, ಸಂಘ ಸಂಸ್ಥೆಗಳು ಇಂತಹ ಕಾರ್ಯಗಳ ಮೂಲಕ ಗ್ರಾಮದ ಅಭಿವೃದ್ಧಿಗೆ ಮುಂದಾಗಬೇಕು. ಅಂತಹ ಪ್ರಗತಿಪರ ಕಾರ್ಯಗಳಿಗೆ ತಾವು ಸದಾ ಸಂಪೂರ್ಣ ಸಹಾಯ ಸಹಕಾರ ನೀಡುವದಾಗಿ ತಿಳಿಸಿದರು. ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ನಗರಗಡ್ಡಿಮಠದ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶಿವ ನಾಮಸ್ಮರಣೆಯಿಂದ ಶಿವನ ಕೃಪಗೆ ಪಾತ್ರರಾಗಿ ಅಲ್ಲದೇ ತಮ್ಮ ಮಠದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ  ಸ್ಥಳೀಯ ಪ್ರಥಮ ದರ್ಜೆ ಕಾಲೇಜ್ ಪ್ರಾಚಾರ್ಯರಾದ ಕೃಷ್ಣಪ್ಪ ನಾಯಕ, ರಂಗ ಕಲಾವಿದ ಶಿವನಂದಪ್ಪ, ಹಾಸ್ಯ ಭಾಷಣಕಾರ ಚಿದಾನಂದ ಕೀರ್ತಿ, ಬಾಷಾಸಾಬ ಗೊರೆಬಾಳ, ಗ್ರಾ.ಪಂ. ಅಧ್ಯಕ್ಷೆ ಎಂ. ರತ್ನಮ್ಮ ಬ್ರಮ್ಮಯ್ಯ, ಸದಸ್ಯರಾದ ರಾಜಶೇಖರ,ಸೋಮಶೇಖರ, ಮಹಾಬೂಬಿ ಮರ್ದಾನಸಾಬ ಸಣ್ಣ ಹನುಮಂತ ಸಿಂದೋಗಿ, ಸುಬ್ಬಾರೆಡ್ಡಿ, ನೀಲಪ್ಪ ಕವಲೂರು, ನಿಂಗಜ್ಜ, ರುದ್ರಗೌಡ, ಕೃಷ್ಣಪ್ಪ, ಶ್ರೀಧರ ಸೇರಿದಂತೆ ಅನೇಕ ಮುಖಂಡರು ವೇದಿಕೆ ಮೇಲೆ ಉಪಸ್ಥಿತರಿದ್ದರು. ನಂತರ ವಿವಿಧ ಸಂಘ-ಸಂಸ್ಥೆಗಳು ಹಾಗೂ ತಂಡಗಳಿಂದ ಸಾಕಷ್ಟು ಸಾಂಸ್ಕೃತಿ ಕಾರ್ಯಗಳು ರಾತ್ರಿ ಇಡಿ ನಡೆಸಲಾಯಿತು. ನೇತ್ರಾವತಿ ಸಂಗಡಿಗರು ಪ್ರಾರ್ಥಿಸಿ, ಕೆ. ಕಲ್ಪನಾ ನಿರೂಪಿಸಿದರೆ,  ಧರ್ಮಣ್ಣ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
Please follow and like us:
error