ಹುಬ್ಬಳ್ಳಿ-ಚಿನ್ನೈ ನಡುವೆ ರೈಲು ಸಂಚಾರ ಏಪ್ರಿಲ್‌ನಲ್ಲಿ ಆರಂಭ

ಹೊಸಪೇಟೆ: ಹುಬ್ಬಳ್ಳಿ-ಚಿನ್ನೈ ನಡುವೆ ವಾರದಲ್ಲಿ ಎರಡು ಬಾರಿ ಸಂಚರಿಸುವ ನೂತನ ರೈಲನ್ನು ಏಪ್ರಿಲ್ ತಿಂಗಳಿಂದ ಆರಂಭಿಸಲಾಗುವುದು ಎಂದು ಕೇಂದ್ರ ರೈಲ್ವೇ ಸಚಿವ ಮನೋಜ್ ಸಿನ್ಹಾ ಭರವಸೆ ನೀಡಿದ್ದಾರೆ.
ರೈಲ್ವೆ ಬಳಕೆದಾರರ ರಾಷ್ಟ್ರೀಯ ಪರಿಷತ್ ಸಲಹಾ ಸಮಿತಿಯ ಸದಸ್ಯ ಹಾಗೂ ಥಿಯೋಸಾಫಿಕಲ್ ಮಹಿಳಾ ಕಾಲೇಜಿನ ಅಧ್ಯಕ್ಷ ಬಾಬುಲಾಲ್ ಬಿ. ಜೈನ್ ಈಚೆಗೆ ನವದೆಹಲಿಯಲ್ಲಿ ಕೇಂದ್ರ ರೈಲ್ವೆ ರಾಜ್ಯಸಚಿವ ಮನೋಜ್ ಸಿನ್ಹಾ ಅವರನ್ನು ಭೇಟಿಯಾಗಿ ಈ ಭಾಗದ ರೈಲ್ವೆ ಬೇಡಿಕೆಗಳ ಬಗ್ಗೆ  ಮನವಿ ಸಲ್ಲಿಸಿದಾಗ ಈ ಭರವಸೆ ನೀಡಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿರುವ ಅವರು, ಈ ಸಂದರ್ಭದಲ್ಲಿ ಕೊಪ್ಪಳ ಸಂಸದ ಕರಡಿ ಸಂಗಣ್ಣ, ಬಿಜೆಪಿ ಮುಖಂಡ ರಮೇಶ್ ವೈದ್ಯ ಹಾಜರಿದ್ದರು. ಈ ಹಿಂದೆ ಹುಬ್ಬಳ್ಳಿ ಜನರಲ್ ಮ್ಯಾನೇಜರ್ ಆಗಿದ್ದ ಎ.ಕೆ.ಮಿತ್ತಲ್ ನವದೆಹಲಿಯ ರೈಲ್ವೆ ಮಂಡಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅವರು ಉಪಸ್ಥಿತರಿದ್ದರು ಎಂದಿದ್ದಾರೆ. 
Please follow and like us:

Related posts

Leave a Comment