ಸಮ್ಮೇಳನದ ಪುಸ್ತಕಗಳು ಶೀಘ್ರ ಬರಲಿವೆ: ರಾಜಶೇಖರ ಅಂಗಡಿ

ಕೊಪ್ಪಳ : ಜನೇವರಿಯಲ್ಲಿ ನಡೆದ 4ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಸೇರಿದಂತೆ ಐದು ಪುಸ್ತಕಗಳು ಸಿದ್ದಗೊಂಡಿದ್ದು ಶೀಘ್ರದಲ್ಲಿ ಸಾಹಿತ್ಯಾಭಿಮಾನಿಗಲಿಗೆ ತಲುಪಲಿವೆ ಎಂದು ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ರಾಜಶೇಖರ ಅಂಗಡಿ ತಿಳಿಸಿದ್ದಾರೆ.
ನಮ್ಮದಲ್ಲದ ವಿಳಂಭ ಮತ್ತು ಕೆಲಅನಿವಾರ್ಯ ಕಾರಣಗಳಿಂದ ಪುಸ್ತಕ ಪ್ರಕಟನೆಯಲ್ಲಿ ತಡವಾಗಿದ್ದು ಪುಸ್ತಕಗಳು ತುಂಬ ಅಚ್ಚುಕಟ್ಟಾಗಿ ಅಂದವಾಗಿ ಮುದ್ರಣಗೊಂಡಿದ್ದು ಉತ್ತಮ ಲೇಖನ, ಕಥೆ, ಕವನಗಳ ಸಂಕಲನ ಪುಸ್ತಕಗಳು ಸಾಹಿತಿಗಳ , ಸಾಹಿತ್ಯಾಸಕ್ತರ ಮನಗೆಲ್ಲುವುದು ಖಚಿತ.
ಹಾಗೆಯೇ ಜಿಲ್ಲಾ ಸಮ್ಮೇಳನದ ಖರ್ಚು ವೆಚ್ಚದ ವಿವರಗಳಿದ್ದು ಶೀಘ್ರವೇ ಕಸಾಪ ಕಾರ್ಯಕಾರಿ ಸಮಿತಿ ಸಭೆ ಕರೆದು ಲೆಕ್ಕಪತ್ರವನ್ನು ಒಪ್ಪಿಸಲಾಗುವುದು ಎಂದು ರಾಜಶೇಖರ ಅಂಗಡಿ ತಿಳಿಸಿದ್ದಾರೆ.

Leave a Reply