ವಿವಿಧ ಕ್ರೀಡಾಕೂಟ ಹೆಸರು ನೊಂದಾಯಿಸಲು ಸೂಚನೆ.

ಕೊಪ್ಪಳ, ಅ.೧೪ (ಕ
ವಾ) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಇವರಿಂದ ಕೊಪ್ಪಳ ತಾಲೂಕಾ
ಮಟ್ಟದ ರಾಜೀವ್‌ಗಾಂಧಿ ಖೇಲ್ ಅಭಿಯಾನದ (ಆರ್.ಜಿ.ಕೆ.ಎ) ಗ್ರಾಮೀಣ ಕ್ರೀಡಾ ಕೂಟವನ್ನು
ಅ.೧೬ ರಂದು ಮತ್ತು ದಸರಾ ಕ್ರೀಡಾಕೂಟವನ್ನು ಅ.೧೭ ರಂದು ಬೆಳಿಗ್ಗೆ ೦೯.೩೦ ಗಂಟೆಗೆ
ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ಕ್ರೀಡಾಕೂಟದಲ್ಲಿ ಭಾಗವಹಿಸುವ ತಂಡಗಳು
ಅ.೧೫ ರ ಸಂಜೆ ೦೫ ಗಂಟೆಗಳೊಳಗಾಗಿ ಸಂಘಟಕರಲ್ಲಿ ತಮ್ಮ ಹೆಸರುಗಳನ್ನು
ನೊಂದಾಯಿಸಿಕೊಳ್ಳಬಹುದಾಗಿದೆ.
         ಆರ್.ಜಿ.ಕೆ.ಎ ಗ್ರಾಮೀಣ ಕ್ರೀಡಾಕೂಟದಲ್ಲಿ
ಭಾಗವಹಿಸುವ ಕ್ರೀಡಾ ಪಟುಗಳು ೨೦೧೫ರ ಡಿಸೆಂಬರ್.೩೧ ಕ್ಕೆ ೧೬ ವರ್ಷ ಮೀರಿರಬಾರದು.
ಸ್ಪರ್ಧೆಗೆ ಬರುವಾಗ ತಮ್ಮ ವಯಸ್ಸಿನ ಬಗ್ಗೆ ಶಾಲೆಯ ಮುಖ್ಯೋಪಾಧ್ಯಯರಿಂದ ಜನ್ಮದಿನಾಂಕ
ದೃಢೀಕರಣ ಪತ್ರವನ್ನು ತರಬೇಕು. ವಿಜೇತರಾದಂತಹ ಕ್ರೀಡಾಪಟುಗಳು ನಂತರ ತಮ್ಮ ಬ್ಯಾಂಕ್
ಖಾತೆಯ ಪಾಸ್‌ಬುಕ್‌ನ ಝರಾಕ್ಸ್ ಪ್ರತಿಗಳನ್ನು ಸಲ್ಲಿಸತಕ್ಕದ್ದು, ಗ್ರಾಮೀಣ ಪ್ರದೇಶದ
ಕ್ರೀಡಾಪಟುಗಳಿಗೆ ಮಾತ್ರ ಆರ್.ಜಿ.ಕೆ.ಎ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿದೆ. ಈ
ತಾಲೂಕಾ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಅಥ್ಲೆಟಿಕ್ಸ್ ಹಾಗೂ ಗುಂಪು
ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು ಮಾತ್ರ ಜಿಲ್ಲಾ ಮಟ್ಟದ
ಸ್ಫರ್ಧೆಯಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ.
ಆರ್.ಜಿ.ಕೆ.ಎ ಗ್ರಾಮೀಣ
ಕ್ರೀಡಾಕೂಟದ ಸ್ಪರ್ಧೆಗಳ ವಿವರ : ಅಥ್ಲೆಟಿಕ್ಸ್ : ೧೦೦ಮೀ, ೪೦೦ಮೀ, ೮೦೦ಮೀ, ೧೫೦೦ಮೀ,
೩೦೦೦ಮೀ. ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಡಿಸ್ಕಸ್ ಥ್ರೋ, ೪*೧೦೦ಮೀ.
ರಿಲೇ, ೪*೪೦೦ಮೀ ರಿಲೇ. ಗುಂಪು ಸ್ಪರ್ಧೆ : ವ್ಹಾಲಿಬಾಲ್, ಕಬ್ಬಡ್ಡಿ, ಖೋಖೋ,
ಹ್ಯಾಂಡ್‌ಬಾಲ್.
ದಸರಾ ಕ್ರೀಡಾಕೂಟದ ಸ್ಪರ್ಧೆಗಳ ವಿವರ : ಪುರುಷರ ವಿಭಾಗ,
ಅಥ್ಲೆಟಿಕ್ಸ್ : ೧೦೦ಮೀ, ೨೦೦ಮೀ, ೪೦೦ಮೀ, ೮೦೦ಮೀ, ೧೫೦೦ಮೀ, ೫೦೦೦ಮೀ. ಓಟ, ಉದ್ದ
ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವೆಲಿನ್ ಥ್ರೋ, ಡಿಸ್ಕಸ್
ಥ್ರೋ, ೧೧೦ಮೀ.ಹರ್ಡಲ್ಸ್, ೪*೧೦೦ಮೀ. ರಿಲೇ, ೪*೪೦೦ಮೀ ರಿಲೇ. ಗುಂಪು : ವ್ಹಾಲಿಬಾಲ್,
ಕಬ್ಬಡ್ಡಿ, ಖೋಖೋ, ಬಾಲ್ ಬ್ಯಾಡ್ಮಿಂಟನ್, ಟೇಬಲ್ ಟಿನ್ನಿಸ್, ಶಟಲ್ ಬ್ಯಾಡ್ಮಿಂಟನ್.
       
ಮಹಿಳೆಯರ ವಿಭಾಗ : ಅಥ್ಲೆಟಿಕ್ಸ್ : ೧೦೦ಮೀ, ೨೦೦ಮೀ, ೪೦೦ಮೀ, ೮೦೦ಮೀ, ೧೫೦೦ಮೀ,
೩೦೦೦ಮೀ. ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವೆಲಿನ್
ಥ್ರೋ, ಡಿಸ್ಕಸ್ ಥ್ರೋ, ೧೦೦ಮೀ.ಹರ್ಡಲ್ಸ್, ೪*೧೦೦ಮೀ. ರಿಲೇ, ೪*೪೦೦ಮೀ ರಿಲೇ. ಗುಂಪು :
ವ್ಹಾಲಿಬಾಲ್, ಕಬ್ಬಡ್ಡಿ, ಖೋಖೋ, ಟೇಬಲ್ ಟೆನ್ನಿಸ್, ಬಾಲ್‌ಬ್ಯಾಡ್ಮಿಂಟನ್, 
     
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : ೯೯೮೦೮೫೨೭೩೫ ಅಥವಾ ೭೮೯೯೪೩೨೨೨೭ ಇವರನ್ನು
ಸಂಪರ್ಕಿಸಬಹುದಾಗಿದೆ ಎಂದು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,
ಕೊಪ್ಪಳ ಇವರು ತಿಳಿಸಿದ್ದಾರೆ. 

ಮಕ್ಕಳು ಬಾಲ್ಯದಲ್ಲಿ ತಮ್ಮ ಹಕ್ಕುಗಳನ್ನು ಅನುಭವಿಸಲಿ ಜಗದೀಶ್ವರಯ್ಯ ಹಿರೇಮಠ.
 
ಕೊಪ್ಪಳ,
ಅ.೧೪ (ಕ ವಾ) ಮಕ್ಕಳ ಹಕ್ಕುಗಳಾದ ಬದುಕುವ ಹಕ್ಕು, ರಕ್ಷಣೆಯ ಹಕ್ಕು,
ವಿಕಾಸ ಮತ್ತು ಅಭಿವೃದ್ಧಿ ಹೊಂದುವ ಹಕ್ಕು ಹಾಗೂ ಭಾಗವಹಿಸುವ ಹಕ್ಕುಗಳನ್ನು ಮಕ್ಕಳು
ತಮ್ಮ ಬಾಲ್ಯದಲ್ಲಿ ಅನುಭವಿಸುವಂತಾಗಬೇಕು ಎಂದು ಮಕ್ಕಳ ವಿಶೇಷ ಪೊಲೀಸ್ ಘಟಕದ
ಜಗದೀಶ್ವರಯ್ಯ ಹಿರೇಮಠ ಹೇಳಿದರು.
        ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ
ಇವರ ವತಿಯಿಂದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಾಗಿ ತಾಲೂಕಿನ ಕರ್ಕಿಹಳ್ಳಿಯ
ಸರಕಾರಿ ಪ್ರೌಢ ಶಾಲೆಯಲ್ಲಿ ಅ.೦೯ ರಂದು ಆಯೋಜಿಸಲಾಗಿದ್ದ ಮಕ್ಕಳ ಹಕ್ಕುಗಳ ಜಾಗೃತಿ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
       
ಪ್ರಸ್ತುತ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ  ಸಂಬಂಧಿಸಿದಂತೆ ಲೈಂಗಿಕ
ದೌರ್ಜನ್ಯದಿಂದ ಮಕ್ಕಳ ಸಂರಕ್ಷಣೆ ಕಾಯ್ದೆ (ಪೋಸ್ಕೊ-೨೦೧೨) ಬಗ್ಗೆ ಮಾಹಿತಿ ನೀಡಿದ
ಅವರು, ಇತ್ತಿಚೀನ ದಿನಗಳಲ್ಲಿ ಮಹಿಳೆ ಮತ್ತು ಮಕ್ಕಳ ಸಾಗಾಣಿಕ ಹೆಚ್ಚಾಗುತ್ತಿದ್ದು,
ಪ್ರಾಥಮಿಕವಾಗಿ ಮಹಿಳೆ ಮತ್ತು ಮಕ್ಕಳ ರಕ್ಷಣೆಯ ಹೆಚ್ಚಿನ ಜವಾಬ್ದಾರಿ ಮೂಲತಃ ಕುಟುಂಬದ
ಮೇಲಿರುತ್ತದೆ ಎಂದು ತಿಳಿಸಿದರು.  ಆರೈಕೆ ಮತ್ತು ಪೋಷಣೆ ಅವಶ್ಯಕತೆಯಿರುವ ಯಾವುದೇ
ಮಗುವನ್ನು ಯಾರೇ ವ್ಯಕ್ತಿಗಳು ಆರೈಕೆ ಮತ್ತು ಪೋಷಣೆಗಾಗಿ ಜಿಲ್ಲಾ ಮಕ್ಕಳ ರಕ್ಷಣಾ
ಘಟಕಕ್ಕೆ ಹಾಜರಪಡಿಸಬಹುದಾಗಿದೆ. ೧೮ ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಹಾಗೂ ೨೧
ವರ್ಷದೊಳಗಿನ ಗಂಡು ಮಕ್ಕಳಿಗೆ ಬಾಲ್ಯವಿವಾಹ ಮಾಡುವುದು ಅಪರಾಧವಾಗಿದ್ದು, ಒಂದು ವೇಳೆ
ಮಾಡಿದ್ದೇ ಆದಲ್ಲಿ ಅಂತವರಿಗೆ ಕಾನೂನಿನಡಿ ೧ ಲಕ್ಷ ರೂ. ದಂಡ ಅಥವಾ ೨ ವರ್ಷ ಜೈಲು
ಶಿಕ್ಷ್ಷೆ ವಿಧಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
         ಜಿಲ್ಲಾ ಮಕ್ಕಳ
ರಕ್ಷಣಾ ಘಟಕದ ರವಿ ಬಡಿಗೇರ ಗಿಣಿಗೇರ ಮಾತನಾಡಿ, ಮಕ್ಕಳ ರಕ್ಷಣೆಗಾಗಿ ಸರ್ಕಾರವು ಹಲವಾರು
ಕಾನೂನು ಮತ್ತು ಯೋಜನೆಗಳನ್ನು ಜಾರಿಗೊಳಿಸಿದೆ. ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ
ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಅನಾಥ ಮಕ್ಕಳಿಗೆ ಶಿಕ್ಷಣ ಸೌಲಭ್ಯಕ್ಕಾಗಿ
ಪ್ರಾಯೋಜಕತ್ವ ಕಾರ್ಯಕ್ರಮ ಜಾರಿಯಲ್ಲಿದೆ. ಈ ಕಾರ್ಯಕ್ರಮದಡಿ ಆಯ್ಕೆಯಾದ ಮಕ್ಕಳಿಗೆ ಅವರ
ಆರೈಕೆ ಮತ್ತು ಪೋಷಣೆಗಾಗಿ ಮತ್ತು ಶೈಕ್ಷಣಿಕ ವೆಚ್ಚಕ್ಕಾಗಿ ಪ್ರತಿ ಮಾಸಿಕ  ರೂ.೧೦೦೦/-
ಗಳಂತೆ ಮೂರು ವರ್ಷದವರೆಗೆ ನೀಡಲಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ
ಮಕ್ಕಳ ಕಲ್ಯಾಣ ಸಮಿತಿ ಕೊಪ್ಪಳ ಇವರನ್ನು ಸಂಪರ್ಕಿಸಬಹುದಾಗಿದೆ. ಅಲ್ಲದೆ,
ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಗುರುತಿಸಿದ ತೀವ್ರ ಸಂಕಷ್ಠದಲ್ಲಿರುವ, ಎಚ್.ಐ.ವಿ ಭಾದಿತ
ಹಾಗೂ ಸೋಂಕಿತ  ಮಕ್ಕಳ ಆರೈಕೆ ಮತ್ತು ಪೋಷಣೆಗಾಗಿ ಮಗು ೧೮ ವರ್ಷ ಪೂರೈಸುವವರೆಗೂ ಪ್ರತಿ
ತಿಂಗಳು ರೂ. ೬೫೦ ರಿಂದ ರೂ. ೭೫೦ ರವರೆಗೆ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ.
ಯೋಜನೆಯಡಿ ಸಂಕಷ್ಟಕ್ಕೊಳಗಾದ ಮಕ್ಕಳ ರಕ್ಷಣೆಗಾಗಿ ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣೆಯನ್ನು
ಆರಂಭಿಸಲಾಗಿದ್ದು, ಸಾರ್ವಜನಿಕರು ೧೦೯೮ ಗೆ ದೂರವಾಣಿ ಕರೆ ಮಾಡಿ, ಸಂಕಷ್ಟಕ್ಕೊಳಗಾದ
ಮಕ್ಕಳ ಬಗ್ಗೆ ಮಾಹಿತಿ ನೀಡುವಂತೆ ಕೋರಿದರು.
       ಶಾಲೆಯ ಸಹ ಶಿಕ್ಷಕ ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಸಿದ್ದು ಪೂಜಾರ  ವಂದಿಸಿದರು.

Please follow and like us:
error

Related posts

Leave a Comment