ಅಡಿಗೆ ಮತ್ತು ಅಡಿಗೆ ಸಹಾಯಕರ ಗೌರವಧನ ವೇತನ ಹೆಚ್ಚಳಕ್ಕೆ ಸರ್ಕಾರ ಬದ್ಧ

  ಮಧ್ಯಾಹ್ನದ ಬಿಸಿ ಊಟ ಯೋಜನೆಯಡಿ ಅಡಿಗೆ ಮತ್ತು ಅಡಿಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ನೀಡಲಾಗುತ್ತಿರುವ ಗೌರವ ಧನವನ್ನು   ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ತಿಳಿಸಿದರು.
ಈ ಯೋಜನೆಗೆ 1200 ಕೋಟಿ ರೂ. ಅನುÀದಾನದ ಅವಶ್ಯಕತೆ ಇದ್ದು ಕೇಂದ್ರ ಸರ್ಕಾರವು ಶೇಕಡ 75 ರಷ್ಟು ಹಾಗೂ ರಾಜ್ಯ ಸರ್ಕಾರವು ಶೇಕಡ 25 ರಷ್ಟು ಅನುದಾನವನ್ನು ಒದಗಿಸುತ್ತದೆ.  ಪ್ರಸ್ತುತ ರಾಜ್ಯದಲ್ಲಿ ಒಟ್ಟಾರೆ 1 ಲಕ್ಷದ 20 ಸಾವಿರ ಅಡಿಗೆ ಸಿಬ್ಬಂದಿಗಳು ಈ ಯೋಜನೆಯಡಿ ಕಾರ್ಯನಿರ್ವಹಿಸುತ್ತಿದ್ದು,  ಅದರಲ್ಲಿ 49,959 ಮಂದಿ ಅಡುಗೆಯವರು ಹಾಗೂ 69,083 ಮಂದಿ ಅಡುಗೆ ಸಹಾಯಕರಿದ್ದಾರೆ ಎಂದು ಮಾಹಿತಿ ನೀಡಿದರು.
ವಿಧಾನ ಪರಿಷತ್ತಿನಲ್ಲಿಂದು ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಜಿ.ಎಸ್. ನ್ಯಾಮಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಮುಖ್ಯ ಅಡುಗೆಯವರಿಗೆ 1700 ರೂ ಹಾಗೂ ಅಡುಗೆ ಸಹಾಯಕರಿಗೆ 1600 ರೂ. ವೇತನ ಗೌರವಧನವನ್ನು ನೀಡಲಾಗುತ್ತಿದೆ.  ಇದು ನಿಜಕ್ಕೂ ಕಡಿಮೆಯಾಗಿದ್ದು,  ನಾನು ಈಗಾಗಲೇ ಕೇಂದ್ರ ಸಚಿವೆ ಸ್ಮøತಿ ಇರಾನಿಯವರೊಂದಿಗೆ ಖುದ್ದಾಗಿ ಚರ್ಚಿಸಿದ್ದು ಪತ್ರ ಕೂಡ ಬರೆದಿದ್ದೇನೆ.  ಸಧ್ಯದಲ್ಲಿಯೇ ಅವರ ಗೌರವಧನವನ್ನು ಹೆಚ್ಚಿಸುವುದಾಗಿ ಭರವಸೆ ನೀಡಿದ್ದಾರೆ.  ಕೇಂದ್ರ ಸರ್ಕಾರವು ತಮ್ಮ ಭಾಗದ ಶೇಕಡ 75 ರಷ್ಟನ್ನು ಹೆಚ್ಚಿಸಿದರೆ ಕೂಡಲೇ ರಾಜ್ಯ ಸರ್ಕಾರವೂ ಶೆÉೀಕಡ 25 ರಷ್ಟನ್ನು ಹೆಚ್ಚಿಸುವುದಾಗಿ ಸಚಿವರು ಭರವಸೆ ನೀಡಿದರು.ಶಾಲಾ ವಿದ್ಯಾರ್ಥಿಗಳು ಹೆಚ್ಚಿರುವ ಶಾಲೆಗಳಲ್ಲಿ ಇಬ್ಬರು ಅಡುಗೆಯ ಸಹಾಯಕರನ್ನು ನೇಮಿಸಿಕೊಳ್ಳಲು ಅವಕಾಶವಿದೆಯೆಂದು ಸಚಿವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
Please follow and like us:
error