ಬಹದ್ದೂರು ಬಂಡಿ ಗ್ರಾಮ ಪಂಚಾಯತ ಕಾಂಗ್ರೇಸ್ ಮಡಿಲಿಗೆ :-

  ಬಹದ್ದೂರು ಬಂಡಿ ಗ್ರಾಮ ಪಂಚಾಯತ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಯಾದ ಶ್ರೀಮತಿ ರತ್ನಮ್ಮ ಇಂದ್ರಮ್ಮನವರ ಬಿಜೆಪಿ ಬೆಂಬಲಿತ ಪ್ರತಿಸ್ಪರ್ದಿಯಾದ ಶ್ರೀಮತಿ ವೀರಮ್ಮ ಹೂಗಾರ ಅವರ ವಿರುದ್ದ ೧ ಮತದ ಅಂತರದಿಂದ ಜಯಶಾಲಿಯಾಗಿ ಅದ್ಯಕ್ಷರಾಗಿ ಆಯ್ಕೆಯಾದರು. ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗೆ ೧೧ ಸದಸ್ಯರು ಬೆಂಬಲ ಸೂಚಿಸಿದರು. ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ೧೦ ಸದಸ್ಯರು ಬೆಂಬಲ ಸೂಚಿಸಿದರು. ತೀವ್ರ ತುರುಸುಗೊಂಡ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಜಯಶಾಲಿಯಾಗಿ ಬಿಜೆಪಿ ಬೆಂಬಲಿಗರು ತೀವರ ಮುಖಬಂಗಗೊಂಡರು. 
ಈ ಸಂದರ್ಭದಲ್ಲಿ  ಜಿ.ಪಂ. ಸದಸ್ಯರಾದ ಶ್ರೀಮತಿ ಸೀತಾ

ಗೂಳಪ್ಪ ಹಲಗೇರಿ, ದೊಡ್ಡಬಸಪ್ಪ ಲಿಂಗಪ್ಪ ಬಡಿಗೇರ,ಸಂಜೀವಪ್ಪ ಹೊಸಳ್ಳಿ, ಸೈಯದಸಾಬ ಕಿಲ್ಲೇದಾರ, ಯಂಕಪ್ಪ ತಳವಾರ, ಸೋಮಪ್ಪ ವಾಲಿಕಾರ, ಗಾಳೆಪ್ಪ, ಶ್ರೀಮತಿ, ಶಕುಂತಲಾ, ಮಾರ್ಕಂಡೆಪ್ಪ, ಹನಮವ್ವ ನಾಯಕ, ಚಾಂದಪಾಷಾ ಕಿಲ್ಲೇದಾರ, ರಾಮಣಗೌಡ, ಗ್ಯಾನಪ್ಪ ಹ್ಯಾಟಿ, ಬಸವರಾಜ ಹಾಲವರ್ತಿ, ಚಿನ್ನರಡ್ಡಿ, ಸುರೇಶ ಮಾದಿನೂರು, ಜಡಿಯಪ್ಪ ಬಂಗಾಳಿ, ದೇವೇಂದ್ರಪ್ಪ ಮಜ್ಜಗಿ, ಅರುಣ ಶೆಟ್ಟಿ, ರಫಿ ಆರ್.ಎಂ, ಹನುಮೇಶ ಹೊಸಳ್ಳಿ ಇನ್ನೂ ಅನೇಕರು ಉಪಸ್ಥಿತರಿದ್ದರು.

Leave a Reply