ಮಹಾ ಶಿವರಾತ್ರಿ

ಕೊಪ್ಪಳ: ಹುಲಿಕೆರೆ ಬಲದಂಡೆ ಕಾಲುವೇ ಮೇಲೆ ಪ್ರತಿ ವರ್ಷದಂತೆ ಈ ವರ್ಷವೂ ಇದೇ ಶ್ರೀ ಶಾಲಿವಾಹನ ಶಕೆ ೧೯೩೬ ನೇ ಜಯನಾಂ ಸಂವತ್ಸರ ಮಾಘ ಬ.೧೩ ದಿನಾಂಕ ೧೭-೦೨-೨೦೧೫ ರ ಮಂಗಳವಾರ ಸಂಜೆ ೬:೦೦ ಗಂಟೆಯಿಂದ ಬೆಳಗಿ ತನಕ ಸಂಗೀತ, ಶಿವಕೀರ್ತನೆ, ಶಿವಭಜನೆ ಹಾಗೂ ಪ್ರವಚನ ಕಾರ್ಯಕ್ರಗಳು ಜರುಗುತ್ತವೆ. 
ಕನ್ನಡ ಮತ್ತು ಸಂಸ್ಕೃತ ಇಲಾಖೆ ಕೊಪ್ಪಳ ಇವರ ಸ್ಥಳಿಯ ಪ್ರಯೋಜಿತ ಕಾರ್ಯಕ್ರಮದಡಿ ಶ್ರೀಮತಿ ಹೇಮಾ ಪ್ರಸಾದ ಬೆಂಗಳೂರ ಇವರಿಂದ ಸುಗಮ ಸಂಗೀತ, ಮತ್ತು ಬೆಂಗಳೂರಿನ ಅಂತರಾಷ್ಟ್ರೀಯ ಕಲಾವಿದ ಪ್ರಸನ್ನ ಗುಡಿ ’ಭಕ್ತಿ ಸಂಗೀತ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 
ಶ್ರೀ ಮಾರುತೇಶ್ವರನಿಗೆ ರುದ್ರಾಬಿಷೇಕ ಮಾಡಲಾಗುವುದು. ಶಿವರಾತ್ರೆ ಜಾಗರಣೆದಿನದಂದು ದೇವಸ್ಥಾನಕ್ಕೆ ತೆರಳಲು ರಾತ್ರಿ ೮:೦೦ ಘಂಟೆಯಿಂದ ಗಡಿಯಾರ ಸ್ಥಂಬದಿಂದ ಉಚಿತ ವಾಹನ ಸೌಕರ್ಯ ಏರ್ಪಡಿಸಲಾಗಿದೆ ಎಂದು ಶ್ರೀ ಶಿವರಾತ್ರೇಶ್ವರ ದೇವಸ್ಥಾನ ಸಮಿತಿಯ ಸಗಣ್ಣ ಸೊಂಡೂರು ತಿಳಿಸಿದ್ದಾರೆ.
Please follow and like us:
error