ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಓಜನಹಳ್ಳಿಯಲ್ಲಿ

ರಾಷ್ಟ್ರೀಯ ಸೇವಾ ಯೋಜನೆಯ ವಾಷಿಕ ವಿಶೇಷ ಶಿಬಿರವು ಓಜನಹಳ್ಳಿಯಲ್ಲಿ ಜರುಗುತ್ತಿದ್ದು ದಿ.೧೩-೦೪-೨೦೧೫ ರಂದು ನಡೆದ ಉಪನ್ಯಾಸ ಕಾರ‍್ಯಕ್ರಮದ 
ಕೊಪ್ಪಳ: ಏ:೧೪: ಮನುಷ್ಯನ ಜೀವನದಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಮನೋಭಾವನೆಗಳು ಸಹಜ, ನಾವು ಸಕಾರಾತ್ಮಕ ಮನೋಭಾವನೆಗಳನ್ನು ಬೆಳೆಸಿಕೊಂಡರೆ ಮನುಷ್ಯನ ಜೀವನ ಉನ್ನತಮಟ್ಟಕ್ಕೆ ಬೆಳೆಯಲು ಕಾರಣವಾಗುತ್ತವೆ ಎಂದು ಸಮಾಜಸೇವಾ ಕರ್ತ  

ಶಿವನಗೌಡ ಪೋಲಿಸ ಪಾಟೀಲ ಅವರು ಹೇಳಿದರು.

ಅವರು ತಾಲೂಕಿನ ಓಜನಹಳ್ಳಿ ಗ್ರಾಮದಲ್ಲಿ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾಷಿಕ ವಿಶೇಷ ಶಿಬಿರದ ಕಾರ್ಯಕ್ರಮದಲ್ಲಿ ಯುವಜನತೆ ಮತ್ತು ಸಕಾರಾತ್ಮಕ ಮನೋಧರ್ಮ ಕುರಿತು ಉಪನ್ಯಾಸ ನೀಡಿದರು.
ಬದುಕಿನ ಎಂತಹದೇ ಕಷ್ಟ ಸಂದರ್ಭದಲ್ಲಿ ದೈರ‍್ಯ ಕಳೆದುಕೋಳ್ಳದೆ ಟೀಕೆ ಟಿಪ್ಪಣಿಗಳಿಗೆ ತಲೆ ಕೆಡಿಸಿಕೋಳ್ಳದೆ ಸಧಾ ಸದ್ವಿಚಾರ ಮಾಡುತ್ತ ಗುರಿಯತ್ತ ಮುನ್ನುಗ್ಗಬೇಕು ಅಪಮಾನಗಳನ್ನು ಮೆಟ್ಟಿನಿಲ್ಲುವ ವಿಫಲತೆಗಳನ್ನು ಸಫಲತೆಯನ್ನಾಗಿ ಮಾರ್ಪಡಿಸುವ ಚಿಂತನೆಯೆಂದರೆ ಸಕಾರಾತ್ಮಕ ಚಿಂತನೆಯಾಗಿದೆ ಈ ನಿಟ್ಟಿನಲ್ಲಿ ಯುವಜನತೆ ಸಣ್ಣಪುಟ್ಟ ಸೋಲುಗಳಿಗೆ ಆತ್ಮಹತ್ತೆಯತ್ತ  ಸಾಗದೆ ಆತ್ಮಶ್ರದ್ದೆ ಬೆಳೆಸಿಕೂಂಡು ಸಮಾಜದಲ್ಲಿ ಉನ್ನತಸ್ಥಾನಕ್ಕೆರ ಬೇಕೆಂದರು.
ಕಾರ್ಯಕ್ರಮದ ಅದ್ಯಕ್ಷತೆವಹಿಸಿ ಮಾತನಾಡಿದ ಡಾ.ಬಸವರಾಜ ಪೂಜಾರ ರವರು ಸಕಾರತ್ಮಕ ಮನೋಧರ್ಮ ಯುವಕರ ಮನದಲ್ಲಿ ಅಂತರ್ಗತವಾದರೆ ಎಂತಹ ಸೋಲುಗಳನ್ನು ಎದೆಗುಂದದೆ ಎದುರಿಸಬಹುದು ಜೀವನ ಒಂದು  ಸಾಹಸಯಾತ್ರಯಾಗಿದ್ದು ಸಕಾರಾತ್ಮಕ ಮನೋಧರ್ಮ ಸಾರಥಿಯಾದರೆ ಮಾತ್ರ ಯಶಸ್ಸು ಸಾದ್ಯ ಎಂದರು.
ಸಮಾರಂಭದ ವೇದಿಕೆಯ ಮೇಲಿರುವ ಗಣ್ಯರನ್ನು ಶಿಬಿರಾಧಿಕಾರಿ ಸ್ವಾಗತಿಸಿದರೆ, ನಿರೂಪಣೆಯನ್ನು ಶಿಬಿರಾರ್ಥಿ ಚನ್ನಬಸವಯ್ಯ ನಿರ್ವಹಿಸಿದರು, ಶಿಬಿರಾಧಿಕಾರಿಯಾದ ಡಾ.ಜೆ.ಎಸ್.ಪಾಟೀಲ ಶಿಬಿರದ ಸಾಧನೆಗಳನ್ನು ವಿವರಿಸಿದರು.
Please follow and like us:
error

Related posts

Leave a Comment