fbpx

ಯಶಸ್ವಿ ಕಥಾವಾಚನ ಹಾಗೂ ಕವಿಗೋಷ್ಠಿ


 ಕೊಪ್ಪಳ : ಕನ್ನಡನೆಟ್ ಡಾಟ್ ಕಾಂ ಕವಿಸಮೂಹ  ಪ್ರವಾಸಿ ಮಂದಿರದ ಎದುರಿನ ಈಶ್ವರ ಗುಡಿಯ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ೯೮ನೇ ಕವಿಸಮಯ ಯಶಸ್ವಿಯಾಗಿ ನಡೆಯಿತು.  ಈ ಸಲ ಕಥಾವಾಚನ ಮತ್ತು ಕವನವಾಚನವನ್ನು ಹಮ್ಮಿಕೊಳ್ಳಲಾಗಿತ್ತು. ಡಾ.ಅಮರೇಶ ನುಗಡೋಣಿಯವರ ” ಏ ದಿಲ್ ಮಾಂಗೆ ಮೋರ್” ಕತೆಯನ್ನು ಶಿವಪ್ರಸಾದ ಹಾದಿಮನಿ ವಾಚನ ಮಾಡಿದರು.

ನಂತರ ನಡೆದ ಕವಿಗೋಷ್ಠಿಯಲ್ಲಿ ಡಾ. ಬಸವರಾಜ ಕುಂಪಾ – ಹಿರಿದರ್ಥ, ವೀರಣ್ಣ ಹುರಕಡ್ಲಿ- ಬಂದಿದೆ ಯುಗಾದಿ, ಎ.ಪಿ.ಅಂಗಡಿ- ಈ ಗಾದಿ, ಬಸವರಾಜ ಚೌಡ್ಕಿ- ಚೈತ್ರದ ಚಿಗುರು, ಗುರುರಾಜ ದೇಸಾಯಿ- ಸಿಗದವಳು, ಎ.ಎಚ್.ಅತ್ತನೂರು- ಶಾಯಿರಿಗಳು,  ಸಿರಾಜ್ ಬಿಸರಳ್ಳಿ- ಗೋಡೆಗಳು, ಪುಷ್ಪಲತಾ ಏಳುಬಾವಿ – ಹೊಸ ವರುಷ, ವಿಜಯಲಕ್ಷ್ಮೀ ಮಠದ- ಪರಿಭ್ರಮಣ, ಡಾ.ರೇಣುಕಾ ಕರಿಗಾರ- ಲವ್ಲಿ,  ವಿಠ್ಠಪ್ಪ ಗೋರಂಟ್ಲಿ- ಕಳೆದಿದ್ದಾಳೆ ಕವಿತೆ, ಬಸವರಾಜ ಸಂಕನಗೌಡರ- ಕನ್ನಡ ಶಾಯಿರಿ, ಅಲ್ಲಮಪ್ರಭು ಬೆಟ್ಟದೂರ- ಕವಿತಾ, ಅನಸೂಯಾ ಜಾಗೀರದಾರ-  ಚೈತ್ರದ ಸ್ವಗತ , ಪ್ರಕಾಶ ವಿಶ್ವಕರ್ಮ- ಕಾಡು ಬೆಳೆಸಿ, ಶಿವಪ್ರಸಾದ ಹಾದಿಮನಿ- ಬಸವಣ್ಣ, ಶರಣಪ್ಪ ದಾನಕೈ- ಪ್ರೇಮಪತ್ರ ಕವನಗಳನ್ನು ವಾಚನ ಮಾಡಿದರು. 
ಕಾರ್‍ಯಕ್ರಮದಲ್ಲಿ ಹನುಮಂತಪ್ಪ ಅಂಡಗಿ, ಶಿವಾನಂದ ಹೊದ್ಲೂರ, ಕೃಷ್ಣಪ್ಪ ಸಂಗಟಿ, ವಾಸುದೇವ ಕುಲಕರ್ಣಿ, ರವಿತೇಜ,ಶಿವನಗೌಡ ಪಾಟೀಲ್, ಮಹೇಶ ಬಳ್ಳಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.  ಸ್ವಾಗತವನ್ನು ಗುರುರಾಜ ದೇಸಾಯಿ ಹಾಗೂ ವಂದನಾರ್ಪಣೆಯನ್ನು ಡಾ.ರೇಣುಕಾ ಕರಿಗಾರ , ಕಾರ್‍ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು. 
Please follow and like us:
error

Leave a Reply

error: Content is protected !!