ಜನೇವರಿಯಲ್ಲಿ ಕೆಡಿಸಿಸಿ ಬ್ಯಾಂಕ್ ಆರಂಭ

ಕೊಪ್ಪಳ : ಜಿಲ್ಲೆಯಾದ 13 ವರ್ಷಗಳ ನಂತರ ಕೊಪ್ಪಳ ಜಿಲ್ಲಾ ಮದ್ಯವರ್ತಿ ಸಹಕಾರಿ ಬ್ಯಾಂಕ್ ಅಸ್ತಿತ್ವಕ್ಕೆ ಬರಲಿದ್ದು ಎಲ್ಲ ಪ್ರಕ್ರಿಯೆಗಳು ರಿಸರ್ವ ಬ್ಯಾಂಕ್ ಅನುಮತಿ ಬಾಕಿ ಉಳಿದಿದೆ ಎಂದು ಆರ್ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಮೇಶ ವೈದ್ಯ ಹೇಳಿದ್ದಾರೆ.
ಆರ್ ಡಿಸಿಸಿ ಬ್ಯಾಂಕ್ ನಿಂದ ವಿಂಗಡನೆಯಾಗಿ ಅಸ್ತಿತ್ವಕ್ಕೆ ಬರಲಿರುವ ಕೆಡಿಸಿಸಿ ಬ್ಯಾಂಕ್ ಗೆ 28ಕೋಟಿ ರೂ.ಡಿಪಾಸಿಟ್ ಬರಲಿದೆ. ಇಷ್ಟು ಬೃಹತ್ ಮೊತ್ತದೊಂದಿಗೆ ಆರಂಭವಾಗಲಿರುವ ಬ್ಯಾಂಕ್ ಕೆಡಿಸಿಸಿ ಬ್ಯಾಂಕ್ ಎಂದು ಹೇಳಿದರು.
ಜನೇವರಿಯಲ್ಲಿ ಆರಂಭವಾಗುವ ಕೆಡಿಸಿಸಿ ಬ್ಯಾಂಕ್ ಹಳೇ ಜಿ.ಪಂ. ಕಟ್ಟಡದಲ್ಲಿ ಕಾರ್ಯರಂಭ ಮಾಡಲಿದ್ದು ಅಗತ್ಯ ಸೌಲಭ್ಯಗಳಿಗಾಗಿ 3 ಕೋಟಿ ಖರ್ಚು ಮಾಡಲಾಗುವುದು ಬ್ಯಾಂಕ್ ನ ಸೇವೆ ಆರಂಭಿಸಲಾಗುವುದು ಎಂದರು.
Please follow and like us:
error