You are here
Home > Koppal News > ಸೇವಾ ವಿದ್ಯಾಲಯದಲ್ಲಿ ವಿಜೃಂಭಣೆಯ ಟಿಪ್ಪು ಜಯಂತಿ

ಸೇವಾ ವಿದ್ಯಾಲಯದಲ್ಲಿ ವಿಜೃಂಭಣೆಯ ಟಿಪ್ಪು ಜಯಂತಿ

ಕಿನ್ನಾಳ ಗ್ರಾಮದ ಸೇವಾ ವಿದ್ಯಾಲಯದಲ್ಲಿ ಇಂದು ಟಿಪ್ಪು ಸುಲ್ತಾನ್‌ರ ೨೬೭ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಟಿಪ್ಪು ಸುಲ್ತಾನ್ ರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಕಾರ‍್ಯಕ್ರಮ ಚಾಲನೆ ನೀಡಲಾಯಿತು. ಕಾರ‍್ಯಕ್ರಮ ಉದ್ಘಾಟಿಸಿದ ಗ್ರಾ.ಪಂ.ಸದಸ್ಯರಾದ ವಿರೇಶ ತಾವರಗೇರಿ ಟಿಪ್ಪು ಸುಲ್ತಾನ್ ರ ಜೀವನ ಹೋರಾಟ ಮಕ್ಕಳಿಗೆ ಸ್ಪೂರ್ತಿ ನೀಡುವಂತಹದ್ದು. ಟಿಪ್ಪು ಸುಲ್ತಾನ್‌ರ ದೇಶಪ್ರೇಮ ಮತ್ತು ಹೋರಾಟದ ಮತ್ತು ನಾಯಕತ್ವದ ಗುಣಗಳನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಂಸ್ಥೆಯ ಶಿಕ್ಷಕರು ಟಿಪ್ಪು ಸುಲ್ತಾನ್‌ರ ಜೀವನ & ದೇಶಪ್ರೇಮದ ಕುರಿತು  ಮಾತನಾಡಿದರು. ಕಾರ‍್ಯಕ್ರಮದಲ್ಲಿ ಶಾಲೆಯ ಶಿಕ್ಷಕರು,ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಿದ್ದರು.  ಕಾರ‍್ಯಕ್ರಮಕ್ಕೆ ಪ್ರಾರ್ಥನೆಯನ್ನು ಅಶ್ವಿನಿ ಹಾಗೂ ಸಂಗಡಿಗರು, ಸ್ವಾಗತವನ್ನು ದಾವಲಸಾಬ ಬೆಟಗೇರಿ ಕೋರಿದರು. ನಿರೂಪಣೆಯನ್ನು ಪರಶುರಾಮ ಇಟಗಿ ಹಾಗು ವಂದನಾರ್ಪಣೆಯನ್ನು ಯಲ್ಲಮ್ಮ ಪೂಜಾರ ಮಾಡಿದರು. 

Leave a Reply

Top