೨೯-೧೦-೨೦೧೦ರಂದು ನೇಕಾರರ ಬೇಡಿಕೆಗೆ ಆಗ್ರಹಿಸಿ ರಸ್ತಾ ರೋಖೋ

ಕರ್ನಾಟಕ ಕೈಮಗ್ಗ ನೇಕಾರರ ಸಂಘದ ಬಹುದಿನಗಳ ಬೇಡಿಕೆಗೆ ಆಗ್ರಹಿಸಿ ರಾಜ್ಯ ಕೈಮಗ್ಗ ನೇಕಾರರ ಸಂಘದ ಕರೆಯ ಮೇರೆಗೆ ಶುಕ್ರವಾರ ೨೯-೧೦-೨೦೧೦ರಂದು ಭಾಗ್ಯನಗರ,ಕಿನ್ನಾಳ ಮತ್ತು ಕುಕನೂರಿನ ನೇಕಾರರು ಬೆಳಿಗ್ಗೆ ೧೧ ಗಂಟೆಗೆ ಭಾಗ್ಯನಗರದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಅಶೋಕ ಸರ್ಕಲ್ ಹತ್ತಿರ ರಾಸ್ತಾರೋಖೋ ಮಾಡಿ ನಂತರ ತಹಶೀಲದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು.
ಕೆಎಚ್ ಡಿಸಿ ನೇಕಾರರ ಮನೆಸಾಲ ಮನ್ನಾ ಮುಂತಾದ ಬೇಡಿಕೆಗಳು ಪ್ರಮುಖವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ನೇಕಾರರು ಭಾಗವಹಿಸಲು ಕೈಮಗ್ಗ ನೇಕಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Please follow and like us:
error