ಸನ್ಮಾನ

ಕೊಪ್ಪಳ: ಸರ್ಕಾರಿ ಅಂಗವಿಕಲ ನೌಕರರ ವಿವಿಧ ಬೇಡಕೆಗಳ ಈಡೇರಿಕೆಗಾಗಿ ಸತತ ಹೋರಾಟ ನಡೆಸಿದ ಸಂಘದ ರಾಜ್ಯಾಧ್ಯಕ್ಷರಾದ ಎಸ್.ರೇಣುಕಾರಾಧ್ಯ,ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಬೀರಪ್ಪ ಅಂಡಗಿ ಚಿಲವಾಡಗಿ ಹಾಗೂ ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಮನಿಯವರನ್ನು ರವಿವಾರದಂದು ಹಾಸನ ನಗರದ ಕಲಾಭವನದ ಹಿಂದಿನ ಉತ್ತರ ಬಡಾವಣೆ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸರ್ಕಾರಿ ಅಂಗವಿಕಲ ನೌಕರರ ಸಭೆಯಲ್ಲಿ ಹಾಸನ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.
     ಈ ಸಂದರ್ಭದಲ್ಲಿ ಹಾಸನ ಜಿಲ್ಲಾಧ್ಯಕ್ಷರಾದ ಎಸ್.ಜೆ.ರಾಮಕೃಷ್ಣ,ಉಪಾಧ್ಯಕ್ಷರಾದ ಚಂದ್ರಾಯಿಗೌಡ,ಪ್ರಧಾನ ಕಾರ್ಯದರ್ಶಿ ನಾಗರಾಜ.ಹೆಚ್.ಸಿ.ಖಂಜಾಚಿ ಅಂಥೋನಪ್ಪ.ಎಸ್ ಮುಂತಾದವರು ಹಾಜರಿದ್ದರು.

Related posts

Leave a Comment