ವಿಶ್ವಕರ್ಮ ಪೂಜಾ ಮಹೋತ್ಸವ.


ನಗರದ ಶ್ರೀ ಸಿರಸಪ್ಪಯ್ಯ ಸ್ವಾಮಿ ಮಠದಲ್ಲಿ ಇಂದು ಬುಧವಾರ ೨೩-೦೯-೨೦೧೫ ರಂದು ಶ್ರೀ ವಿಶ್ವಕರ್ಮ ಸೇವಾ ಸಮಿತಿ ನಗರ ಘಟಕದಿಂದ ೩ನೇ ವರ್ಷದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಕಾರ್ಯಕ್ರಮ ಜರಿಗಲಿದೆ. ಕಾರ್ಯಕ್ರಮದಲ್ಲಿ ಶ್ರೀ ಸಿರಸಪ್ಪಯ್ಯ ಸ್ವಾಮಿ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದು, ವೇ.ಬ್ರ. ಶ್ರೀ ಸುಬ್ಬಣ್ಣಾಚಾರ್ಯ ಮತ್ತು ಮುತ್ತಾಚಾರ್ಯ ರವರು ಪುರೋಹಿತವಹಿಸುತ್ತಿದ್ದಾರೆ. ಬೆಳಗ್ಗೆ ೮.೩೦ಕ್ಕೆ ಶ್ರೀ ವಿಶ್ವಕರ್ಮ ಧ್ವಜಾರೋಹಣ, ೯.೦೦ ರಿಂದ ೧೧.೩೦ಗಂ ವರೆಗೆ ಕಥಾಶ್ರವಣ ಹಾಗೂ ಶ್ರೀ ವಿಶ್ವಕರ್ಮ ಪೂಜಾ, ೧೨.೦೦ಗಂ ಗೆ ಮಹಾ ಮಂಗಳಾರತಿ, ಮಧ್ಯಾಹ್ನ ೧.೦೦ಕ್ಕೆ ಮಹಾ ಪ್ರಸಾದ ನೆರವೇರಲಿದೆ. ಕಾರಣ ಸದ್ಭಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಿ ಶ್ರೀವಿಶ್ವಕರ್ಮ ಕೃಪೆಗೆ ಪಾತ್ರರಾಗಬೇಕೆಂದು ಅಧ್ಯಕ್ಷರಾದ ಶ್ರೀ ಮಂಜುನಾಥ ಬನ್ನಿಕೊಪ್ಪ ತಿಳಿಸಿದ್ದಾರೆ.

Please follow and like us:
error