ಕುಡಿಯುವ ನೀರು ಸಂಗ್ರಹಿತ ಜಾಕ್‌ವೆಲ್ ಸುತ್ತಮುತ್ತಲ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ.

ಕೊಪ್ಪಳ ಮಾ. ೧೯ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕಾತರಕಿ ಜಾಕ್‌ವೆಲ್ ಹಾಗೂ ನೀಲೋಗಿಪುರ ಜಾಕ್‌ವೆಲ್ ಬಳಿ ಸಂಗ್ರಹಿಸಲಾಗಿರುವ ನೀರನ್ನು ಕೃಷಿ ಹಾಗೂ ಇತರೆ ಯಾವುದೇ ಉದ್ದೇಶಕ್ಕಾಗಿಯೂ ಎತ್ತುವಳಿ ಮಾಡದಂತೆ, ಜಾಕ್‌ವೆಲ್ ಸುತ್ತಮುತ್ತಲ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
ಕಾತರಕಿ ಜಾಕ್‌ವೆಲ್ : ತುಂಗಭದ್ರಾ ನದಿ ವ್ಯಾಪ್ತಿಯ ಕಾತರಕಿ ಜಾಕ್‌ವೆಲ್‌ನಿಂದ ಬನ್ನಿಗೋಳ ಜಾಕ್‌ವೆಲ್ ಹತ್ತಿರದ ವರೆಗಿನ ಪ್ರದೇಶದಲ್ಲಿ ನೀರನ್ನು ಸಂಗ್ರಹಿಸಲಾಗಿರುವ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಆದೇಶ ಹೊರಡಿಸಲಾಗಿದೆ.  ಅದರನ್ವಯ ಯಾವುದೇ ವ್ಯಕ್ತಿ ಈ ಪ್ರದೇಶದಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆ ಸಂಗ್ರಹಿಸಲಾಗಿರುವ ನೀರನ್ನು ಬೇರೆ ಯಾವುದೇ ಉದ್ದೇಶಕ್ಕೆ ನೇರವಾಗಿ ಅಥವಾ ಪಂಪ್‌ಸೆಟ್ ಬಳಸಿ ನೀರನ್ನು ಎತ್ತುವಳಿ ಮಾಡುವಂತಿಲ್ಲ.  ನಿಷೇಧಿತ ಪ್ರದೇಶದಲ್ಲಿ ಈಜು, ಇನ್ನಿತರೆ ವಿಹಾರ ಅಥವಾ ಜಲಕ್ರೀಡೆಗಳಂತಹ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.  ಅಲ್ಲದೆ ನಿಷೇಧಿತ ವಲಯದಲ್ಲಿ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ಸಹ ನಿಷೇಧಿಸಿದೆ.  ಕುಡಿಯುವ ನೀರಿನ ಉದ್ದೇಶವನ್ನು ಹೊರತುಪಡಿಸಿ ಇತರೆ ಯಾವುದೇ ಉದ್ದೇಶಕ್ಕೆ ಪಂಪ್‌ಸೆಟ್ ಮೂಲಕ ನೀರು ಹರಿಸುವುದು ಕಂಡುಬಂದಲ್ಲಿ, ಕೊಪ್ಪಳ ನಗರಸಭೆ ಪೌರಾಯುಕ್ತರು, ಕಾತರಕಿ ಗ್ರಾಮ ಪಂಚಾಯತಿ ಪಿಡಿಓ/ಕಾರ್ಯದರ್ಶಿ ಅಥವಾ ಈ ವ್ಯಾಪ್ತಿಯ ಕಂದಾಯ ನಿರೀಕ್ಷಕರು ಅಂತಹ ಪಂಪ್‌ಸೆಟ್‌ಗಳನ್ನು ಜಪ್ತಿ ಮಾಡುವರು.  ಗ್ರಾಮೀಣ ನೀರು ಸರಬರಾಜು ಇಲಾಖೆ ಕೊಪ್ಪಳದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕೊಪ್ಪಳ ತಹಸಿಲ್ದಾರರು ಹಾಗೂ ಕೊಪ್ಪಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ನಿಷೇಧಾಜ್ಞೆ ಜಾರಿ ಆದೇಶ ಪರಿಣಾಮಕಾರಿಯಾಗು ಅನುಷ್ಠಾನವಾಗುತ್ತಿರುವ ಬಗ್ಗೆ ಮೇಲ್ವಿಚಾರಣೆ ನಡೆಸಲಿದ್ದಾರೆ.  ನಿಷೇಧಿತ ವಲಯದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ.  ಒಂದು ವೇಳೆ ಈ ಆದೇಶವನ್ನು ಯಾರೇ ಉಲ್ಲಂಘಿಸಿದರೂ ಅಂತಹವರ ವಿರುದ್ಧ ಗ್ರಾ.ಪಂ. ಪಿಡಿಓ/ಕಾರ್ಯದರ್ಶಿ ಅಥವಾ ಕಂದಾಯ ನಿರೀಕ್ಷಕರು ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ನಿಲೋಗಿಪುರ ಜಾಕ್‌ವೆಲ್ : ಕೊಪ್ಪಳ ಹಾಗೂ ಯಲಬುರ್ಗಾ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸುವ ಸಲುವಾಗಿ ಬೋಚನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ನಿಲೋಗಿಪುರ ಗ್ರಾಮದ ತುಂಗಭದ್ರಾ ನದಿಯ ಬಳಿ ಅಳವಡಿಸಲಾಗಿರುವ ಜಾಕ್‌ವೆಲ್ ಬಳಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರು ಸಂಗ್ರಹಿಸಲಾಗಿದ್ದು, ನಿಲೋಗಿಪುರ ಜಾಕ್‌ವೆಲ್ ಹತ್ತಿರ ಸಂಗ್ರಹಿಸಲಾಗಿರುವ ನೀರಿನ ಸುತ್ತಮುತ್ತಲ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಆದೇಶ ಹೊರಡಿಸಲಾಗಿದೆ.  ಅದರನ್ವಯ ಯಾವುದೇ ವ್ಯಕ್ತಿ ಈ ಪ್ರದೇಶದಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆ ಸಂಗ್ರಹಿಸಲಾಗಿರುವ ನೀರನ್ನು ಬೇರೆ ಯಾವುದೇ ಉದ್ದೇಶಕ್ಕೆ ನೇರವಾಗಿ ಅಥವಾ ಪಂಪ್‌ಸೆಟ್ ಬಳಸಿ ನೀರನ್ನು ಎತ್ತುವಳಿ ಮಾಡುವಂತಿಲ್ಲ.  ನಿಷೇಧಿತ ಪ್ರದೇಶದಲ್ಲಿ ಈಜು, ಇನ್ನಿತರೆ ವಿಹಾರ ಅಥವಾ ಜಲಕ್ರೀಡೆಗಳಂತಹ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.  ಅಲ್ಲದೆ ನಿಷೇಧಿತ ವಲಯದಲ್ಲಿ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ಸಹ ನಿಷೇಧಿಸಿದೆ.  ಕುಡಿಯುವ ನೀರಿನ ಉದ್ದೇಶವನ್ನು ಹೊರತುಪಡಿಸಿ ಇತರೆ ಯಾವುದೇ ಉದ್ದೇಶಕ್ಕೆ ಪಂಪ್‌ಸೆಟ್ ಮೂಲಕ ನೀರು ಹರಿಸುವುದು ಕಂಡುಬಂದಲ್ಲಿ, ಗ್ರಾಮೀಣ ನೀರು ಸರಬರಾಜು ಇಲಾಖೆಯ ವಿಭಾಗೀಯ ಅಧಿಕಾರಿ, ಸಂಬಂಧಪಟ್ಟ ಗ್ರಾಮ ಪಂಚಾಯತಿ ಪಿಡಿಓ/ಕಾರ್ಯದರ್ಶಿ ಅಥವಾ ಈ ವ್ಯಾಪ್ತಿಯ ಕಂದಾಯ ನಿರೀಕ್ಷಕರು ಅಂತಹ ಪಂಪ್‌ಸೆಟ್‌ಗಳನ್ನು ಜಪ್ತಿ ಮಾಡುವರು.  ಗ್ರಾಮೀಣ ನೀರು ಸರಬರಾಜು ಇಲಾಖೆ ಕೊಪ್ಪಳ ಹಾಗೂ ಯಲಬುರ್ಗಾದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕೊಪ್ಪಳ, ಯಲಬುರ್ಗಾ ತಹಸಿಲ್ದಾರರು ಹಾಗೂ ಕೊಪ್ಪಳ ಮತ್ತು ಯಲಬುರ್ಗಾ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ನಿಷೇಧಾಜ್ಞೆ ಜಾರಿ ಆದೇಶ ಪರಿಣಾಮಕಾರಿಯಾಗು ಅನುಷ್ಠಾನವಾಗುತ್ತಿರುವ ಬಗ್ಗೆ ಮೇಲ್ವಿಚಾರಣೆ ನಡೆಸಲಿದ್ದಾರೆ.  ನಿಷೇಧಿತ ವಲಯದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ.  ಒಂದು ವೇಳೆ ಈ ಆದೇಶವನ್ನು ಯಾರೇ ಉಲ್ಲಂಘಿಸಿದರೂ ಅಂತಹವರ ವಿರುದ್ಧ ಗ್ರಾ.ಪಂ. ಪಿಡಿಓ/ಕಾರ್ಯದರ್ಶಿ ಅಥವಾ ಕಂದಾಯ ನಿರೀಕ್ಷಕರು ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
Please follow and like us:
error