fbpx

ಹಿರೇವಂಕಲಕುಂಟಾ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರ ಯಶಸ್ವಿ ಬಸವರಾಜ ಪಲ್ಲೇದ.

ಯಲಬುಗಾ: ಇತ್ತಿಚೆಗೆ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊಪ್ಪಳ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ವಿಶ್ವ ಮಹಾ  ಪರಿಷತ್ ಶ್ರೀಗುರು ಮಹಿಪತರಾಜ ನೇತ್ರ  ಸೇವಾ ಸಂಸ್ಥೆ, ವಿನಾಯಕ ಆಪ್ಟಿಕಲ್ಸ್ ಕುಷ್ಟಗಿ, ಹಾಗೂ ಹುಬ್ಬಳ್ಳಿಯ ಖ್ಯಾತ ನೇತ್ರ ತಜ್ಞ ಡಾ.ಎಂ.ಎಂ ಜೋಷಿ ನೇತ್ರ ವಿಜ್ಞಾನ ಸಂಸ್ಥೆ, ವಿನಾಯಕ ನೇತ್ರ ಸೇವಾ ಸಂಸ್ಥೆ ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರದಲ್ಲಿ ೩೮ ಜನರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಯಿತು ಎಂದು ಕೊಪ್ಪಳದ ವಿನಾಯಕ ನೇತ್ರ ಸೇವಾ ಸಂಸ್ಥೆ ಅಧ್ಯಕ್ಷ ಬಸವರಾಜ ಪಲ್ಲೇದ ಹೇಳಿದರು. ವಿವಿzs ರಿತೀಯ ಕಣ್ಣಿನ ತೊಂದರೆಗೆ ಓಳಗಾದ ೨೫೦ ಜನ ರೋಗಿಗಳನ್ನು ತಪಾಸಣೆ ನೆಡೆಸಿ ಅವರುಗಳ ಪೈಕಿ ೩೮ ಜನರನ್ನು ಶಸ್ತ್ರ ಚಿಕಿತ್ಸೆಗೆ ಅ.೩ ರಂದು ಸಂಜೆ ನಮ್ಮ ಸಂಸ್ಥೆ ಮೂಲಕ ಹುಬ್ಬಳ್ಳಿಯ ಡಾ.ಎಂ.ಎಂ ಜೋಷಿ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಈ ಸಂದರ್ಭದಲ್ಲಿ ಡಾ.ಶೇಖರ, ಡಾ.ನವೀನ್, ಸಾರ್ವಜನಿಕ ಸಂರ್ಪಕ ಅಧಿಕರಿಗಳಾದ ಸಂಜಿವ ಕುಲಕರ್ಣಿ, ಡಾ.ಡಿ.ಜಿ ಕುಲಕರ್ಣಿ, ರತ್ನಾ, ನೇತ್ರಾಧಿಕಾರಿ ಶರಣು, ವಿನಾಯಕ ನೇತ್ರ ಸೇವಾ ಸಂಸ್ಥೆ ಉಪಾಧ್ಯಕ್ಷ ಚಂದ್ರಶೇಖರ ಉತ್ತಂಗಿ, ಕಾರ್ಯದರ್ಶಿ ಪ್ರಭು ಜ್ಯಾಗೀರದಾರ ಇನ್ನಿತರರು ಉಪಸ್

ಥಿತರಿದ್ದರು.

Please follow and like us:
error

Leave a Reply

error: Content is protected !!