ಶ್ರೀಕೃಷ್ಣನ ಆದರ್ಶಪಾಲನೆಯಿಂದ ಮುಕ್ತಿ – ಸಂಸದ.

ಕೊಪ್ಪಳ, ೦೯- ಶ್ರೀಕೃಷ್ಣ ಮನುಕುಲಕ್ಕೆ ಸರ್ವವನ್ನು ನೀಡಿ ಭಗವದ್ಗಿತೆಯಲ್ಲಿ ಎಲ್ಲವನ್ನು ತಿಳಿಸಿದ್ದು ಅದರ ಪಾಲನೆಯಿಂದ ಮಾತ್ರ ಸತ್ಯ ಹಾಗೂ ಮುಕ್ತಿ ದೊರೆಯುವುದುದೆಂದು ಸಂಸದ ಸಂಗಣ್ಣ ಕರಡಿ ಹೇಳಿದರು. ಅವರು ನಗರದ ಪ್ರಶಾಂತ ಬಡಾವಣೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ನಿಮಿತ್ಯೆ ಶ್ರೀ ಮದ್ಯೋಗೀಶ್ವರ ಯಾಜ್ಞವಲ್ಕ್ನ ಸಮಿತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಭಗವಂತನ ಮಾತುಗಳು ನಡೆನುಡಿಗಳು ನಮಗೆ ಆದರ್ಶ ಪ್ರಾಯವಾಗಿದೆ. ಮನುಷ್ಯ ಎಷ್ಟೆ ಮುಂದುವರೆದರು ಧಾರ್ಮಿಕ ಕೆಲಸಗಳಿಂದ ಮಾತ್ರ ನೆಮ್ಮದಿ ಕಾಣಬಲ್ಲ ಎಂದು ಹೇಳಿದರು.  ಭಂಡಾರಕೇರೆ ಮಠದ ಶ್ರೀಗಳು ಚರ್ತುರ ಮಾಸ ಕೊಪ್ಪಳದಲ್ಲಿ ನಡೆಯುತ್ತಿರುವುದು ನಮ್ಮೇಲ್ಲರ ಸೌಭಾಗ್ಯ ಎಂದು ಹೇಳಿದ ಇವರು ಶ್ರೀಯಾಜ್ಞವಲ್ಕ್ಯ ಪ್ರತಿಷ್ಠಾನ ನಿರಂತರ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಪ್ರಶಂಶನಿಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ರಮೇಶ ಜಹಗಿದಾರ ವಹಿಸಿದ್ದರು, ವೇಣುಗೋಪಾಲ ನಿರುಪಿಸಿದರು.

Please follow and like us:
error