fbpx

ನ. ೦೭ ರಂದು ಕೊಪ್ಪಳದಲ್ಲಿ ಗಾನಯಾನ ಸ್ವರ ಮಧುರ ಸಂಗೀತ ಕಾರ್ಯಕ್ರಮ.

ಕೊಪ್ಪಳ ನ. ೦೪ (ಕ ವಾ) ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾಡಳಿತ ಇವರ ಸಂಯುಕ್ತ ಆಶ್ರಯದೊಂದಿಗೆ ಗಾನಯಾನ ಕನ್ನಡ ಚಿತ್ರಗೀತೆಗಳ ಸ್ವರ ಮಧುರ ರಸಮಂಜರಿ ಕಾರ್ಯಕ್ರಮ ನ. ೦೭ ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ.
     ಕನ್ನಡ ನಾಡಿನ ಹಿರಿಮೆ ಸಂಸ್ಕೃತಿಯನ್ನು ಸಾರುವಲ್ಲಿ ಕನ್ನಡ ಚಲನಚಿತ್ರ ಗೀತೆಗಳ ಕೊಡುಗೆ ಅನುಪಮವಾದುದು.  ಚಲನಚಿತ್ರ ಗೀತೆಗಳು ಚಲನಚಿತ್ರಗಳ ಅವಿಭಾಜ್ಯ ಅಂಗವಾಗಿದೆ.  ಚಲನಚಿತ್ರ ಗೀತೆಗಳು ನಮ್ಮ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿದ್ದು, ಹಾಡುಗಳನ್ನು ಕೇಳದಿರುವವರು ಬಹು ವಿರಳ.  ಕನ್ನಡ ಚಲನಚಿತ್ರ ರಂಗವು ಚಲನಚಿತ್ರ ಗೀತೆಗಳೊಂದಿಗೆ ಬೆಸೆದುಕೊಂಡಿದ್ದು, ಒಂದನ್ನೊಂದು ಬಿಟ್ಟಿರಲಾರದ ಅವಿನಾಭಾವ ಸಂಬಂಧವನ್ನು ಹೊಂದಿದೆ.  ಕನ್ನಡ ಚಿತ್ರ ರಂಗದ ಬೆಳವಣಿಗೆಗೆ ತನ್ನದೇ ಆದ ಕೊಡುಗೆಯನ್ನು ನೀಡುವಲ್ಲಿ ಕನ್ನಡ ಚಿತ್ರಗೀತೆಗಳ ಪಾತ್ರ ಅಮೂಲ್ಯವಾದುದು.  ಇವುಗಳನ್ನು ನಾಡಿನ ಜನತೆಗೆ ಕಟ್ಟಿಕೊಡುವ ಪ್ರಯತ್ನವನ್ನು  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕೈಗೊಂಡಿದ್ದು, ಹಳೆಯ ಮತ್ತು ಹೊಸ ಕನ್ನಡ ಚಿತ್ರಗೀತೆಗಳ ಸ್ವರ ಮಧುರ ಗಾನಯಾನ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ನ. ೦೭ ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದೆ.  ಬೆಂಗಳೂರಿನಿಂದ ಸ್ವರ ಮಧುರ ತಂಡವು ಈ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದು, ಹಿನ್ನೆಲೆ ಗಾಯಕರುಗಳಾದ ಉದಯ ಅಂಕೋಲ, ಮಹೇಶ್ ಪ್ರಿಯದರ್ಶನ್, ದ್ರಾಕ್ಷಾಯಿಣಿ ಹಾಗೂ ವಸುಂಧರಾ ಸೇರಿದಂತೆ ಎಂಟು ಜನರ ಕಲಾ ತಂಡ ಗಾನಯಾನ ಕಾರ್ಯಕ್ರಮ ನಡೆಸಿಕೊಡುವರು.  ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶಾವಕಾಶವಿರುತ್ತದೆ.  ಕನ್ನಡ ಚಿತ್ರ ಗೀತೆಗಳ ಸಂಗೀತ ಆಸಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಕೋರಿದ್ದಾರೆ.
Please follow and like us:
error

Leave a Reply

error: Content is protected !!