fbpx

ಏಕಗಂಟು ತೀರುವಳಿ ಯೋಜನೆ ಜಾರಿ

  ಕರ್ನಾಟಕ ರಾಜ್ಯದಲ್ಲಿ ಖಾದಿ ಆಯೋಗದಿಂದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮೂಲಕ ಯೋಜನಾಧಾರಿತ ಧನಸಹಾಯ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ ಸಾಲ ಪಡೆದ ಘಟಕಗಳಿಗೆ ಬಡ್ಡಿ ಮನ್ನಾ ಮಾಡುವುದರೊಂದಿಗೆ ಏಕಗಂಟು ತೀರುವಳಿ ಯೋಜನೆಯನ್ನು ಜಾರಿಗೊಳಿಸಿದೆ.
ಏಕಗಂಟು ತೀರುವಳಿ ಯೋಜನೆಯು 2014 ರ ಏ. 01 ರಿಂದ ಜಾರಿಗೆ ಬಂದಿದ್ದು, ಮಂಡಳಿಯಿಂದ ಧನಸಹಾಯ ಸ್ವರೂಪ ಯೋಜನೆಯಲ್ಲಿ ಪಡೆದಿರುವ ಸಾಲಕ್ಕೆ ಮಾತ್ರ ಅನ್ವಯಿಸುತ್ತದೆ.  ಮಂಡಳಿಯಿಂದ ಆರ್ಥಿಕ ನೆರವು ಪಡೆದ ಖಾದಿ ಸಂಘ ಸಂಸ್ಥೆಗಳು ಹಾಗೂ ವಯಕ್ತಿಕ ಕಸಬುದಾರರು ಈ ಯೋಜನೆಯಲ್ಲಿ ಬಾಕಿ ಇರುವ ಪೂರ್ಣಸಾಲದ ಮೊತ್ತವನ್ನು ದಿನಾಂಕ: 31-3-2015 ರೊಳಗೆ ಒಂದೇ ಬಾರಿ ಅಥವಾ ಕಂತುಗಳಲ್ಲಿ ಮರುಪಾವತಿ ಮಾಡಿದರೆ ಮಾತ್ರ ಬಡ್ಡಿಯನ್ನು ಮನ್ನಾ ಮಾಡಲಾಗುವುದು. ಸಾಲ ಬಾಬ್ತಿನ ಮೇಲೆ ಯಾವುದೇ ವ್ಯಾಜ್ಯ ಪ್ರಕರಣಗಳು ಇಲ್ಲದಿರುವ ಪ್ರಕರಣಗಳಿಗೆ ಮಾತ್ರ ಒಟಿಎಸ್ ಯೋಜನೆ ಅನ್ವಯಿಸುತ್ತದೆ. ಸಾಲವನ್ನು ದಿನಾಂಕ: 31-3-2015 ರೊಳಗೆ ಮರುಪಾವತಿಸದೇ ಇದ್ದಲ್ಲಿ, ಸಾಲ ಬಾಕಿ ಉಳಿಸಿಕೊಂಡಲ್ಲಿ ಅಂತಹ ಪ್ರಕರಣದಲ್ಲಿ ಭೂಕಂದಾಯ ಕಾಯ್ದೆ ಅನುಸರಿಸಿ ಬಾಕಿ ಇರುವ ಸಾಲವನ್ನು ವಸೂಲಾತಿ ಮಾಡಲು ಕ್ರಮ ಕೈಗೊಳ್ಳಲಾಗುವುದು.  ಜಿಲ್ಲೆಯಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಧನಸಹಾಯ ಸ್ವರೂಪ ಯೋಜನೆಯಲ್ಲಿ ಆರ್ಥಿಕ ನೆರವು ಪಡೆದ ಸಂಘ ಸಂಸ್ಥೆ, ವಯ್ಯಕ್ತಿಕ ಕಸಬುದಾರರು ಈ ಯೋಜನೆಯು ಸದುಪಯೋಗ ಪಡಿಸಿಕೊಂಡು ಮಂಡಳಿಯ ಸಾಲ ಬಾಕಿ ಮರುಪಾವತಿಸುವ ಮೂಲಕ ಖಾದಿ ಮಂಡಳಿಯ ಸಾಲದಿಂದ ಋಣ ಮುಕ್ತರಾಗಲು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳು ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!