ಬಡಮಹಿಳೆಯರ ಬದುಕು ರೂಪಿಸುವಲ್ಲಿ ಸಂಜೀವಿನಿ ತರಬೇತಿ ಅವಶ್ಯಕ /

ಮಹಿಳಾ ಸ್ವ-ಸಹಾಯ ಸಂಘಗಳ ಬಲವರ್ಧನೆಗೆ – ಸಂಜೀವಿನಿ
ಕೊಪ್ಪಳ – ದಿ : ೧೪ ಮಹಿಳೆಯರು ಬಡತನ ಹೋಗಾಲಾಡಿಸಲು ಸ್ವಾವಲಂಬಿಯಾಗಿ ಉದ್ಯೋಗ ಕೈಗೊಳ್ಳುವ ಮೂಲಕ ಹಸನಾದ ಬದುಕು ರೂಪಿಸಿಕೊಳ್ಳಬೇಕೆಂದು ಭಾಗ್ಯನಗರ ಗ್ರಾಮ ಪಂಚಾಂiiತ ಅಧ್ಯಕ್ಷರಾದ  ಹೊನ್ನೂರುಸಾಬ ಮಹ್ಮದಸಾಬರವರು ಹೇಳಿದರು. ತಾಲೂಕಿನ ಭಾಗ್ಯನಗರ ಗ್ರಾಮ ಪಂಚಾಯತ ಸಭಾಂಗಣದಲ್ಲಿ ನಡೆದ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿ ಯೋಜನೆಯಡಿಯಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಮಾರ್ಥ್ಯ ಬಲವರ್ಧನೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 
ಈ ಸಂಧರ್ಭದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಯಾದ   ಜಂಭಣ್ಣ ನಂದ್ಯಾಪುರರವರು ಮಾತನಾಡಿ, ಸಂಜೀವಿನಿ ಯೋಜನೆಯು ಗ್ರಾಮೀಣ ಬಡ ಮಹಿಳೆಯರಿಗೆ ಸುತ್ತು ನಿಧಿ ಮತ್ತು ಬಡ್ಡಿ ಸಹಾಯ ಧನ ನೀಡುವ ಮೂಲಕ ಸ್ವ-ಸಹಾಯ ಸಂಘಗಳ ಆರ್ಥಿಕ ಅಭಿವೃದ್ಧಿಗೆ ಮತ್ತು ಸ್ವಾವಲಂಬನೆ ಬದುಕು ಹೊಂದುವಲ್ಲಿ ಮತ್ತು ನಿರುದ್ಯೋಗಿಗಳಿಗೆ ಸ್ವ-ಉದ್ಯೋಗ ಮತ್ತು ಗೃಹ ಆಧಾರಿತ ಚಟುವಟಿಕೆಗಳಿಗೆ ವಿಶೇಷ ಆಧ್ಯತೆ ಕಲ್ಪಿಸುವ ಮಹತ್ತರವಾದ ಯೋಜನೆಯಾಗಿದೆಂದು ಹೇಳಿದರು. ಈ ಸಂಧರ್ಭದಲ್ಲಿ ಸಂಜೀವಿನಿ ಯೋಜನೆಯ ಜಿಲ್ಲಾ ವ್ಯವಸ್ಥಾಪಕರಾದ   ಮಲ್ಲಿಕಾರ್ಜುನ ಪಿ.ಎಸ್. ರವರು ಕಾರ್ಯಕ್ರಮದ ಸ್ಥೂಲ ಪರಿಚಯ ಹಾಗೂ ಪ್ರಾಸ್ತಾವಿಕವಾಗಿ ಯೋಜನೆ ಕುರಿತು ನಿರೂಪಿಸಿದರು. ಜಿಲ್ಲಾ ವ್ಯವಸ್ಥಾಪಕರಾದ   ನಟರಾಜ ಹೆಚ್.ಡಿ.ರವರು ಸ್ವಾಗತಿಸಿದರು. ತಾಲೂಕ ವಲಯ ಮೇಲ್ವಿಚಾರಕರಾದ   ಪ್ರಸನ್ನಕುಮಾರ ಬಿ.ಆರ್. ರವರು ಪ್ರಾರ್ಥಿಸಿದರು.
 ಈ ಸಂಧರ್ಭದಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ  ಗಣೇಶ ಹೊರತಟ್ನಾಳರವರು ಸ್ವ-ಸಹಾಯ ಸಂಘದ ಮಹಿಳೆಯರಿಗೆ ಯೋಜನೆಯ ಕುರಿತು ಕೆಲವೊಂದು ಆಟಗಳ ಮೂಲಕ ಚಟುವಟಿಕೆಗಳನ್ನು ನಡೆಸಿಕೊಟ್ಟರು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಶ್ರೀಮತಿ ಹುಲಿಗೇಮ್ಮರವರು, ತಾಲೂಕ ವಲಯ ಮೇಲ್ವಿಚಾರಕರಾದ ಶ್ರೀಮತಿ ವಿದ್ಯಾಲಕ್ಷ್ಮಿರವರು ಹಾಜರಿದ್ದರು. 
Please follow and like us:
error