ನಿರಂತರ ಅಧ್ಯಯನವೊಂದೇ ಕಾವ್ಯದ ಗಟ್ಟಿ ಸೆಲೆ

ಕೊಪ್ಪಳ: ಸೆ,೩೦, ಕಾವ್ಯ ಸೃಷ್ಠಿಗೆ ನಿರಂತರ ಅಧ್ಯಯನಶೀಲತೆ ಪ್ರಮುಖ ಪಾತ್ರವಹಿಸುತ್ತದೆ. ಯಾರು ಶ್ರಮದ ಅಧ್ಯಯನಕ್ಕೆ ತೊಡೆ ತಟ್ಟಿ ನಿಲ್ಲುತ್ತಾರೋ ಅಂಥವರು ಮಾತ್ರ ಗಟ್ಟಿ ಕಾವ್ಯ ಹೊಸೆಯಲು ಸಾಧ್ಯ ಎಂದು ಸಾಹಿತಿ ಅಕ್ಬರ್ ಸಿ ಕಾಲಿಮಿರ್ಚಿ ಅಭಿಪ್ರಾಯ ಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವ ೨೦೧೪-೧೫ ನಿಮಿತ್ಯ ಕೊಪ್ಪಳ ಜಿಲ್ಲಾ ಹಾಗೂ ತಾಲುಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶೀವೆಂಬ ಪ್ರಕಾಶನ ಸಹಯೋಗದಲ್ಲಿ ತಾಲುಕಿನ ಬೂದಿಹಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕವಿ ವಾಸುದೇವ ಬಾ ಕುಲಕರ್ಣಿಯವರು ಬರೆದ ಮುಂಜಾವು ಕವನ ಸಂಕಲನ ಲೋಕಾಣೆ ಸಂದರ್ಭದಲ್ಲಿ ಕೃತಿಯನ್ನು ಕುರಿತು ಮಾತನಾಡಿದರು. 
ಸಂಕಲನದಲ್ಲಿ ಹಲವು ಕವಿತೆಗಳು ರಾಜಕೀಯ ವಿಡಂಬನೆ, ವೈಚಾರಿಕ ಪ್ರಜ್ಞೆ, ಸ್ತ್ರೀ ಶೋಷಣೆ ಮತ್ತು ಬಂಡಾಯ ಸಂವೇದನೆಯ ಕವಿತೆಗಳ ಕುರಿತು ಮಾತನಾಡಿದರಲ್ಲದೇ ಕಾವ್ಯ ಮನಸ್ಸಿಗೆ ತಾಗದೆ ಉಳಿಯಬಲ್ಲದು ಎಂದರು. 
ಕೃತಿಯನ್ನು ಲೋಕಾರ್ಪಣೆಗೊಳಿಸಿದ ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ್ ಮಾತನಾಡಿ ಕಾವ್ಯ ಸದಾ ಸಮಾಜವನ್ನು ಸರಿದಾರಿಗೆ ತರುವಲ್ಲಿ ಪ್ರಮುಖಪಾತ್ರ ವಹಿಸುತ್ತದೆ. ಹಾಗಾಗಿ ಕಾವ್ಯ ಖಡ್ಗವಾಗಿದೆ ಎಂದು ಹೇಳಿದರು. ಯುವಕರು ಸದಾ ಓದಿನ ಬಗ್ಗೆ ಗಮನಹರಿಸಲು ಸಲಹೆ ನೀಡಿದರು. 
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಪ್ಪಳ ತಾಲೂಕ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ವೆಂಕನಗೌಡ ಹಿರೇಗೌಡ್ರ ಮಾತನಾಡಿ ಸಾಹಿತ್ಯ ಕ್ಷೇತ್ರದಲ್ಲಿ ಕೊಪ್ಪಳ ಜಿಲ್ಲೆ ಮುಂದಿದೆ. ಅಲ್ಲದೇ ಹಲವು ಸಾಧಕರನ್ನು ಬೆಳೆಸಿದ ಕೀರ್ತಿ ಈ ಜಿಲ್ಲೆಗೆ ಸಂದಿದೆ ಎಂದರು. 
ಜಿಲ್ಲಾ ಕಸಾಪ ಅಧ್ಯಕ್ಷ ವೀರಪ್ಪ ನಿಂಗೋಜಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಕವನ ಸಂಕಲನ ಕುರಿತು ಮಾತನಾಡಿದರು. ಸಾಹಿತಿ ಶಿ ಕಾ ಬಡಿಗೇರ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವಾನಂದ ಮೇಟಿ, ಯಲ್ಲನಗೌಡ ಮಾಲಿಪಾಟೀಲ, ಕವಿ ವಾಸುದೇವ ಕುಲಕರ್ಣಿ ಉಪಸ್ಥಿತರಿದ್ದರು. 
ಶಿಕ್ಷಕ ಸುರೇಶ ಅರಕೇರಿ ಕಾರ್ಯಕ್ರಮ ನಿರೂಪಿಸಿದರು.
Please follow and like us:
error