You are here
Home > Koppal News > ಭಾಗ್ಯನಗರದಲ್ಲಿ ರಕ್ತದಾನ ಶಿಬಿರ

ಭಾಗ್ಯನಗರದಲ್ಲಿ ರಕ್ತದಾನ ಶಿಬಿರ

 ಭಾಗ್ಯನಗರದಲ್ಲಿ  ಸುರಕ್ಷ ಪೌಂಡೇಶನ್ (ರಿ), ಗ್ರಾಮ ಪಂಚಾಯಿತಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಇವರ ಸಹಯೋಗದೊಂದಿಗೆ  ಹಾಗೂ ಗ್ರಾಮದ ಇತರೆ ಸಂಘ ಸಂಸ್ಥೆಗಳು ಕೈಜೋಡಿಸಿ ರಕ್ತದಾನ ಶಿಬಿರದಲ್ಲಿ  ಯಶಸ್ವಿಯಾಗಿ ಪಾಲ್ಗೊಂಡು ಹಾಗೂ ಗ್ರಾಮ  ಪಂಚಾಯಿತಿಯ ಸರ್ವ ಸದಸ್ಯರು, ಯುವ-ಯುವಕರು, ಮಹಿಳೆಯರು, ಸಾರ್ವಜನಿಕರೊಂದಿಗೆ  ದಿನಾಂಕ ೧೦/೧೧/೨೦೧೪ ರಂದು ಬೆಳಗ್ಗೆ ೧೦:೦೦ ರಿಂದ ಸಾಯಂಕಾಲ ೫:೦೦ ರ ವರೆಗೆ  ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಈ ಶಿಬಿರದಲ್ಲಿ ಅನೇಕ ಯುವಕರು, ಗ್ರಾಮ ಪಂಚಾಯತಿ ಸದಸ್ಯರು, ಸಂಸ್ಥತೆಯ ಸದಸ್ಯರು ಮತ್ತು ನಾಗರಿಕರು ರಕ್ತದಾನ ಮಾಡಿದರು.
ಇದಕ್ಕು ಮುಂಚೆ ಸುರಕ್ಷ ಪೌಂಡೇಶನ್, ಗ್ರಾಮ ಪಂಚಾಯಿತಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಹಾಗೂ  ಎಲ್ಲಾ ಸದಸ್ಯರು ಮತ್ತು ಗ್ರಾಮದ ನಾಗರಿಕರ ಸಮ್ಮುಖದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರವನ್ನು ಉಧ್ಘಾಟಿಸಿ ಮಾತನಾಡಿದ ಗ್ರಾಮಪಂಚಾಯಿತಿಯ ಅಧ್ಯಕ್ಷರಾದ   ಹೊನ್ನೂರ ಸಾಬ ಭೈರಾಪೂರ ರಕ್ತದಾನ ಶ್ರೇಷ್ಠ ದಾನ. ರಕ್ತದ ಕೊರತೆಯಿಂದ ಸಾವಿನ ಹಂಚಿನಲ್ಲಿರುವ ಜೀವಗಳಿಗೆ ರಕ್ತದಾನ ಮಾಡುವ ಮೂಲಕ ಆ ಜೀವಗಳಿಗೆ ಮರುಜೀವ ನೀಡುವ ಒಂದು ಅವಕಾಶ ಈ ರಕ್ತದಾನದ ಮೂಲಕ ಸಾದ್ಯ ಎಂದು ಹೇಳಿದರು. ಹಾಗೂ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳದ ಸಂಚಾಲಕರಾದ  ವೆಂಕಟೇಶ ನಾಯಕ್ ಅವರು ಮಾತನಾಡಿ ರಕ್ತದಾನದಿಂದ ಅಗುವ ಅನುಕೂಲ ಹಾಗೂ ರಕ್ತದಾನದ ಬಗ್ಗೆ ಇರುವ ಕೆಲ ಮೂಢ ನಂಬಿಕೆಗಳ ಬಗ್ಗೆ ತಿಳಿಹೇಳಿದರು. 
ಕಾರ್ಯಕ್ರಮವನ್ನು  ಪರಶುರಾಮ ನಾಯಕ್ ನಿರೂಪಿಸಿದರು ಹಾಗೂ ವಂದನಾರ್ಪಣೆಯನ್ನು ಮಾಡಿದರು. 
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ   ಹೊನ್ನೂರಸಾಬ ಭೈರಾಪೂರ ಗ್ರಾಮಪಂಚಾಯಿತಿಯ ಎಲ್ಲಾ ಸದಸ್ಯರು, ಮತ್ತು ಸುರಕ್ಷ ಪೌಂಡೇಶನ್ ಅಧ್ಯಕ್ಷರಾದ ಯಲ್ಲಪ್ಪ ಸಿ ಕವಲೂರ,  ಕಾರ್ಯದರ್ಶಿ ಚಂದ್ರೇಶ ಬೆದವಟ್ಟಿ, ಸೋಮಶೇಖರ ಮಡಿವಾಳರ, ಪದಾಧಿಕಾರಿಗಳು ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಇವರು ಭಾಗವಯಿಸಿದ್ದರು. 

Leave a Reply

Top