ಅತಿಥಿ ಉಪನ್ಯಾಸಕರ ಬಂಧನ ಅ.ಭಾ.ವಿ.ಪ ಖಂಡನೆ

ಪ್ರತಿಭಟನೆ ನಿರತ ಉಪನ್ಯಾಸಕರನ್ನು ಸಂಬಂಧಿಸಿದ್ದನ್ನು  ಅ.ಭಾ.ವಿ.ಪ ಖಂಡಿಸುತ್ತದೆ.  ರಾಜ್ಯದಲ್ಲಿ ಅನೇಕ ಜಿಲ್ಲೆ ತಾಲ್ಲೂಕಗಳಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರಿಲ್ಲದೆ. ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಆದರೆ ಈ ಬರ ಅತಿಥಿ ಉಪನ್ಯಾಸಕರನ್ನು ಬೆಳಗಾವಿಯ ಸುವರ್ಣ ಸೌಧದ ಬಳಿ ಬಂಧಿಸಿದ್ದಾರೆ ಈಗಿನ ಸರ್ಕಾರಗಳು ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯನ್ನು  ಮರೆತಂತಿದೆ ಹಲವು ವರ್ಷಗಳಿಂದ ಸರ್ಕಾರ ಹಾಗೂ ಅತಿಥಿ ಉಪನ್ಯಾಸಕರ ಮಧ್ಯೆ ನಡೆಯುತ್ತಿರುವ ಸಂಘರ್ಷದಲ್ಲಿ ಪಾಪ ಸರಕಾರಿ ಕಾಲೇಜುಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳು ಕಷ್ಟ ಅನುಭವಿಸುವ ಸ್ಥಿತಿ ರಾಜ್ಯದಲ್ಲಿ ಎದುರಾಗಿದೆ. ಖಾಸಗಿ ಸಂಸ್ಥೆಗಳಿಗೆ ಮಣೆಯಾಕುತ್ತಿರುವ ಸರ್ಕಾರ ಕೂಡಲೆ ಹೆಚ್ಚತ್ತುಕೊಳ್ಳಬೇಕು ರಾಜ್ಯದಲ್ಲಿ ಎದುರಾಗಿರುವ ಮಲತಾಯಿ ಧೋರಣೆಯನ್ನು ನಿಲ್ಲಿಸಬೇಕು. ಕೂಡಲೆ ಅತಿಥಿ ಉಪನ್ಯಾಸಕರ ಅನುಭವದ ಮೇರಿಗೆ ನೇಮಕ ಪ್ರಕ್ರೀಯೆಗೆ ಚಾಲನೆ ನೀಡಬೇಕು.  ಒಂದು ವೇಳೆ ಈ ಪ್ರವೃತ್ತಿಯೂ ಮುಂದುವರೆದಿದ್ದೆಯಾದಲ್ಲಿ ಎ.ಬಿ.ವಿ.ಪಿ.ಯೂ ರಾಜ್ಯಾದ್ಯಂತ   ಉಗ್ರವಾದ ಹೋರಾಟಕ್ಕೆ ಕರೆ  ನೀಡಲಾಗುವುದು ಎಂದು ಎಬಿವಿಪಿ ಎಚ್ಚರಿಸಿದೆ.
ಕೊಪ್ಪಳ ಶಾಖೆಯ ಎಲ್ಲಾ ಕಾರ್ಯಕರ್ತರು ತಹಶಿಲ್ಧಾರ ಕಛೇರಿಗೆ ತೆರಳಿ ತಹಶಿಲ್ಧಾರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.   
ಈ ಪ್ರತಿಭಟನೆಯ ನೇತೃತ್ವವನ್ನು : ಬಾಗಣ್ಣ ಎಸ್ ಹೊತಿನಮಡಿ, ಶರಣು ಕೊಳೂರು, ರಾಕೇಶ ಪಾನಘಂಟಿ, ದೀಪಕ ಹಿರೇಮಠ, ಸಾಗರ, ಶರಣು ಕುಚಬಾಳ, ಜಗದೀಶ.ಬಿ., ಅನಂತ ಬುರ್ಲಿ, ಕರಿಯಪ್ಪ, ನವೀನ, ಶಿವು, ಶ್ರೀಧರ, ಪ್ರಶಾಂತ.ಬಿ ಇನ್ನೂ ಅನೇಕ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.  

Leave a Reply