ಲೋಕಾಯುಕ್ತ ನ್ಯಾಯಮೂರ್ತಿಗಳ ಪ್ರವಾಸ : ಸಾರ್ವಜನಿಕ ದೂರು, ಅಹವಾಲುಗಳಿಗೆ ಆಹ್ವಾನ

 : ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಡಾ. ವೈ. ಭಾಸ್ಕರ್ ರಾವ್ ಅವರು ಫೆ. ೦೬ ರಂದು ಕೊಪ್ಪಳ ಜಿಲ್ಲೆಗೆ ಆಗಮಿಸಿ, ಸಾರ್ವಜನಿಕ ದೂರು, ಅಹವಾಲುಗಳ ವಿಚಾರಣೆ ನಡೆಸಲಿದ್ದು, ಸಾರ್ವಜನಿಕರು ತಮ್ಮ ಯಾವುದೇ ದೂರು, ಅಹವಾಲುಗಳನ್ನು ಫೆ. ೦೩ ರಿಂದ ೦೫ ರವರೆಗೆ ಕೊಪ್ಪಳ ಲೋಕಾಯುಕ್ತ ಡಿವೈಎಸ್‌ಪಿ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ. ಅಥವಾ ಫೆ. ೦೬ ರಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ಆವರಣದಲ್ಲಿಯೂ ಸಲ್ಲಿಸಲು ಅವಕಾಶವಿದೆ.

  ಸಾರ್ವಜನಿಕರು ಫೆ. ೦೩ ರಿಂದ ೦೫ ರವರೆಗೆ ದೂರು, ಅಹವಾಲು ಸಲ್ಲಿಸಲು ಡಿವೈಎಸ್‌ಪಿ ಕಚೇರಿಯಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ದೂರು, ಅಹವಾಲು ಸಲ್ಲಿಸಲು ಅಗತ್ಯವಿರುವ ನಮೂನೆ ೧ ಮತ್ತು ೦೨ ಅನ್ನು ಸ್ಥಳದಲ್ಲಿಯೇ ವಿತರಿಸಲಾಗುವುದು.  ಅಥವಾ ಫೆ. ೦೬ ರಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ಆವರಣದಲ್ಲಿಯೂ ಸಲ್ಲಿಸಲು ಅವಕಾಶವಿದೆ.  ಈ ರೀತಿ ಸ್ವೀಕೃತವಾದ ದೂರು, ಅರ್ಜಿಗಳ ವಿಚಾರಣೆಯನ್ನು ಲೋಕಾಯುಕ್ತ ನ್ಯಾಯಮೂರ್ತಿಗಳು ಫೆ. ೦೬ ರಂದು ಬೆಳಿಗ್ಗೆ ೧೦-೩೦ ರಿಂದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ನಡೆಸುವರು.  ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರುವರು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಹಾಗೂ ಕೊಪ್ಪಳ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಪಾಟೀಲ್ ಅವರು ತಿಳಿಸಿದ್ದಾರೆ.
Please follow and like us:
error