ವಚನಗಳು ಬದುಕಿನ ಸ್ಪೂರ್ತಿ.

ಕೊಪ್ಪಳ- ವಿಶ್ವಗುರು ಬಸವಣ್ಣನವರ ಮತ್ತು ಶಿವಶರಣರ ವಚನಗಳು ನಮ್ಮ  ತನು-ಮನದ ಅವಗುಣಗಳ ಕಳೆದು  ಬೌದ್ಧಿಕ ವಿಕಾಸ ಮಾಡಿ ನಮ್ಮಲ್ಲಿ  ವೈಚಾರಿಕತೆ, ನಾಯಕತ್ವ ಗುಣ, ಮನೋಸಾಮರ್ಥ ಬಿತ್ತುವ  ವಚನಗಳು ನಮ್ಮ  ಬದುಕಿನ ಸ್ಪೂರ್ತಿ ಎಂದು   ಸರಕಾರಿ  ಪ್ರಾಥಮಿಕ ಶಾಲಾ ಬಸಾಪಟ್ಟಣದ  ಶಿಕ್ಷಕಕರಾದ ಮಾನಪ್ಪ ಬೆಲ್ಲದ ಹೇಳಿದರು ಇವರು ವಿಶ್ವಗುರು ಬಸವೇಶ್ವರ  ಟ್ರಸ್ಟಿನ ಮಾಸಿಕ ಕಾರ್ಯಕ್ರಮವಾದ  ೫೯ನೇ ಶರಣ ಹುಣ್ಣಿಮೆಯ  ಅತಿಥಿ ಉಪನ್ಯಾಸಕರಾಗಿ ಮೇಲಿನಂತೆ  ಮಾತನಾಡುತ್ತಾ ಜಾತಿಯತೆ, ವರ್ಗ ವ್ಯವಸ್ಥೆ, ಅಸಮಾನತೆಯಂತಹ ಅನೇಕ ಸಮಸ್ಯೆಗಳಿಗೆ  ವಚನಗಳಲ್ಲಿ  ಪರಿಹಾರವಿದೆ ಎಂದು ಹೇಳಿದರು.  ಕಾರ್ಯಕ್ರಮದ ಅಧ್ಯಕ್ಷತೆ   ವಹಿಸಿದ್ದ  ಎಲ್.ಐ.ಸಿ.ಯ  ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಚಂದ್ರಪ್ಪ  ಮುದ್ದಿ  ಮಾತನಾಡಿ  ವಚನ ಸಾಹಿತ್ಯ ದಿನಪಠಣ ಮಾಡುವುದರಿಂದ   ನಮ್ಮಲ್ಲಿ  ಜೀವನೋತ್ಸಾಹ  ಹೆಚ್ಚುತ್ತದೆ.  ಮತ್ತು  ನಮ್ಮ  ಬದುಕು ಸಾರ್ಥಕವಾಗುತ್ತದೆ ಎಂದರು. ವೇದಿಕೆಯ ಮೇಲೆ  ಅತಿಥಿಗಳಾದ  ದೇವೀಶ್ ಗಬ್ಬೂರು ಉಪಸ್ಥಿತಿ ಇದ್ದರು. ಬಸವಯ್ಯ  ಸಸಿಮಠ ದಾಸೋಹ ವ್ಯವಸ್ಥೆ ವಹಿಸಿದ್ದರು. ಪಂಪಾಪತಿ ಹೊನ್ನಳ್ಳಿ, ವಿಶ್ವನಾಥ ನಿಲೋಗಲ್, ರಮೇಶ ಚಟ್ನಿಹಾಳ,  ಶರಣಪ್ಪ ಮಟ್ಟಿ, ಗದಿಗೆಪ್ಪ  ಅಮಾತಿ, ಶಿವಬಸಯ್ಯ  ವೀರಾಪೂರ, ಗವಿಸಿದ್ಧಪ್ಪ  ಮುದಗಲ್, ಶೇಖರ  ಇಂಗದಾಳ, ಮಹದೇವಿ  ಜೋಳದ, ಶ್ರೀದೇವಿ ಗೊರೆಬಾಳ್, ಬಸಮ್ಮ  ಮುದಗಲ್ ಇನ್ನೂ ಮುಂತಾದವರು ಭಾಗವಹಿಸಿದ್ದರು.  ಪ್ರಾಸ್ತಾವಿಕವಾಗಿ  ರಾಜೇಶ  ಸಸಿಮಠ  ಮಾತನಾಡಿದರು.  ಗವಿಸಿದ್ಧಪ್ಪ  ಪಲ್ಲೇದ  ಸ್ಥಾಗತಿಸಿದರು.  ಅರ್ಚನಾ ಗವೀಶ ನಿರೂಪಿಸಿದರು.  ಶರಣಮ್ಮ  ಕಲ್ಮಂಗಿ ವಂದಿಸಿದರು. 

Please follow and like us:
error