ದೇವದಾಸಿ ಕುಟುಂಬಕ್ಕೆ ಸರಕಾರಿ ಸೌಲಭ್ಯ ಸಿಗಬೇಕು- ಹೆಚ್.ಎಸ್ ಪಾಟೀಲ್.

ಕೊಪ್ಪಳ-04-  ಸರಕಾರದ ಎಲ್ಲಾ ಸೌಲಭ್ಯಗಳು ಮಾಜಿ ದೇವದಾಸಿ ಕುಟುಂಬಗಳಿಗೆ ಲಭ್ಯವಾಗಬೇಕು ಮತ್ತು ಅವರ ಮಕ್ಕಳಿಗೆ ಶಿಕ್ಷಣ ಆಶಾಕಿರಣವಾಗಬೇಕು ಎಂದು ಸಾಹಿತಿ ಚಿಂತಕರಾದ ಹೆಚ್.ಎಸ್ ಪಾಟೀಲ್ ನುಡಿದರು.
    ಅವರು ವಿಮುಕ್ತ ದೇವದಾಸಿ ಮಹಿಳಾ ವೇದಿಕೆ ಕುಷ್ಟಗಿ ಹಾಗೂ ಭಾರತ ಸರಕಾರ ಪ್ರಾಯೋಜಿತ ದೇವದಾಸಿ ಸಂಪನ್ಮೂಲ ಕೇಂದ್ರ ಕನಕಗಿರಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ವಾಲ್ಮೀಖಿ ಭವನದಲ್ಲಿ ಜರುಗಿದ ಚಿಂತಕರು ಮತ್ತು ನಾಗರಿಕ ಸಮಾಜದ ಸಂಘಟನೆಗಳ ಜಿಲ್ಲಾ ಮಟ್ಟದ ಸಮಾಲೋಚನೆ ಸಭೆಯ ಅದ್ಯಕ್ಷತೆವಹಿಸಿಕೊಂಡು ಮಾತನಾಡಿದರು.
    ಪ್ರಸ್ತುತ ನಾಗರಿಕಾ ಸಮಾಜದಲ್ಲಿ ದೇವದಾಸಿ ಪದ್ದತಿ ಇನ್ನೂ ಚಾಲ್ತಿಯಲ್ಲಿದೆ ಎಂದರೆ ಅದು ಪ್ರಜ್ಞಾವಂತ ನಾಗರಿಕ ಸಮಾಜ ತೆಲೆ ತೆಗ್ಗಿಸುವಂತ ವಿಚಾರವಾಗಿದೆ. ಕೂಡಲೆ ಸರಕಾರ ಮತ್ತು ಪ್ರಗತೀಪರ ಬುದ್ದಿ ಜೀವಿಗಳು

ಚಿಂತಕರು ಹೋರಾಟಗಾರರು ಪದ್ದತಿ ತಡೆಯುವಲ್ಲಿ ಮುಂದಾಗಬೇಕೆಂದು ಕರೆನೀಡಿದರು. ಇದೆ ಸಂದಂರ್ಭದಲ್ಲಿ ಬಂಡಾಯ ಸಾಹಿತಿ ಪ್ರೊ|| ಅಲ್ಲಮಪ್ರಭು ಬೆಟ್ಟದೂರು ಮಾತನಾಡುತ್ತ ಇಂದಿನ ಆಧುನಿಕ ಕಾಲದಲ್ಲಿ ಇನ್ನು ದೇವದಾಸಿ ಪದ್ದತಿ ತೆರೆಮರೆಯಲ್ಲಿ ಇದೆ ಎಂದು ಕಂಡುಬರುತ್ತದೆ. ಈ ಪದ್ದತಿಯನ್ನು ಸಂಪೂರ್ಣವಾಗಿ ಬೇರು ಸಮೇತ ಕಿತ್ತಿ ಹಾಕಲು ಎಲ್ಲಾ ಸಮಾಜದ ಪ್ರಗತೀಪರರು ಸಂಘಟನಾತ್ಮಕವಾಗಿ ಮುಂದಾಗಬೇಕೆಂದು ಹೇಳಿದರು. ಮುಖ್ಯ ಅತಿಥಿಯಾಗಿ ವಿಠ್ಠಪ್ಪ ಗೊರಂಟ್ಲಿ ಭಾರಧ್ವಾಜ ಪ್ರಮೋದ ತುರುವಿಹಾಳ ನಜೀರಸಾಬ ಮುಲಿಮನಿ ಮತ್ತು ಜಿಲ್ಲೆಯ ಅನೇಕ ಪ್ರಗತಿಪರರು ವಿವಿದ ಸಂಘಟನೆಯ ಮುಖಂಡರು ಹಾಗೂ ವಿಮುಕ್ತ ದೇವದಾಸಿ ಮಹಿಳಾ ವೇದಿಕೆ ಕುಷ್ಟಗಿಯ ಪದಾಧಿಕಾರಿಗಳು ತಮ್ಮ ಅನುಭವವನ್ನು ಹಂಚಿಕೊಂಡರು. ಆರಂಭದಲ್ಲಿ ಕಲಾವಿದ ಜೀವನಸಾಬ ಬಿನ್ನಾಳ ಪ್ರಾರ್ಥನೆ ಗೈದರು ಯೋಜನೆ ಸಲಹೆಗಾರರಾದ ವೈ.ಜೆ ರಾಜೇಂದ್ರ ಪ್ರಾಸ್ತವಿಕವಾಗಿ ಮಾತನಾಡಿದರು. ಸಮಾಜ ಕಾರ್ಯಕರ್ತ ಅಲ್ಲಾಗಿರಿರಾಜ ಕನಕಗಿರಿ ನಿರೂಪಿಸಿದರು ಯಮನೂರಪ್ಪ ಸ್ವಾಗತಿಸಿದರು ಯಮನಪ್ಪ ವಂದಿಸಿದರು.

Please follow and like us:
error