You are here
Home > Koppal News > ಮಕ್ಕಳ ಸಹಾಯವಾಣಿ-೧೦೯೮ ಮತ್ತು ಲೋಗೊ ಬರೆಸಲು ಸೂಚನೆ

ಮಕ್ಕಳ ಸಹಾಯವಾಣಿ-೧೦೯೮ ಮತ್ತು ಲೋಗೊ ಬರೆಸಲು ಸೂಚನೆ

  ಕೊಪ್ಪಳ ಜಿಲ್ಲೆಯ ಎಲ್ಲಾ ಶಾಲಾ ಗೋಡೆಗಳ ಮೇಲೆ ಮಕ್ಕಳ ಸಹಾಯವಾಣಿ-೧೦೯೮ ಮತ್ತು ಲೋಗೊ ಚಿತ್ರ ಬರೆಸುವಂತೆ ಸರ್ವ ಶಿಕ್ಷಣ ಅಭಿಯಾನ, ಕೊಪ್ಪಳದ ಉಪನಿರ್ದೇಶಕರು ಸೂಚನೆ ನೀಡಿದ್ದಾರೆ.
  ಮಕ್ಕಳ ಸಹಾಯವಾಣಿ ಸಂಖ್ಯೆ ೧೦೯೮ ಹಾಗೂ ಲೋಗೊ ಚಿತ್ರವನ್ನು ಜಿಲ್ಲೆಯ ಎಲ್ಲ ಶಾಲೆಗಳ ಗೋಡೆಯ ಮೇಲೆ ಚಿತ್ರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಈ ಕುರಿತು ವರದಿ ಸಲ್ಲಿಸುವಂತೆ ಈ ಹಿಂದೆ ತಿಳಿಸಲಾಗಿತ್ತು ಆದರೆ,  ಈವರೆಗೂ ಯಾವುದೇ ಶಾಲೆಗಳಿಂದ ಮಾಹಿತಿ ಸಲ್ಲಿಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ಶಾಲೆಗಳಲ್ಲಿ ಸಹಾಯವಾಣಿ ಸಂಖ್ಯೆ ಹಾಗೂ ಲೋಗೊ ಚಿತ್ರವನ್ನು ಬರೆಸುವಂತೆ ಪುನಃ ಸೂಚಿಸಲಾಗಿದೆ. ಲೋಗೋ ಚಿತ್ರವನ್ನು ಈಗಾಗಲೇ ಎಲ್ಲಾ ಶಾಲೆಗಳಿಗೂ ಈ-ಮೇಲ್ ಮೂಲಕ ಕಳುಹಿಸಲಾಗಿದ್ದು, ಸಂಬಂಧಪಟ್ಟ ಶಾಲಾ ಮುಖ್ಯಸ್ಥರು ಶಾಲಾ ಹಂತದಲ್ಲಿ ಲಭ್ಯವಿರುವ ಶಾಲಾ ನಿರ್ವಹಣಾ ಅನುದಾನದಲ್ಲಿ ಖರ್ಚು ಭರಿಸಿ, ಎಲ್ಲ ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ-೧೦೯೮ ಇದರ ಲೋಗೊ ಹಾಗೂ ಮಾಹಿತಿಯನ್ನು ಸೆ.೩೦ ರೊಳಗಾಗಿ ಚಿತ್ರಿಸಿ, ಅನುಷ್ಠಾನ ಮಾಹಿತಿ ಸಲ್ಲಿಸುವಂತೆ ಸರ್ವ ಶಿಕ್ಷಣ ಅಭಿಯಾನ, ಕೊಪ್ಪಳದ ಉಪನಿರ್ದೇಶಕರು   ತಿಳಿಸಿದ್ದಾರೆ.

Leave a Reply

Top