fbpx

ಮಕ್ಕಳ ಭವಿಷ್ಯ ಉಜ್ವಲಗೊಳ್ಳಲು ಗುಣಮಟ್ಟದ ಶಿಕ್ಷಣ ಅಗತ್ಯ ಪಟೇಲ.

ಕೊಪ್ಪಳ. ನ.೧೭ ಇಂದಿನ ಮಕ್ಕಳೇ ಈ  ನಾಡಿನ ಭಾವಿ ಪ್ರಜೆಗಳಾಗಿದ್ದು ಮಕ್ಕಳ ಮುಂದಿನ ಭವಿಷ್ಯ ಉಜ್ವಲಗೊಳ್ಳಲು ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಅಗತ್ಯವಾಗಿದೆ ಎಂದು ನಗರ ಸಭೆಯ ೩ನೇ ವಾರ್ಡನ ಸದಸ್ಯ ಅಮ್‌ಜದ ಪಟೇಲ ಹೆಳಿದರು. ಅವರು ನಗರದ ಹಮಾಲರ ಕಾಲೊನಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರದಂದು ಏರ್ಪಡಿಸಿದ ಮಕ್ಕಳ ದಿನಾಚರಣೆ ಸಮಾರಂಭ ಹಾಗೂ ಅಕ್ಯುಪ್ರೆಶರ್ ಥೆರಪಿಷ್ಟ ಮೋಯಿನ್ ಖಾನ್‌ರವರ ವತಿಯಿಂದ ಮಕ್ಕಳಿಗೆ ತಮ್ಮ ಗ್ರಿನ್ ಲೈಫ್ ಶಿಕ್ಷಣ ಮತ್ತು ಸೆವಾಸಂಸ್ಥೆಯ ಪರವಾಗಿ ಉಚಿತ ಪಾಟಿ ಪೆನಸಿಲ್ ವಿತರಣೆ ಹಾಗೂ ಸಾರ್ವಜನಿಕರಿಗೆ ಸುಜೋಕ್ ಅಕ್ಯುಪ್ರೆಶರ್ ಮೂಲಕ ರೋಗಗಳಾ ನಿಯಂತ್ರಣ ಮಾಡಿಕೊಳ್ಳುವ ಬಗ್ಗೆ ಜಾಗೃತಿಮುಡಿಸುವ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದರು.
ಮುಂದುವರಿದು ಮಾತನಾಡಿದ ಅವರು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳಿಗೆ ನಮ್ಮ ದೇಶ್ ಮಹಾನ್ ನಾಯಕರ ಜೀವನ ಚರಿತ್ರೆಯ ಬಗ್ಗೆ ತಿಳಿಸುವ ಕೆಲಸ ಆಗಬೇಕು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಜೀವನ ಸಾಗಿಸಬೇಕು ಎಂದರು. ನಮ್ಮ ದೇಶದ ಪ್ರಥಮ ಪ್ರದಾನಿ ಪಂಡಿತ್ ಜವಾಹರಲಾಲ ನೇಹರು ಮಕ್ಕಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು ಅದಕ್ಕಾಗಿಯೇ ಅವರು ತಮ್ಮ ಜನ್ಮದಿನಾಚರಣೆಯನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲು ಹೇಳಿದರು. ಅವರು ಕಂಡಂತೆ ನಮ್ಮ ದೇಶ ಒಂದು ಸುಂದರ ಹೂವಿನ ತೋಟ ಇದ್ದಂತೆ ಇಲ್ಲಿರುವ ವಿವಿಧ ಜಾತಿ ಜನಾಂಗದವರು ಬಿನ್ನ ಬಿನ್ನವಾದ ಸುಂಧರವಾದ ಹೂವು ಇದ್ದಂತೆ ಯಾವುದೇ ಒಂದು ಹೂವಿನ ತೋಟಕ್ಕೆ ಸುಂಧರವಾದ ಹೂವಿನ ತೋಟ ಎಂದು ಕರೆಯಲು ಅಲ್ಲಿ ನಾ ನಾ ರೀತಿಯ ಹೂವುಗಳಿರಬೇಕು ಎಂಬಂತೆ ಅವರ ಅನಿಸಿಕೆ ಅಭಿಲಾಸೆ ಮತ್ತು ಅವರ ಆಸೆಯಂತೆ ಎಲ್ಲರು ರಾಷ್ಟ್ರೀಯ ಭಾವೈಕ್ಯತೆಯಿಂದ ಜೀವನ ಸಾಗಿಸಿದರೆ ಬದುಕು ಸಾರ್ಥಕವಾಗುತ್ತದೆ ಎಂದು ನಗರ ಸಭೆಯ ೩ನೇ ವಾರ್ಡನ ಸದಸ್ಯ ಅಮ್‌ಜದ ಪಟೇಲ ಹೆಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಓಣಿಯ ಹಿರಿಯರಾದ ಲಿಯಾಖತ್ ಅಲಿಸಾ

ಬ ವಹಿಸಿದರು ಮುಖ್ಯ ಅಥಿತಿಗಳಾಗಿ ವೇದಿಕೆಮೆಲೆ ಮುಖ್ಯ ಪೋಲಿಸ್ ಅಮರೆಗೌಡ ಮಾಲಿಪಾಟಿಲ ಪತ್ರಕರ್ತರಾದ ಬಸವರಾಜ ಶಿಲವಂತರ, ಎಂ.ಸಾಧಿಕ ಅಲಿ, ಸಿ.ಡಿ.ಪಿ,ಓ ಕಛೆರಿಯ ಬಸ್ಸಮ್ಮ, ಓಣಿಯ ಜಿಲಾನ ಸಾಬ ದಫೇದಾರ, ಹನಿಫ್ ಸಾಬ ಅಧೋನಿ,ಅಂಗನವಾಡಿ ಶಿಕ್ಷಕಿಯರು ಸೆರಿದಂತೆ ಅನೆಕರು ಪಾಲ್ಗೊಂಡಿದ್ದರು. ಆರಂಭದಲ್ಲಿ ಸುಜೋಕ್ ಅಕ್ಯುಪ್ರೆಶರ್ ಥೆರಪಿಷ್ಟ ಮೋಯಿನ್ ಖಾನ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿ ರೋಗಗಳ ನಿಯಂತ್ರಣ ಔಷದಿಗಳಿಲ್ಲದೆ ಹೇಗೆ ಮಾಡಿಕೊಳ್ಳಲು ಸಾಧ್ಯ ಎಂಬುವುದರಬಗ್ಗೆ ಸಾರ್ವಜನಿಕರಿಗೆ ಉಚಿತ ಮಾಹಿತಿ ನಿಡಿದರು ಈ ಸಂಧರ್ಭದಲ್ಲಿ ಇಸ್ಹಾಕ್ ಅಲಿ, ಮರ್ಧಾನ ಅಲಿ, ಗೌಸಿಯಾ ಜೈತುನ್ ಖಾನ್, ಶಹನಾಜ್ ಬೇಗಂ, ಗೌಸಿಯ ಬೇಗಂ ಖಾನ್ ಸೆರಿದಂತೆ ಅನೆಕರು ಪಾಲ್ಗೋಂಡಿದ್ದರು.

Please follow and like us:
error

Leave a Reply

error: Content is protected !!