You are here
Home > Koppal News > ಕನಕಗಿರಿ ಮತ್ತು ಕಾರಟಗಿ ಬ್ಲಾಕ್ ಮಹಿಳಾ ಬೂತ ಮಟ್ಟದ ಸಭೆ

ಕನಕಗಿರಿ ಮತ್ತು ಕಾರಟಗಿ ಬ್ಲಾಕ್ ಮಹಿಳಾ ಬೂತ ಮಟ್ಟದ ಸಭೆ

ಕೊಪ್ಪಳ : ದಿ.೦೪ರಂದು ಬೆಳಿಗ್ಗೆ ೧೧ ಗಂಟೆಗೆ ಕನಕಗಿರಿ ಕಾಂಗ್ರೆಸ ಕಾರ್ಯಲಯದಲ್ಲಿ ಕಕಗಿರಿ ಹಾಗೂ ಕಾರಟಗಿ ಬ್ಲಾಕ್ ಮಹಿಳಾ ಕಾಂಗ್ರೆಸ ಕೊಪ್ಪಳ ಮಹಿಳಾ ಜಿಲ್ಲಾ ಅಧ್ಯಕ್ಷರಾದ  ಶ್ರೀಮತಿ ಇಂದಿರಾ ಭಾವಿಕಟ್ಟಿ ಯವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಭೆಯಲ್ಲಿ ವಾರ್ಡ ಮಟ್ಟದ ಹಾಗೂ ಬೂತ ಮಟ್ಟದ ಸಮಿತಿಗೆ ಪದಾಧಿಕಾರಿಗಳ ನೇಮಕಾತಿಗೆ ಚಾಲನೆ ನೀಡಲಾಯಿತು. ಈ ಸಭೆಯಲ್ಲಿ ಶ್ರೀಮತಿ ಇಂದಿರಾ ಭಾವಿಕಟ್ಟಿಯವರು ಕಾಂಗ್ರೆಸ  ಪಕ್ಷದಲ್ಲಿ ಮಹಿಳೆಯರಿಗೆ ಸೂಕ್ತವಾದಂತಹ ಸ್ಥಾನ ಮಾನ ಇದ್ದು ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ರಾಜಕೀಯವಾಗಿ ಮೇಲೆಬರಲು  ಸ್ಥಳೀಯ ಸಂಸ್ಥೆಗಳಲ್ಲಿ ಶೇ ೫೦% ಮಿಸಲಾತಿ ಮಂಜುರಾಗಿದ್ದು ಉತ್ತಮ ಅವಕಾಶವಾಗಿದೆ. ಪಕ್ಷದ ಹಿರಿಯರ ಸಲಹೆಯೊಂದಿಗೆ ಯುವಕರ ಸಹಕಾರದೊಂದಿಗೆ ನಿಮ್ಮ ನಿಮ್ಮ ವಾರ್ಡ ಮಟ್ಟ ಹಾಗೂ ಬೂತ ಮಟ್ಟದ ಪದಾಧಿಕಾರಿಗಳನ್ನು   ಮಾಡುವಲ್ಲಿ ಪಕ್ಷದಲ್ಲಿರುವಂತಹ ನಿಷ್ಠಾವಂತ ಮಹಿಳಾ ಕಾರ್ಯಕರ್ತರನ್ನು ನೇಮಕಾತಿ ಮಾಡಿಕೊಳ್ಳಬೇಕೆಂದು ವಿನಂತಿಸಿಕೊಂಡರು. ಕರ್ನಾಟಕದಲ್ಲಿ ಕಾಂಗ್ರೆಸ ಪಕ್ಷದ ಸರ್ಕಾರ ಬರುವಲ್ಲಿ ನಮ್ಮ ಜಿಲ್ಲೆಯ ವಿಧಾನ ಸಭಾಕ್ಷೇತ್ರಗಳನ್ನು ಕಾಂಗ್ರೆಸ ಜಯಗಳಿಸುವ ಮೂಲಕ ದಿಕ್ಸುಚಿಯಾಗಲಿ ಎಂದರು
      ಈ ಸಭೆಯ ನೇತೃತ್ವವನ್ನು ಕನಕಗಿರಿ ಬ್ಲಾಕ್ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಶಿವಲೀಲಾ ಪಾಟೀಲರವರು  ವಹಿಸಿ ತಮಗೆ ನಿರ್ವಹಿಸಿದಂತಹ ಜವಬ್ಧಾರಿಯನ್ನು ಆದಷ್ಟು ಬೇಗನೆ ಮುಗಿಸುವುದಾಗಿ ತಿಳಿಸಿದರು. ಈ ನೇಮಕಾತಿಯಲ್ಲಿ ಎಲ್ಲಾ ವರ್ಗದ ಮಹಿಳೆಯರನ್ನು ಗಣನೆಗೆ ತೆಗೆದುಕೊಂಡು ಮಾಡುವುದಾಗಿ ಹೇಳಿದರು.
      ಕಾರಟಗಿ ಮಹಿಳಾ ಬ್ಲಾಕ್ ಅಧ್ಯಕ್ಷರಾದ ಜ್ಯೋತಿ ಹುಂಡೇಗೌಡ್ರ ರವರು ವಾರ್ಡ ಮಟ್ಟದ ಹಾಗೂ ಬೂತ ಮಟ್ಟದ ಪದಾಧಿಕಾರಿಗಳ ನೇಮಕತಿಯಲ್ಲಿ ಪಕ್ಷದಲ್ಲಿ ಉತ್ತಮ ಕೆಲಸ ಮಾಡುವಂತಹ ಕ್ರೀಯಾ ಶೀಲ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಂಡು ಸಮಿತಿ ರಚಿಸುವುದಾಗಿ ತಿಳಿಸಿದರು.
ಈ ವೇದಿಕೆಯ ಮೇಲೆ ನಿಂಗಮ್ಮ ಸಮಗಂಡಿ ಉಪಸ್ಥಿತರಿದ್ದರುಈ ಸಭೆಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷರಾದ ಬಿ.ವಿ.ಜೋಶಿ ಯವರು ಮಾತನಾಡಿ ಪಕ್ಷದಲ್ಲಿ ಶಿಸ್ತಿನ ಸಿಪಾಯಿಯಂತೆ ಪ್ರಮಾಣಿಕರಾಗಿ ಕೆಲಸ ಮಾಡುವ ಮಹಿಳೆಯರಿಗೆ ಉತ್ತಮ ಅವಕಾಶಗಳು ಮುಂಬರುವ ದಿನಗಳಲ್ಲಿ ಸಿಗುತ್ತವೆ.
      ಮಹಿಳಾ ಪದಾಧಿಕಾರಿಗಳಾದ ಕೃಷ್ಣಾವೇಣಿ ಬೋಂದಾಡೆ, ಗಿರಿಜಾ ಬಳಿಗಾರ, ರಾಜ ಮಾಬಿ, ಶಾಂತಮ್ಮ ಕಂದಗಲ್, ನಿಲಮ್ಮ ನವಲಹಳ್ಳಿ, ನೂರಜಾನ್ ಬೆಗಂ, ಖಾಜಾಬನ್ನಿ ಸುಳೆಕಲ್, ನಾಗರತ್ನ ದೊಡ್ಡಮನಿ, ಈರಮ್ಮ ಚಕ್ರಸಾಲಿ, ಸುಜಾತ ಕಡಿ, ಅಂಬಮ್ಮ ಸುಳೆಕಲ್, ನಾಗಮ್ಮ ಆಗೊಲಿ, ಚನ್ನಮ್ಮ ಮುಂತಾದವರು ಪಾಲ್ಗೊಂಡಿದ್ದರು. ಹಾಗೂ ಗ್ರಾ. . ಪಂ ಸದಸ್ಯರುಗಳು  ಉಪಸ್ಥಿತರಿದ್ದರು.

Leave a Reply

Top