೧೦೪ನೇ ವಿಶ್ವಗೈಡ್ಸ್ ಉದಯ ದಿನಾಚರಣೆ

ಕೊಪ್ಪಳ : ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ೧೦೪ ವಿಶ್ವಗೈಡ್ಸ್ ಉದಯ ದಿನಾಚರಣೆ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ರೇಣುಕಾ ಅತ್ತನೂರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಸಂಘಟನಾ ಆಯುಕ್ತ ಎ.ಶಿವಕುಮಾರ  ಆಗಮಿಸಿದ್ದರು. ಕಾರ್‍ಯಕ್ರಮವನ್ನುದ್ದೇಶಿಸಿ ಎ.ಶಿವಕುಮಾರವರು ಸವಿಸ್ತಾರವಾಗಿ ಮಕ್ಕಳಿಗೆ ವಿಶ್ವಗೈಡ್ಸ್ ಉದಯ ದಿನಾಚರಣೆಯ ಬಗ್ಗೆ ಮಾಹಿತಿ ನೀಡಿದರು. 
ಕಾರ್‍ಯಕ್ರಮದ ಪ್ರಯುಕ್ತ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ಚಿತ್ರಕಲಾ ಸ್ಪರ್ದೆಯನ್ನು ಏರ್ಪಡಿಸಲಾಗಿತ್ತು. ಪ್ರಥಮ ಸ್ಥಾನ : ವಿಜಯಲಕ್ಷ್ಮೀ, ದ್ವಿತಿಯ : ದೀಪಿಕಾ ಶೆಟ್ಟಿ, ತೃತೀಯ: ಶಿಲ್ಪಾ ಮೇದಾ ಪಡೆದಿದ್ದಾರೆ. ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರಾದ ರೇವಯ್ಯ ಎಂ.ಎಂ. , ಜಯಶ್ರೀ ಕುಲಕರ್ಣಿ,ಆಶಾ ದೊಡ್ಡಮನಿ ಉಪಸ್ಥಿತರಿದ್ದರು. 
Please follow and like us:
error