ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಕೇಂದ್ರ ಸಚಿವ ಸಂಪುಟ ನಿರ್ಧಾರ: ಸ್ವಾಗತ

  ೦೩-೧೦-೨೦೧೩ರ ಸಂಜೆ ಬಸ್‌ಸ್ಟ್ಯಾಂಡ್ ಹತ್ತಿರದ ಕ್ರಾಂತಿಕೇಂದ್ರಲ್ಲಿ ಸಿಪಿಐಎಂಎಲ್ ಲಿಬರೇಷನ್ ಪಕ್ಷದ ಅಂಗಸಂಘಟನೆಗಳೆಲ್ಲಾ ಸಭೆ ಸೇರಿ, ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಕೇಂದ್ರ ಸಚಿವ ಸಂಪುಟದ ನಿರ್ಧಾರ ಸ್ವಾಗತಾರ್ಹ ಎಂದು ಕ್ರಾಂತಿಕಾರಿ ಯುವಜನ ಸಂಘದ ಜಿಲ್ಲಾ ಸಂಚಾಲಕ ಟಿ. ರಾಘವೇಂದ್ರ ಪ್ರಟಕಣೆಯಲ್ಲಿ ತಿಳಿಸಿದ್ದಾರೆ.
ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಪ್ರಗತಿಪರ ಸಂಘಟನೆಗಳು ತೆಲಂಗಾಣ ಜನತೆಯ ಜೊತೆಗಿದ್ದು, ಅವರನ್ನು ಬೆಂಬಲಿಸಬೇಕೆಂದು ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನಿಸಲಾಯಿತು ಎಂದು ಸಭೆಯ ಅಧ್ಯಕ್ಷತೆವಹಿಸಿದ್ದ ಭಾರದ್ವಾಜ್ ತಿಳಿಸಿದರು. ಈ ಸಂದರ್ಭದಲ್ಲಿ ಎಐಸಿಸಿಟಿಯು ಜಿಲ್ಲಾ ಸಂಚಾಲಕ ಬಸನಗೌಡ ಸುಳೇಕಲ್, ಸಾಹಿತಿಗಳಾದ ಪೀರ್‌ಬಾಷಾ, ಪಿಯುಸಿಎಲ್ ಕಾರ್ಯದರ್ಶಿ ಅಲ್ಲಾಗಿರಿರಾಜ್ ಕನಕಗಿರಿ, ಕೆಜಿಎಲ್‌ಯು ತಾಲೂಕ ಅಧ್ಯಕ್ಷ ಎಂ.ವಿರುಪಾಕ್ಷಪ್ಪ, ಅಯ್ಯಾಲ ತಾಲೂಕ ಅಧ್ಯಕ್ಷ ಎಂ.ಏಸಪ್ಪ, ಮಾಬುಸಾಬ್, ಹಕೀಂಹುಸೇನ್, ಐಸಾ ಮಲ್ಲಯ್ಯ, ಚಂದ್ರು, ಪರಮೇಶ, ವೀರೇಶ, ಶಿವಮೂರ್ತಿ, ಆರ್‌ವೈಎ ಕೊಪ್ಪಳ ತಾಲೂಕ ಸಂಚಾಲಕ ಕೆಂಚನಗೌಡ ಪಾಟೀಲ್ ಪ್ರಗತಿಪರ ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 
Please follow and like us:
error