fbpx

ಸಚಿವ ತಂಗಡಗಿ ವಜಾ ಮಾಡಲು ಆಗ್ರಹ : ಕೊಪ್ಪಳ ಜಿಲ್ಲಾ ಬಂದ್ ಗೆ ಮಾದಿಗ ದಂಡೂರ ಸಂಘಟನೆಯ ಕರೆ

ಕೊಪ್ಪಳ : ಜಿಲ್ಲೆಯ ಗಂಗಾವತಿ ತಾಲೂಕಿನ ಕನಕಗಿರಿ ವಿಧಾನಸಭಾ ಕ್ಷೇತ್ರದ ಮರಕುಂಬಿ,ಹೊಸಗುಡ್ಡ, ಈಚನಾಳ ಗ್ರಾಮದ ಮಾದಿರಗ ಮೇಲೆ ಅಸ್ಪೃಶ್ಯತೆ, ಬಹಿಷ್ಕಾರ, ಮನೆಗುಡಿಸಲುಗಳಿಗೆ ಬೆಂಕಿ, ಅತ್ಯಾಚಾರ,ಕೊಲೆ ಘಟನೆಗಳನ್ನು ಖಂಡಿಸಿ ಈ ಎಲ್ಲಾ ಘಟನೆಗಳಿಗೆ  ಕುಮ್ಮಕ್ಕು ನೀಡುತ್ತಿರುವ  ಸಚಿವ ಶಿವರಾಜ್ ತಂಗಡಗಿಯನ್ನು ಸಚಿವ ಸಂಪುಟದಿಂದ ವಜಾಗೊಳಿಸಲು ಒತ್ತಾಯಿಸಿ ಕೊಪ್ಪಳ ಜಿಲ್ಲಾ ಬಂದ್ ಗೆ ಕರೆ ನೀಡಲಾಗಿದೆ ಎಂದು ರಾಜ್ಯಾಧ್ಯಕ್ಷ ಬಿ.ಹುಸೇನಪ್ಪಸ್ವಾಮಿ ಮಾದಿಗ ಹೇಳಿದರು.
            ಅವರು ಮೀಡಿಯಾ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಿರಂತರವಾಗಿ ದಲಿತರ ಮೇಲೆ ಶೋಷಣೆಯಾಗುತ್ತಿದ್ದರೂ  ಕ್ರಮಕೈಗೊಳ್ಳದೇ  ಸವರ್ಣಿಯರ ರಕ್ಷಣೆಗೆ ನಿಂತಿರುವ ಸಚಿವ ಶಿವರಾಜ್ ತಂಗಡಗಿಯನ್ನು ಸಂಪುಟದಿಂದ  ಕೈ ಬಿಡುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು. ಬ್ರಿಟಿಷರಿಗಿಂತ ಕ್ರೂರವಾಗಿ ವರ್ತಿಸುತ್ತಿರುವ ಸವರ್ಣಿಯರು ದಲಿತರನ್ನು ಬದುಕಲು ಬಿಡುತ್ತಿಲ್ಲ.  ದಲಿತರ ಮೇಲಿನ ನಿರಂತರ ಹಲ್ಲೆಗಳಿಗೆ,ಬಹಿಷ್ಕಾರಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಅಧಿಕಾರಿಗಳೂ ಸಹ ದಲಿತರ ರಕ್ಷಣೆ ಮಾಡುತ್ತಿಲ್ಲ.  ಹೀಗಾಗಿ ಕೊಪ್ಪಳ ಜಿಲ್ಲಾ ಬಂದ್ ಗೆ ಕರೆ ನೀಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾದಿಗ ದಂಡೂರ ಜಿಲ್ಲಾ ಶಾಖೆಯ ಗೌರವಾಧ್ಯಕ್ಷ ಎಸ್.ದುರುಗಪ್ಪ, ಅಧ್ಯಕ್ಷ ಪ್ರಭುರಾಜ ಬೋಚನಹಳ್ಳಿ, ಕಾರ್ಯಾಧ್ಯಕ್ಷ ಗುಂಡಪ್ಪ ಬಡಿಗಿ,ಜಂಟಿ ಕಾರ್ಯದರ್ಶಿ ಮೂಕಪ್ಪ ಬಸಾಪೂರ ಉಪಸ್ಥಿತರಿದ್ದರು. 

Please follow and like us:
error

Leave a Reply

error: Content is protected !!