ನವರಾತ್ರಿ ಪ್ರಯುಕ್ತ ನವಚೈತನ್ಯ ದೇವಿಯರ ಸ್ಥಬ್ಧ ಚಿತ್ರ

ಭಾರತ ದೇಶ ಹಬ್ಬಗಳ ತವರೂರು. ಪ್ರತಿಯೊಂದು ಹಬ್ಬದ ಹಿನ್ನೆಲೆಯಲ್ಲಿ ಒಂದಲ್ಲಾ ಒಂದು ಆಧ್ಯಾತ್ಮಿಕ ಸತ್ಯತೆ, ಮೌಲ್ಯ ಜಾಗೃತಿಯ ಸಂಕೇತ, ವೈಜ್ಞಾನಿಕ ಸಂಕೇತ ಹಾಗೂ ಪೌರಾಣಿಕ ಸಂಕೇತ ಇದೆ. ಹಬ್ಬ ಅಂದರೇನೇ ಸಂತೋಷ ಪಡುವ ದಿನ. ಆದರೆ ಆ ಸಂತೋಷ, ಖುಷಿ ನಿತ್ಯ ಸತತವಾಗಿ ನಮ್ಮ ಜೀವನದಲ್ಲಿ ಇರಲು ಹಬ್ಬದ ಹಿನ್ನೆಲೆಯಲ್ಲಿರುವ ಆ ಸತ್ಯ ವಿಚಾರವನ್ನು ತಿಳಿಯಬೇಕು ಎನ್ನುವ ಉದ್ದೇಶದಿಂದ “ನವರಾತ್ರಿ ಪ್ರಯುಕ್ತ ನವವೈತನ್ಯ ದೇವಿಯರ ಸ್ಥಬ್ಧ ಚಿತ್ರ”ವನ್ನು ಏರ್ಪಡಿಸಲಾಗಿತ್ತು.

         ಬ್ಯಹ್ಮಾಕುಮಾರಿ ಯೋಗಿನಿ ಅಕ್ಕನವರು ನವರಾತ್ರಿಯ ಸಂದೇಶವನ್ನು ನೀಡುತ್ತಾ “ನಮ್ಮ ಒಳಗೆ ರಾಕ್ಷಸೀಯ ಸಂಸ್ಕಾರ, ಅಸೂರಿ ಸಂಸ್ಕಾರ ತಾಂಡವವಾಡುತ್ತಿದೆ. ನಮ್ಮ ಒಳಗಿರುವ ರಾಕ್ಷಸರನ್ನು ಸಂಹಾರ ಮಾಡಬೇಕು. ರಾವಣನನ್ನು ಸುಟ್ಟು ಭಸ್ಮ ಮಾಡಬೇಕಾಗಿದೆ ಇದಕ್ಕೆ ಶಕ್ತಿ ಬೇಕು. ಕ್ರೋಧ ಬಿಡಬೇಕಾದರೆ ಸಹನೆ ಶಕ್ತಿ ಬೇಕು. ಲೋಭ ಬಿಡಲು ಸಂತುಷ್ಟತೆಯ ಶಕ್ತಿ ಬೇಕು. ಸುಳ್ಳು, ಕಪಟತನ, ಮೋಸ ದೂರ ಆಗಲು ಸತ್ಯತೆಯ ಶಕ್ತಿಬೇಕು. ದ್ವೇಷ, ಈರ್ಷೆ ಸಂಹಾರ ಮಾಡಲು ಆತ್ಮೀಯತೆ, ಪ್ರೀತಿ, ಸೌಹಾರ್ದತೆ ಶಕ್ತಿ ಬೇಕು. ಇವೆಲ್ಲ ಶಕ್ತಿಯನ್ನು ಬರಮಾಡಿಕೊಳ್ಳಲು ನಮ್ಮ ಮನಸ್ಸು, ಬುದ್ಧಿಯ ಸಂಬಂಧವನ್ನು ಪರಮಾತ್ಮನ ಜೊತೆಗೆ ಜೋಡಿಸಬೇಕು. ಶಿವನಿಂದ ಶಕ್ತಿಯನ್ನು ಪಡೆದುಕೊಂಡಾಗ ನಾವೇ ಶಿವಶಕ್ತಿಯರಾಗಿ ನಮ್ಮ ಅಂತರಂಗದಲ್ಲಿನ ರಾಕ್ಷಸರನ್ನು ನಾವೇ ಸಂಹಾರ ಮಾಡಬೇಕೆನ್ನುವ ದಿವ್ಯ ಸಂದೇಶವನ್ನು ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ಬ್ರಹ್ಮಾಕುಮಾರಿ ಯೋಗಿನಿ ಅಕ್ಕನವರು ನೀಡಿದರು. 
      ಜಿಲ್ಲಾ ಪೊಲೀಸ ಅಧಿಕ್ಷಕರಾದ ಡಾ.ಟಿ.ಡಿ.ಪವಾರ್ ರವರು ನವ ಚೈತನ್ಯ ದೇವಿಯರ ಮೆರವಣಿಗೆಗೆ ಚಾಲನೆ ನೀಡಿ ಶುಭ ಹಾರೈಸಿದರು. ಈ ದಸರಾ ಹಬ್ಬದ ಸಮಯದಲ್ಲಿ ಸ್ಥಬ್ಧ ಚಿತ್ರದ ಮೂಲಕ ಮೆರವಣಿಗೆಯಲ್ಲಿ ನೂರಾರು ಜನ ಭಾಗವಹಿಸಿದ್ದರು. ಶಿವಶಕ್ತಿಯರು ಇಲ್ಲಿ ಚೈತ್ಯ ಜಗದಲ್ಲಿ ಬಂದಾರೋ ನೋಡಿಲ್ಲಿ ನೋಡಬಾರೋ ಎಂಬ ಈ ಹಾಡು ಮೆರವಣಿಗೆಗೆ ವಿಶೇಷ ಶೋಭೆಯನ್ನು ತಂದಿತು. ನೂರಾರು ಜನ ಮಹಿಳೆಯರು ಪೂರ್ಣ ಕಳಸವನ್ನು ಹಿಡಿದು ಮೆರವಣಿಗೆಯಲ್ಲಿ ಮೆರಗು ತಂದರು. 
“ಯುವಕರ ಎಚ್ಚರ ದೇಶ ಮಹತ್ತರ” ಈ ದೇಶವನ್ನು ಕಟ್ಟಲು ಯುವಕರು ಶಕ್ತಶಾಲಿಯಾಗಬೇಕೆಂದು ೩೦ ಜನ ಬೈಕ್‌ನಲ್ಲಿ ಕುಳಿತು ಈ ಮೆರವಣಿಗೆಯಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು. ಮೆರವಣಿಗೆ ಸಾಗುವಾಗ  ಈಶ್ವರಿಯ ವಿಶ್ವವಿದ್ಯಾಲಯದಿಂದ ಜವಾಹರ ರೋಡ, ಸಾಲರಜಂಗ ರೋಡ, ಗಡಿಯಾರ ಕಂಬ, ಬಸ್ಟಾಂಡ, ಭಾಗ್ಯನಗರ ಗಳ ಮುಖಾಂತರ  ನಗರದ ಪ್ರಮುಖ ಬೀದಿಗಳಲ್ಲಿ ವಿವಿಧ ಕಡೆ ಭಕ್ತರು ಆರತಿ, ಹಣ್ಣು, ಕಾಯಿ, ಫಲ ಪುಷ್ಪಗಳೊಂದಿಗೆ ಭವ್ಯವಾದ ರೂಪದಲ್ಲಿ ಸ್ವಾಗತಿಸಿದರು. ಮೆರವಣಿಗೆಯಲ್ಲಿ ಬ್ರಹ್ಮಾಕುಮಾರಿ ಲಾವಣ್ಯ, ಸೇರಿದಂತೆ ಅನೇಕರು ಇದ್ದರು  
ಸಂಜೆ ೮ ಘಂಟೆಗೆ ಆಗುತ್ತಿದ್ದಂತೆ ಚೈತನ್ಯ ದೇವಿಯರ ಮಂಟಪದಲ್ಲಿ ವಿಶೇಷ ಫೋಕಸ್ ಲೈಟ್‌ನ ಮೂಲಕ ದೇವಿಯರ ಪ್ರಭೆ ಪ್ರಜ್ವಲಿಸಿತು.  
Please follow and like us:
error