ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆ : ಅರ್ಜಿ ಆಹ್ವಾನ

ಕೊಪ್ಪಳ, ಏ.  : ಕೊಪ್ಪಳ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ಖಾಲಿ ಇರುವ ೦೯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ೧೧ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
  ತಾಲೂಕಿನ ಹಿಟ್ನಾಳ, ಕೊಪ್ಪಳ ನಗರ (ದೇವರಾಜ ಅರಸ ಕಾಲೋನಿ-೩೧ ನೇ ವಾರ್ಡ್), ಬಿ. ಹೊಸಳ್ಳಿ, ಹಾಲವರ್ತಿ, ಕೋಳೂರು, ಅಗಳಕೇರಾ(ಕೇಂದ್ರ ಸಂಖ್ಯೆ-೦೪), ನೀರಲಗಿ, ಕವಳಿ, ಹನುಕುಂಟಿ ಗ್ರಾಮಗಳಲ್ಲಿ ಖಾಲಿ ಇರುವ ಒಟ್ಟು ೦೯ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗೆ ಹಾಗೂ ತಾಲೂಕಿನ ಹೊಸಳ್ಳಿ, ಹಿಟ್ನಾಳ, ಅಗಳಕೇರಾ, ಯಲಮಗೇರಿ, ಬಹದ್ದೂರಬಂಡಿ, ಮಂಗಳಾಪುರ, ಗಿಣಗೇರಾ, ಅಗಳಕೇರಾ(ಕೇಂದ್ರ ಸಂಖ್ಯೆ-೦೫), ಹೊಸಲಿಂಗಾಪುರ, ಅಗಳಕೇರಾ(ಕೇಂದ್ರ ಸಂಖ್ಯೆ-೦೩) ಮತ್ತು ಅಳವಂಡಿ ಗ್ರಾಮಗಳಲ್ಲಿ ಖಾಲಿ ಇರುವ ಒಟ್ಟು ೧೧ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
  ಅರ್ಜಿ ಸಲ್ಲಿಸಲು ಏ.೩೦ ಕೊನೆ ದಿನಾಂಕವಾಗಿದ್ದು, ನಿಗದಿತ ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಕೊಪ್ಪಳ ಇವರನ್ನು ಸಂಪರ್ಕಿಸಬಹುದು .

Leave a Reply