ಡಿ.ದೇವರಾಜ ಅರಸ್ ಹಿಂದುಳಿದ ವರ್ಗಗಳ ಹರಿಕಾರ:ಕಟ್ಟಮನಿ

ಕೊಪ್ಪಳ: ಡಿ.ದೇವರಾಜ ಅರಸುರವರು ಹಿಂದುಳಿದ ವರ್ಗಗಳ ಹರಿಕಾರ ಎಂದು ಸಿ.ಪಿ.ಎಸ್.ಶಾಲೆಯ ಮುಖ್ಯೋಪಾದ್ಯಾಯರಾದ ಭರಮಪ್ಪ ಕಟ್ಟಮನಿ ಹೇಳಿದರು. ಅವರು ನಗರದ ಸಿ.ಎಸ್.ಶಾಲೆಯಲ್ಲಿ ಸರ್ಕಾರಿ ಅಂಗವಿಕಲ ನೌಕರರ ಸಂಘ ಹಾಗೂ ಶಾಲೆಯ ವತಿಯಿಂದ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸುರವರ ೯೮ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ,ಡಿ.ದೇವರಾಜ ಅರಸುರವರು ಹಿಂದುಳಿದ ವರ್ಗಗಳ ಅಭಿವೃದ್ದಿಗಾಗಿ ಅನೇಕ ರೀತಿಯ ಯೋಜನೆಗಳನ್ನು ಹಾಕಿಕೊಂಡು ಸಮಾಜದಲ್ಲಿ ಮೇಲು-ಕೀಳು ಎಂಬ ಭಾವನೆ ತಾಳದೆ ಎಲ್ಲರೂ ಒಂದು ಎಂಬ ಪರಿಕಲ್ಪನೆ ಮೂಡಲು ಅವಿರತವಾಗಿ ಶ್ರಮಿಸಿದ್ದಾರೆ.ಹಿಂದುಳಿದ ವರ್ಗದ ಮಕ್ಕಳ ಶಿಕ್ಷಣಕ್ಕಾಗಿ ವಸತಿ ಶಾಲೆ ಹಾಗೂ ವಸತಿ ನಿಲಯಗಳನ್ನು ಸ್ಥಾಪಿಸಿ ಅವರ ಶೈಕ್ಷಣಿಕ ಅಭಿವೃದ್ದಿಗೆ ಪ್ರೋತ್ಸಾಹ ನೀಡಿ ಹಿಂದಿಳಿದ ವರ್ಗಗಳ ಹರಿಕಾರರಾಗಿದ್ದಾರೆ ಎಂದು ಹೇಳಿದರು.
   ನಂತರ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಡಿ.ದೇವರಾಜ ಅರಸುರವರು ರಾಜ್ಯದ ಮುಖ್ಯಮಂತ್ರಿಯಂಥ ಉನ್ನತ ಹುದ್ದೆಯನ್ನು ಹೊಂದಿದ್ದರೂ ಕೂಡಾ ಸರಳ ರೀತಿಯಲ್ಲಿ ಜೀವನ ಸಾಗಿಸಿದ್ದಾರೆ.ಅಲ್ಲದೆ ಎಲ್ಲಾ ಮುಖ್ಯಮಂತ್ರಿಗಳಿಗೆ ಮಾದರಿಯಾಗಿದ್ದಾರೆ.ಇಂಥಹ ಮಾಹನ ವ್ಯಕ್ತಿಗಳ ತತ್ವ ಹಾಗೂ ಸಿದ್ದಾಂತಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗುವಂತೆ ತಿಳಿಸಿದರು.
   ಕಾರ್ಯಕ್ರಮದಲ್ಲಿ ಶಿಕ್ಷಕರಾದ ಅಂಬಕ್ಕ,ಮೊಹೀನ್‌ಪಾಷಾಬಿ,ವಿಜಯಾ,ವಿಜಯಲಕ್ಷ್ಮಿ,ಕಾರ್ಯಕ್ರಮನ್ನು ಶಿಕ್ಷಕರಾದ ಗುರುರಾಜ ಕಟ್ಟಿ ನಿರೂಪಿಸಿದರು.ಶಿಕ್ಷಕರಾದ ಶ್ರೀನಿವಾಸ ಸ್ವಾಗತಿಸಿ,ಗೌಸೀಯಾಬೇಗಂ ಎಲ್ಲರಿಗೂ ವಂದಿಸಿದರು.

Leave a Reply