ಎಸ್‌ಎಸ್‌ಎಲ್‌ಸಿ ಇಂಗ್ಲೀಷ್ ಪೂರಕ ಪರೀಕ್ಷೆ : ೧೦೦ ವಿದ್ಯಾರ್ಥಿಗಳು ಗೈರು

 ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯಲ್ಲಿ ಗುರುವಾರ ನಡೆದ ಇಂಗ್ಲೀಷ್ ವಿಷಯದ ಪರೀಕ್ಷೆಗೆ ಜಿಲ್ಲೆಯ ೧೨೦೨ ವಿದ್ಯಾರ್ಥಿಗಳು ಹಾಜರಾಗಿದ್ದು, ೧೦೦ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.  ಯಾವುದೇ ಡಿಬಾರ್ ಪ್ರಕರಣ ವರದಿಯಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
  ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ಇಂಗ್ಲೀಷ್ ವಿಷಯಕ್ಕೆ ಬಾಲಕರು- ೭೭೮, ಬಾಲಕಿಯರು- ೫೨೪ ಸೇರಿದಂತೆ ಒಟ್ಟು ೧೩೦೨ ವಿದ್ಯಾರ್ಥಿಗಳು ದಾಖಲಾಗಿದ್ದರು. ಇದರಲ್ಲಿ ಬಾಲಕರು- ೭೨೧, ಬಾಲಕಿಯರು- ೪೮೧ ಸೇರಿದಂತೆ ಒಟ್ಟು ೧೨೦೨ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದು, ೫೮-ಬಾಲಕರು, ೪೨- ಬಾಲಕಿಯರು ಗೈರು ಹಾಜರಾಗಿದ್ದಾರೆ. 
ಕೊಪ್ಪಳ ತಾಲೂಕಿನಲ್ಲಿ ೬೦೪ ವಿದ್ಯಾರ್ಥಿಗಳ ಪೈಕಿ ೫೬೦ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.  ಗಂಗಾವತಿ ತಾಲೂಕಿನಲ್ಲಿ ೩೯೯ ವಿದ್ಯಾರ್ಥಿಗಳ ಪೈಕಿ ೩೬೫, ಕುಷ್ಟಗಿ ತಾಲೂಕಿನಲ್ಲಿ ೧೪೩ ವಿದ್ಯಾರ್ಥಿಗಳ ಪೈಕಿ ೧೩೧, ಯಲಬುರ್ಗಾ ತಾಲೂಕಿನಲ್ಲಿ ೧೫೬ ವಿದ್ಯಾರ್ಥಿಗಳ ಪೈಕಿ ೧೪೬ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಕೊಪ್ಪಳ ತಾಲೂಕಿನಲ್ಲಿ ೪೪, ಗಂಗಾವತಿ- ೩೪, ಕುಷ್ಟಗಿ-೧೨ ಮತ್ತು ಯಲಬುರ್ಗಾ ತಾಲೂಕಿನಲ್ಲಿ ೧೦ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
Please follow and like us:
error