ಕಿನ್ನಾಳ ಕ್ಲಸ್ಟರ ಮಟ್ಟದ ಓದು, ಬರಹ ಅಭಿವ್ಯಕ್ತಿ ಸಾಮರ್ಥ್ಯಗಳ ಸ್ಪರ್ಧಾ ಕಾರ್ಯಕ್ರಮ.

ಕೊಪ್ಪಳ-17- ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೌಲಪೇಟ ಕಿನ್ನಾಳದಲ್ಲಿ ಓದು, ಬರಹ ಅಭಿವ್ಯಕ್ತಿ ಸಾಮರ್ಥ್ಯಗಳ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸದರಿ ಶಾಲೆಯ ಮುಖ್ಯೋಪಾದ್ಯಾಯ ಗಣೇಶ ಬಣ್ಣದ ವಹಿಸಿದ್ದರು. ಉದ್ಘಾಟಕರಾಗಿ ಎಸ್.ಡಿ.ಎಮ್.ಸಿ ಅಧ್ಯಕ್ಷ ಶಿವಪ್ಪ ಕಲ್ಗೊಡಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿ ಮಹೇಶ
ಟಂಕಸಾಲಿ ಪ್ರಾಸ್ತಾವಿಕ ಮಾತನಾಡುತ್ತಾ, ಶೈಕ್ಷಣಿಕ ಪ್ರಗತಿಯನ್ನು ಮೌಲ್ಯಮಾಪನ ಮಾಡುವ
ಸ್ಪರ್ಧಾ ಕಾರ್ಯಕ್ರಮ ಇದಾಗಿದೆ. ಮಕ್ಕಳು ಶೈಕ್ಷಣಿಕ ವರ್ಷದ ಪ್ರಾರಂಭದಿಂದ ಇಲ್ಲಿಯವರೆಗೆ
ಮಗು ತಾನು ಕಲಿತ ಸಾಮರ್ಥ್ಯಗಳನ್ನುಒರೆಗಚ್ಚುವ ಸ್ಪರ್ಧಾ ಕಾರ್ಯಕ್ರಮವು ಮಕ್ಕಳಲ್ಲಿ
ಸ್ಪೂರ್ತಿಯನ್ನುಂಟು ಮಾಡುತ್ತದೆ. ಅದಕ್ಕಾಗಿ ಎಲ್ಲ ಶಿಕ್ಷಕರು ಹಾಗೂ ನಿರ್ಣಾಯಕರು
ಪಾರದರ್ಶಕವಾಗಿ ಮಗುವಿನ ಸಾಮರ್ಥ್ಯಗಳನ್ನು ನಿರ್ಣಯ ನೀಡಿ ಯಶಸ್ವಿಗೊಳಿಸಬೇಕೆಂದರು.
    ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರಸಂಘದ ತಾಲೂಕ ಅಧ್ಯಕ್ಷ ಶೇಖರಪ್ಪ ಮುದೋಳ, ಮುಖ್ಯೋಪಾದ್ಯಾಯರಾದ ನಾರಾಯಣಪ್ಪ ಚಿತ್ರಗಾರ, ಶ್ರೀಶೈಲಪ್ಪ ಗುಗ್ಗರಿ, ಶೇಖರಪ್ಪ ಮಂಗಳೂರ, ಶಂಕರಪ್ಪ ಜನಾದ್ರಿ, ಹಾಗೂ ಎಸ್.ಡಿ.ಎಮ್.ಸಿ ಸದಸ್ಯರುಗಳಾದ ಮಹಾಂತೇಶ ಜಾಲಿಹಾಳ, ಚಂದ್ರಶೇಖರ ಶಿಡ್ಲಗಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಜಡೇಸುಕನ್ಯ ನಿರೂಪಿಸಿದರು. ರೇಣುಕಾ ನಾಗಾವಿ ಸ್ವಾಗತಿಸಿದರು, ಜಯಪ್ರಕಾಶ ವಂದಿಸಿದರು.

Please follow and like us:
error